ETV Bharat / bharat

ಉಪ ರಾಷ್ಟ್ರಪತಿ ಚುನಾವಣೆ: ಎನ್​ಡಿಎ ಅಭ್ಯರ್ಥಿ ಜಗದೀಪ್​ ಧನಕರ್​ ನಾಮಪತ್ರ ಸಲ್ಲಿಕೆ

ರಾಷ್ಟ್ರಪತಿ ಚುನಾವಣೆ ಮಧ್ಯೆಯೇ ಉಪರಾಷ್ಟ್ರಪತಿ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿವೆ. ಎನ್​ಡಿಎ ಅಭ್ಯರ್ಥಿಯಾಗಿ ರಾಜ್ಯಪಾಲ ಜಗದೀಪ್​ ಧನಕರ್​ ಅವರು ಇಂದು ನಾಮಪತ್ರ ಸಲ್ಲಿಸಿದರು.

ಎನ್​ಡಿಎ ಅಭ್ಯರ್ಥಿ ಜಗದೀಪ್​ ಧನಕರ್​ ನಾಮಪತ್ರ ಸಲ್ಲಿಕೆ

author img

By

Published : Jul 18, 2022, 12:58 PM IST

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಇಂದು ನಾಮಪತ್ರ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಮತ್ತಿತರ ನಾಯಕರ ನೇತೃತ್ವದಲ್ಲಿ ಧನಕರ್​ ಅವರು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.

  • #WATCH | Delhi: NDA candidate Jagdeep Dhankhar files his nomination for the Vice Presidential elections in the presence of PM Narendra Modi.

    (Source: DD) pic.twitter.com/jyUOddtxOe

    — ANI (@ANI) July 18, 2022 " class="align-text-top noRightClick twitterSection" data=" ">

ನೂತನ ಉಪರಾಷ್ಟ್ರಪತಿ ಆಯ್ಕೆಗೆ ಆಗಸ್ಟ್​​ 6ರಂದು ಚುನಾವಣೆ ನಡೆಯಲಿದೆ. ಎನ್​ಡಿಎ ಪರವಾಗಿ ಜಗದೀಪ್ ಧನಕರ್​ ಮತ್ತು ವಿಪಕ್ಷಗಳ ಕಡೆಯಿಂದ ಕನ್ನಡತಿ ಮಾರ್ಗರೇಟ್ ಆಳ್ವಾ ಅವರು ಅಭ್ಯರ್ಥಿಯಾಗಿದ್ದಾರೆ. ಇವರು ಗೋವಾದ ಮಾಜಿ ರಾಜ್ಯಪಾಲರಾಗಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳು ಜುಲೈ 19ರ ವರೆಗೆ ನಾಮಪತ್ರ ಸಲ್ಲಿಸಬಹುದು. ಜುಲೈ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜುಲೈ 22ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಮತ್ತು ಆಗಸ್ಟ್ 6 ರಂದು ಮತದಾನ ನಡೆಯಲಿದೆ. ಅಂದು ಸಂಜೆಯೇ ಫಲಿತಾಂಶ ಬರಲಿದೆ.

ಇದನ್ನೂ ಓದಿ: Interesting Facts: ರಾಷ್ಟ್ರಪತಿ ಚುನಾವಣೆಯಲ್ಲಿ ಇವಿಎಂ ಏಕೆ ಬಳಸಲ್ಲ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.