ನವದೆಹಲಿ: ಈಗಾಗಲೇ ಕೋವಿಡ್ ಟೂಲ್ಕಿಟ್ ವಿಚಾರದಲ್ಲಿ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಹೇಳಿಕೆ ನೀಡಿ ಸಂಕಷ್ಟ ಎದುರಿಸುತ್ತಿರುವ ಟ್ವಿಟರ್ ಈಗ ಮತ್ತೊಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ.
ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಮತ್ತು ಪೊಕ್ಸೊ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಟ್ವಿಟರ್ ವಿರುದ್ಧ ದೂರು ನೀಡಿದೆ. ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಟ್ವಿಟರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ತಿರುಚಿದ ಮೀಡಿಯಾ: ದೆಹಲಿ ಪೊಲೀಸರ ಬೆದರಿಕೆ ತಂತ್ರಗಳಿಗೆ ಚಿಂತೆಗೀಡಾದ twitter!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕನುಂಗೂ, ಮಕ್ಕಳಿಗೆ ಟ್ವಿಟರ್ ಸುರಕ್ಷಿತವಲ್ಲ. ಹೀಗಾಗಿ ಮಕ್ಕಳಿಗೆ ಟ್ವಿಟರ್‌ಗೆ ಲಭ್ಯತೆ ನೀಡಬಾರದು. ನಮ್ಮ ಆಯೋಗ ವಿಚಾರಣೆ ನಡೆಸಿದ ವೇಳೆ ಈ ವಿಚಾರದಲ್ಲಿ ಟ್ವಿಟರ್ ಸುಳ್ಳು ಹೇಳಿದೆ, ತಪ್ಪು ಮಾಹಿತಿ ನೀಡಿದೆ. ಪೊಕ್ಸೊ ಕಾಯ್ದೆಯಡಿ ಬರುವ 11, 15, 19 ಸೆಕ್ಷನ್‌ಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಕಾನೂನಿನ ಚೌಕಟ್ಟು ಹೇಗಿರಬೇಕು ಅನ್ನೋದನ್ನು ನಿರ್ಧರಿಸುವುದು ಟ್ವಿಟರ್ ಕೆಲಸವಲ್ಲ: ಕೇಂದ್ರ ಸರ್ಕಾರ
ಬಿಜೆಪಿ-ಕಾಂಗ್ರೆಸ್ ನಡುವಿನ ಕೋವಿಡ್ ಟೂಲ್ಕಿಟ್ ವಿಚಾರದಲ್ಲಿ ತಿರುಚಿದ ಮೀಡಿಯಾ ಎಂದು ಲೇಬಲ್ ಮಾಡಿ ಕೇಂದ್ರ ಸರ್ಕಾರವನ್ನು ಟ್ವಿಟರ್ ಎದುರು ಹಾಕಿಕೊಂಡಿತ್ತು. ಅಲ್ಲದೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಡಿಜಿಟಲ್ ನಿಯಮಗಳನ್ನು ಶೀಘ್ರವೇ ಅಳವಡಿಸಿಕೊಳ್ಳಲು ಟ್ವಿಟರ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಸೂಚಿಸಲಾಗಿದೆ.