ETV Bharat / bharat

ಕೆಮ್ಮಿನ ಸಿರಪ್​​ ಬದಲಿಗೆ ಹೇನಿನ ಔಷಧಿ ನೀಡಿದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ - State run hospital gives lice medicine to patient

ಆಸ್ಪತ್ರೆಗೆ ಬಂದಿದ್ದ ವೃದ್ಧೆಯೋರ್ವಳಿಗೆ ಕೆಮ್ಮಿನ ಸಿರಪ್​ ಬದಲು ಹೇನಿನ ಔಷಧಿ ನೀಡಿರುವ ಘಟನೆ ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

Shahdol lice medicine given to patient
Shahdol lice medicine given to patient
author img

By

Published : Apr 21, 2022, 4:15 PM IST

ಶಾಹದೋಲ್​(ಮಧ್ಯಪ್ರದೇಶ): ಸರ್ಕಾರಿ ಆಸ್ಪತ್ರೆಗಳಲ್ಲಿ ಸದಾ ಒಂದಿಲ್ಲೊಂದು ಯಡವಟ್ಟು ನಡೆಯುತ್ತಲೇ ಇರ್ತವೆ. ಇದೀಗ ಅಂತಹ ಹೊಸ ಘಟನೆಯೊಂದು ಮಧ್ಯಪ್ರದೇಶದ ಶಾಹದೋಲ್​​ ಆಸ್ಪತ್ರೆಯಲ್ಲಿ ನಡೆದಿದೆ. ವಯಸ್ಸಾದ ಮಹಿಳೆಯೋರ್ವಳಿಗೆ ಕೆಮ್ಮಿನ ಸಿರಪ್ ಬದಲಿಗೆ ಹೇನಿನ ಔಷಧಿ ನೀಡಲಾಗಿದೆ.

ಶಾಹದೋಲ್ ಜಿಲ್ಲೆಯ ಬುರ್ಹಾಲ್​ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಘಟನೆ ನಡೆದಿದೆ. ಆರೋಗ್ಯದಲ್ಲಿ ಏರುಪೇರು ಕಂಡು ಬಂದಿರುವ ರಾಜ್​ ಕುಮಾರಿ ಜೈಸ್ವಾಲ್​(65) ಎಂಬಾಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಆಸ್ಪತ್ರೆ ಸಿಬ್ಬಂದಿ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಅಹಮದಾಬಾದ್‌ಗೆ ಬಂದಿಳಿದ ಬ್ರಿಟನ್ ಪ್ರಧಾನಿ; ಗಾಂಧಿ ಆಶ್ರಮದಲ್ಲಿ ಚರಕ ತಿರುಗಿಸಿ ನೂಲು ತೆಗೆಯಲು ಪ್ರಯತ್ನ

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವೈದ್ಯಾಧಿಕಾರಿ ಸಚಿನ್ ಕರ್ಖೂರ್​, ಇಬ್ಬರು ಮಹಿಳೆಯರು ಆಸ್ಪತ್ರೆಗೆ ಒಟ್ಟಿಗೆ ಬಂದಿದ್ದರು. ಈ ವೇಳೆ ವೃದ್ಧೆ ಇನ್ನೊಬ್ಬ ಯುವತಿಗೆ ಬರೆದುಕೊಟ್ಟ ಔಷಧಿ ತೆಗೆದುಕೊಂಡು ಮನೆಗೆ ಹೋಗಿದ್ದಾಳೆ. ಇದರಲ್ಲಿ ವೈದ್ಯರು ಅಥವಾ ಸಮುದಾಯ ಕೇಂದ್ರದ ಸಿಬ್ಬಂದಿಗಳು ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ ಎಂದಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.