ETV Bharat / bharat

ಹುಷಾರ್​​​.... ಕೋವಿಡ್​​ ರೂಪಾಂತರಿಗಳು ಯಾವುದೇ ಸಮಯದಲ್ಲಿ ಅಟ್ಯಾಕ್​ ಮಾಡಬಹುದು: ಕೇಂದ್ರದ ಎಚ್ಚರಿಕೆ - ರಾಜ್ಯದ ಕನಿಷ್ಠ ಐದು ಕೇಂದ್ರಗಳಿಂದ 5 ಲ್ಯಾಬ್‌ಗಳು ಮತ್ತು 5 ತೃತೀಯ ಆರೈಕೆ ಆಸ್ಪತ್ರೆ

ಹೊಸ ಕೋವಿಡ್​ -19ರ ರೂಪಾಂತರಿ ವೈರಸ್​ಗಳು ಯಾವುದೇ ಸ್ಥಳ ಅಥವಾ ಯಾವುದೇ ಸಮಯದಲ್ಲಿ ನಿಮ್ಮ ಮನೆ ಬಾಗಿಲಿಗೆ ಬರಬಹುದು. ಹೊತ್ತುಗೊತ್ತಿಲ್ಲದೇ ನಿಮ್ಮ ದೇಹವನ್ನು ಒಳಹೊಕ್ಕು ನಿಮ್ಮನ್ನು ಬಲಿ ಪಡೆಯಬಹುದು ಎಂದು ಕೇಂದ್ರದ ಆರೋಗ್ಯ ಇಲಾಖೆ ಎಚ್ಚರಿಕೆ ರವಾನಿಸಿದೆ. ಮಂಗಳವಾರ ಈ ಬಗ್ಗೆ ಮಾನಿಟರಿಂಗ್​ ಮಾಡಿರುವ ಕೇಂದ್ರ ಸರ್ಕಾರ ಈ ಎಚ್ಚರಿಕೆ ನೀಡಿದೆ. ಅಲ್ಫಾ, ಬೇಟಾ, ಗಾಮಾ, ಡೆಲ್ಟಾ, ಡೆಲ್ಟಾ ಪ್ಲಸ್​​ ಗಳ ಬಗ್ಗೆ ಕೇಂದ್ರ ತೀವ್ರ ನಿಗಾ ಇಟ್ಟಿದೆ.

new-covid-mutants-can-reach-anywhere-any-time-warns-centre

author img

By

Published : Aug 10, 2021, 7:34 PM IST

ನವದೆಹಲಿ: ಹೊಸ ಕೋವಿಡ್​ 19ರ ರೂಪಾಂತರಿ ವೈರಸ್​ಗಳು ಹೊತ್ತು - ಗೊತ್ತಿಲ್ಲದೇ ಯಾವುದೇ ಸ್ಥಳ ಇರಲಿ, ಯಾವುದೇ ಪ್ರದೇಶ ಇರಲಿ ಅಷ್ಟೇ ಏಕೆ ಯಾವುದೇ ಸಮಯದಲ್ಲಿ ಮನುಷ್ಯನ ದೇಹವನ್ನು ಹೊಕ್ಕು ಹೈರಾಣು ಮಾಡಬಹುದು ಎಂದು ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ರವಾನಿಸಿದೆ.

ಕೋವಿಡ್​ ರೂಪಾಂತರಿಗಳಾದ ಆಲ್ಫಾ, ಬೇಟಾ, ಗಾಮಾ, ಡೆಲ್ಟಾ ಮತ್ತು ಡೆಲ್ಟಾ ಪ್ಲಸ್​ ತಳಿಯ ವೈರಾಣುಗಳ ಬಗ್ಗೆ ಕೇಂದ್ರ ಸರ್ಕಾರ ತೀವ್ರ ನಿಗಾ ಇಟ್ಟಿದೆ. ಈ ಬಗ್ಗೆ ಮಾತನಾಡಿರುವ ರೋಗಗಳ ರಾಷ್ಟ್ರೀಯ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ ಎಸ್​ ಕೆ ಸಿಂಗ್​, ರೂಪಾಂತರಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ. ಅದರಲ್ಲೂ ಕಪ್ಪ,​​​ B1617.3 ರೂಪಾಂತರಿ ತಳಿಗಳು ಭಾರಿ ಅಪಾಯಕಾರಿ ಆಗಿದ್ದು, ಈ ಬಗ್ಗೆ ಸಂಶೋಧನೆ ಹಾಗೂ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮುಂದುವರಿದು ಮಾತನಾಡಿರುವ ಅವರು,ವಿಶ್ವ ಆರೋಗ್ಯ ಸಂಸ್ಥೆ ನಿಯಮಾವಳಿ ಪ್ರಕಾರ, ಪ್ರತಿ ಜಿಲ್ಲೆ, ಹಳ್ಳಿಗಳ ಸೂಕ್ಷ್ಮ ಪ್ರದೇಶಗಳಿಂದ ಸ್ಯಾಂಪಲ್​ಗಳನ್ನ ಸಂಗ್ರಹಿಸಿ ಅಪಾಯಕಾರಿ ವೈರಾಣುಗಳನ್ನ ಗುರುತಿಸಲಾಗುತ್ತಿದೆ ಎಂದಿದ್ದಾರೆ.

ಸರ್ಕಾರಿ ಆರೋಗ್ಯ ಕೇಂದ್ರಗಳು ಒಂದು ನಿರ್ದಿಷ್ಟ ರೋಗ ಹಾಗೂ ಅದರ ಕಾರ್ಯಕ್ಷೇತ್ರ ಹಾಗೂ ವ್ಯಾಪಿಸುತ್ತಿರುವುದಕ್ಕೆ ಸಂಬಂಧಿಸಿದಂತೆ, ಸೆಂಟಿನೆಲ್​ ಕೇಂದ್ರಗಳನ್ನು ದೇಶಾದ್ಯಂತ ಸ್ಥಾಪಿಸಲಾಗಿದೆ. ಇವುಗಳಿಂದ ಪ್ರತಿಯೊಂದು ರಾಜ್ಯದ ಕನಿಷ್ಠ ಐದು ಕೇಂದ್ರಗಳಿಂದ 5 ಲ್ಯಾಬ್‌ಗಳು ಮತ್ತು 5 ತೃತೀಯ ಆರೈಕೆ ಆಸ್ಪತ್ರೆಗಳನ್ನು ಗುರುತಿಸಲು ಹೇಳಲಾಗಿದೆ. ಈ ಸಂಬಂಧ ಸುಮಾರು 277 ಸೆಂಟಿನೆಲ್ ಸೈಟ್‌ಗಳನ್ನು ಗುರುತಿಸಲಾಗಿದ್ದು, 8,000 ಮಾದರಿಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.