ಮುಂಗೇಲಿ (ಛತ್ತೀಸ್‌ಗಢ): ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು (make India a Vishwa guru) ಸಮನ್ವಯದಿಂದ ಒಟ್ಟಾಗಿ ಮುನ್ನಡೆಯುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಹೇಳಿದ್ದಾರೆ.
-
#WATCH | We don't have to convert anyone but teach how to live. We were born in the land of Bharat to give such a lesson to the whole world. Our sect makes good human beings without changing anyone’s worship system: RSS Chief Mohan Bhagwat at a Ghosh Shivir, in Chhattisgarh pic.twitter.com/bgynm5gNVX
— ANI (@ANI) November 19, 2021 " class="align-text-top noRightClick twitterSection" data="
">#WATCH | We don't have to convert anyone but teach how to live. We were born in the land of Bharat to give such a lesson to the whole world. Our sect makes good human beings without changing anyone’s worship system: RSS Chief Mohan Bhagwat at a Ghosh Shivir, in Chhattisgarh pic.twitter.com/bgynm5gNVX
— ANI (@ANI) November 19, 2021#WATCH | We don't have to convert anyone but teach how to live. We were born in the land of Bharat to give such a lesson to the whole world. Our sect makes good human beings without changing anyone’s worship system: RSS Chief Mohan Bhagwat at a Ghosh Shivir, in Chhattisgarh pic.twitter.com/bgynm5gNVX
— ANI (@ANI) November 19, 2021
ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಘೋಷ್ ಶಿಬಿರ (ಸಂಗೀತ ಶಿಬಿರ)ದಲ್ಲಿ ಮಾತನಾಡಿದ ಮೋಹನ್ ಭಾಗವತ್, "ನಾವು ಯಾರನ್ನೂ ಮತಾಂತರಗೊಳಿಸಬೇಕಾಗಿಲ್ಲ. ಆದರೆ, ಹೇಗೆ ಬದುಕಬೇಕೆಂದು ಕಲಿಸಬೇಕು. ನಾವು ಇಡೀ ಜಗತ್ತಿಗೆ ಅಂತಹ ಪಾಠವನ್ನು ನೀಡಲು ಭಾರತ ದೇಶದಲ್ಲಿ ಹುಟ್ಟಿದ್ದೇವೆ. ಯಾರ ಆರಾಧನಾ ವ್ಯವಸ್ಥೆಯನ್ನು ಬದಲಾಯಿಸದೇ ನಮ್ಮ ಪಂಥವು ಜನರನ್ನು ಒಳ್ಳೆಯ ಮನುಷ್ಯರನ್ನಾಗಿ ಮಾಡುತ್ತದೆ ಎಂದರು.
ಇದನ್ನೂ ಓದಿ: ಹೋರಾಡದೆ, ಶಸ್ತ್ರಾಸ್ತ್ರ ಹಿಡಿಯದೆ ಸ್ವಾತಂತ್ರ್ಯಕ್ಕೆ ಕೊಡುಗೆ ಕೊಟ್ಟ ಧೀರ ಅಮರ್ ಚಂದ್ರ ಬಾಟಿಯಾ..
ರಾಗಕ್ಕೆ ಭಂಗ ತರಲು ಪ್ರಯತ್ನಿಸುವವರನ್ನು ದೇಶದ ಲಯದಿಂದ ಸರಿಪಡಿಸಲಾಗುವುದು, ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಸಮನ್ವಯದಿಂದ ಒಟ್ಟಾಗಿ ಮುನ್ನಡೆಯಬೇಕಾಗಿದೆ. ಇಡೀ ಜಗತ್ತೇ ಒಂದು ಕುಟುಂಬ. ಇಡೀ ಜಗತ್ತೇ ನಮ್ಮ ಕುಟುಂಬ ಎಂದು ನಂಬಿರುವವರು ನಾವು. ಆ ಸತ್ಯವನ್ನು ನಮ್ಮ ನಡವಳಿಕೆಯಿಂದ ಜಗತ್ತಿಗೆ ನೀಡಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ಹೇಳಿದ್ದಾರೆ.