ETV Bharat / bharat

ರಕ್ಷಕನು ಇವನೇ.. ಬೆಂಕಿಯಲ್ಲಿ ಸಾಹಸ.. ಹಸುಗೂಸನ್ನು ರಕ್ಷಿಸಿದ ಕಾನ್ಸ್​ಟೇಬಲ್! - ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ಕೋಮುಗಲಭೆ

ರಾಜಸ್ಥಾನ ಪೊಲೀಸ್​ ಕಾನ್ಸ್​ಟೇಬಲ್ ನೇತ್ರೇಶ್ ಶರ್ಮಾ ಅವರು ಮಗುವೊಂದನ್ನು ರಕ್ಷಿಸುತ್ತಿರುವ ಫೋಟೋವನ್ನು ಐಪಿಎಸ್ ಅಧಿಕಾರಿ ಸುಕೀರ್ತಿ ಮಾಧವ ಮಿಶ್ರಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅದೇ ಫೋಟೋ ಸಾಕಷ್ಟು ವೈರಲ್ ಆಗಿದೆ..

NETRESH SHARMA A CONSTABLE SAVED A CHILD FROM BURNING HOUSE IN KARAULI RAJASTHAN
ಬೆಂಕಿಯಲ್ಲಿ ಸಾಹಸ.. ಹಸುಗೂಸನ್ನು ರಕ್ಷಿಸಿದ ಕಾನ್ಸ್​ಟೇಬಲ್!
author img

By

Published : Apr 5, 2022, 12:52 PM IST

ಕರೌಲಿ, ರಾಜಸ್ಥಾನ : ಅದು ಏಪ್ರಿಲ್ 2.. ರಾಜಸ್ಥಾನದ ಕರೌಲಿಯಲ್ಲಿ ಕೋಮು ಹಿಂಸಾಚಾರ ಆವರಿಸಿತ್ತು. ಕೋಮು ದಳ್ಳುರಿಗೆ ಸಾಕಷ್ಟು ಆಸ್ತಿ-ಪಾಸ್ತಿಗೆ ಹಾನಿಯಾಗಿತ್ತು. ಗಲ್ಲಿಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ಅಂಗಡಿಗಳು, ವಾಹನಗಳು, ಸುಟ್ಟು ಭಸ್ಮವಾಗುತ್ತಿದ್ದವು. ಈ ವೇಳೆ ಬೆಂಕಿಗೆ ಆಹುತಿಯಾಗುತ್ತಿದ್ದ ಎರಡು ಅಂಗಡಿಗಳ ಮಧ್ಯೆ ಮನೆಯಲ್ಲಿದ್ದ ಪುಟ್ಟ ಕಂದಮ್ಮನನ್ನು ಪೊಲೀಸ್ ಕಾನ್ಸ್​ಟೇಬಲ್‌ವೊಬ್ಬರು ರಕ್ಷಿಸಿ ಸಾಹಸ ಮೆರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದು, ಪೊಲೀಸ್ ಕಾನ್ಸ್​ಟೇಬಲ್ ಸಾಹಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುಗಾದಿ ಹಬ್ಬದ ಹೊಸ ವರ್ಷಾಚರಣೆಯ ಅಂಗವಾಗಿ ಕರೌಲಿಯ ಮುಸ್ಲಿಂ ಪ್ರಾಬಲ್ಯದ ಪ್ರದೇಶವೊಂದರಲ್ಲಿ ಬೈಕ್ ರ್‍ಯಾಲಿಯೊಂದು ಹಾದು ಹೋಗುತ್ತಿತ್ತು. ಈ ವೇಳೆ ಕಲ್ಲು ತೂರಾಟ ನಡೆದು, ನಂತರದ ಕೆಲವೇ ಕ್ಷಣಗಳಲ್ಲಿ ಕೋಮು ಹಿಂಸೆ ಆರಂಭವಾಯಿತು. ಕೋಮು ಹಿಂಸೆಯ ಕಾರಣದಿಂದ ಅಂಗಡಿ-ಮುಂಗಟ್ಟುಗಳಿಗೆ ಬೆಂಕಿ ಇಡಲಾಗಿತ್ತು. ಈ ವೇಳೆ ಹೊತ್ತಿ ಉರಿಯುತ್ತಿದ್ದ ಗಲ್ಲಿಗಳಲ್ಲೇ ಸಾಹಸ ಪ್ರದರ್ಶಿಸಿದ ಕಾನ್ಸ್​​ಟೇಬಲ್ ನೇತ್ರೇಶ್ ಶರ್ಮಾ ಎಂಬುವರು ಮಗುವೊಂದನ್ನು ರಕ್ಷಣೆ ಮಾಡಿದ್ದಾರೆ.

NETRESH SHARMA A CONSTABLE SAVED A CHILD FROM BURNING HOUSE IN KARAULI RAJASTHAN
ಕಾನ್ಸ್​​ಟೇಬಲ್ ನೇತ್ರೇಶ್ ಶರ್ಮಾ

'ನನ್ನ ಜವಾಬ್ದಾರಿ ಅಷ್ಟೇ..': ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನ್ಸ್​​ಟೇಬಲ್ ನೇತ್ರೇಶ್ ಶರ್ಮಾ, 'ರ್‍ಯಾಲಿ ವೇಳೆ ಯಾರೋ ಕಲ್ಲು ತೂರಾಟ ಮಾಡಿದರು. ಇದೇ ವೇಳೆ ರಸ್ತೆಯಲ್ಲಿ ಗಾಯಗೊಂಡ ಇಬ್ಬರು ವ್ಯಕ್ತಿಗಳು ಕಾಣಿಸಿದರು. ಅವರು ಆಸ್ಪತ್ರೆಗೆ ಹೋಗಬೇಕೆಂದು ಕೇಳಿದಾಗ ನಾನು ಸಹಕರಿಸಿದೆ. ಅದೇ ವೇಳೆ ಎರಡು ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡಿತು.

ಆ ಎರಡು ಅಂಗಡಿಗಳ ಮಧ್ಯೆ ಒಂದು ಮನೆಯಿರುವುದು ನನ್ನ ಗಮನಕ್ಕೆ ಬಂತು. ಆ ಮನೆಯಲ್ಲಿ ಮಹಿಳೆಯರು ಸಿಲುಕಿಕೊಂಡಿದ್ದು, ಹಸುಗೂಸನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ನನ್ನನ್ನು ನೋಡಿದ ತಕ್ಷಣವೇ 'ಕಾಪಾಡಿ' ಎಂದು ಕೂಗಿಕೊಂಡರು. ಅಲ್ಲಿಗೆ ತೆರಳಿದ ನಾನು ಮಗುವನ್ನು ತೆಗೆದುಕೊಂಡು ನನ್ನ ಹಿಂದೆಯೇ ಬರುವಂತೆ ಅವರಿಗೆ ಹೇಳಿದೆ. ಮಗವನ್ನು ಹೊರಗೆ ತೆಗೆದುಕೊಂಡು ಬಂದು ಅವರಿಗೆ ನೀಡಿದೆ. ಇದು ನನ್ನ ಜವಾಬ್ದಾರಿ ಅಷ್ಟೇ' ಎಂದಿದ್ದಾರೆ.

  • "तम में प्रकाश हूँ,
    कठिन वक़्त की आस हूँ।"
    So proud of constable Netresh Sharma of Rajasthan Police for saving a precious life. This picture is in deed worth a thousand words.. pic.twitter.com/U2DMRE3EpR

    — Sukirti Madhav Mishra (@SukirtiMadhav) April 4, 2022 " class="align-text-top noRightClick twitterSection" data=" ">

ನೇತ್ರೇಶ್ ಶರ್ಮಾ ಸಾಹಸ ಕಾರ್ಯದ ಫೋಟೋವನ್ನು ಐಪಿಎಸ್ ಅಧಿಕಾರಿ ಸುಕೀರ್ತಿ ಮಾಧವ ಮಿಶ್ರಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ರಾಜಸ್ಥಾನ್ ಪೊಲೀಸ್​ ನೇತ್ರೇಶ್ ಶರ್ಮಾ ಅಮೂಲ್ಯ ಜೀವವನ್ನು ಉಳಿಸಿದ್ದಕ್ಕೆ ನಮಗೆ ಹೆಮ್ಮೆಯಿದೆ. ಒಂದು ಚಿತ್ರವು ವರ್ಣಿಸಲು ಸಾಧ್ಯವಾಗದೇ ಇರುವುದನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗಹ್ಲೋಟ್ ಕೂಡ ನೇತ್ರೇಶ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು, ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:ರಾಜಸ್ಥಾನದ ಕರೌಲಿಯಲ್ಲಿ ಕೋಮು ಹಿಂಸೆ: ಪ್ರಮುಖ ಆರೋಪಿ ಮತ್ಲೂಮ್ ಅಹ್ಮದ್‌ಗಾಗಿ ಶೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.