ETV Bharat / bharat

ಎನ್‌ಸಿಪಿ ಸಂಸದ ಮೊಹಮ್ಮದ್ ಫೈಜಲ್ ಅನರ್ಹತೆ ರದ್ದು.. ಅಧಿಸೂಚನೆ ಹೊರಡಿಸಿದ ಲೋಕಸಭೆ

ಸುಪ್ರೀಂ ಕೋರ್ಟ್‌ನ ವಿಚಾರಣೆಗೂ ಮನ್ನವೇ, ಲೋಕಸಭೆಯ ಸೆಕ್ರೆಟರಿಯೇಟ್ ಎನ್‌ಸಿಪಿ ನಾಯಕ ಮೊಹಮ್ಮದ್ ಫೈಜಲ್ ಅವರ ಸದಸ್ಯತ್ವವನ್ನು ಸದನಕ್ಕೆ ಮರುಸ್ಥಾಪಿಸಲು ಲೋಕಸಭೆ ಪ್ರಕಟಣೆ ಹೊರಡಿಸಿದೆ.

Mohammad Faizal
ಎನ್‌ಸಿಪಿ ನಾಯಕ ಮೊಹಮ್ಮದ್ ಫೈಜಲ್
author img

By

Published : Mar 29, 2023, 5:17 PM IST

Updated : Mar 29, 2023, 5:32 PM IST

ನವದೆಹಲಿ: ಎನ್‌ಸಿಪಿ ನಾಯಕ ಮೊಹಮ್ಮದ್ ಫೈಝಲ್ ಅವರ ಸಂಸತ್​ ಸ್ಥಾನದ ಅನರ್ಹತೆಯನ್ನು ಬುಧವಾರ ಹಿಂಪಡೆಯಲಾಗಿದೆ ಎಂದು ಲೋಕಸಭೆ ಅಧಿಸೂಚನೆ ಹೊರಡಿಸಿದೆ. ಲೋಕಸಭೆಗೆ ಹಾಜರಾಗಲು ಅನುಮತಿ ಕೋರಿ ಲಕ್ಷದ್ವೀಪ ಸಂಸದ ಫೈಝಲ್ ಅವರು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬರುವ ಮುನ್ನವೇ ಅವರ ಅನರ್ಹತೆಯನ್ನು ಲೋಕಸಭೆ ಹಿಂಪಡೆದಿದೆ.

''ಕೇರಳದ ಹೈಕೋರ್ಟಿನ 2023ರ ಜ.25ರ ಆದೇಶದ ದೃಷ್ಟಿಯಿಂದ, ಮೊಹಮ್ಮದ್ ಫೈಝಲ್ ಪಿಪಿ ಅವರ ಅನರ್ಹತೆಯನ್ನು ರದ್ದುಗೊಳಿಸಲಾಗಿದೆ. ಗೆಜೆಟ್ ಅಧಿಸೂಚನೆ ಸಂಖ್ಯೆ- 21/4(1)/2023/TO(B) 13ನೇ ಜನವರಿ, 2023ರಲ್ಲಿ 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ 8ನೇ ಪರಿಚ್ಛೇದದೊಂದಿಗೆ ಭಾರತದ ಸಂವಿಧಾನದ 102 (1) (ಇ) ವಿಧಿಗಳ ನಿಬಂಧನೆಗಳು ಮುಂದಿನ ನ್ಯಾಯಾಂಗ ಘೋಷಣೆಗಳಿಗೆ ಒಳಪಟ್ಟು, ಸಂಸದರ ಅನರ್ಹತೆಯನ್ನು ರದ್ದುಗೊಳಿಸಲಾಗಿದೆ" ಎಂದು ಲೋಕಸಭೆ ಇಂದು ಅಧಿಸೂಚನೆ ಹೊರಡಿಸಿದೆ.

ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದೇನು?: ಲೋಕಸಭೆಗೆ ಹಾಜರಾಗಲು ಅನುಮತಿ ಕೋರಿ ಲಕ್ಷದ್ವೀಪ ಸಂಸದರು ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡುವ ಮುನ್ನವೇ ಅನರ್ಹತೆಯನ್ನು ರದ್ದುಗೊಳಿಸಲಾಗಿದೆ. ಹೈಕೋರ್ಟ್​ನಲ್ಲಿ ಈ ಶಿಕ್ಷೆಗೆ ತಡೆ ನೀಡಲಾಗಿದೆ. ಫೈಝಲ್ ತಮ್ಮ ಅಪರಾಧ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ನಂತರವೂ ತಮ್ಮನ್ನು ಅನರ್ಹಗೊಳಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ಲೋಕಸಭೆಯ ಸಚಿವಾಲಯದ ನಿರಾಕರಣೆಯನ್ನು ಪ್ರಶ್ನಿಸಿ ಇತ್ತೀಚೆಗೆ ಅರ್ಜಿಯನ್ನು ಸಲ್ಲಿಸಿದ್ದರು.

ಈ ವಿಷಯವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರ ಮುಂದೆ ಪ್ರಸ್ತಾಪಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ತುರ್ತು ಪಟ್ಟಿಯಲ್ಲಿ ವಿಚಾರಣೆಗೆ ಕೋರಿದರು. ಫೈಝಲ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿರುವ ಕೇರಳ ಹೈಕೋರ್ಟ್‌ನ ತೀರ್ಪನ್ನು ತಡೆಯಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸಂಸದರ ಅನರ್ಹತೆಯನ್ನು ಹಿಂತೆಗೆದುಕೊಳ್ಳಲು ಲೋಕಸಭೆ ಸಚಿವಾಲಯವು ಒಲವು ತೋರಿಸಿಲ್ಲ ಎಂದು ಸಿಂಘ್ವಿ ಹೇಳಿದರು.

ಶಿಕ್ಷೆಯನ್ನು ರದ್ದುಗೊಳಿಸಿದ್ದ ಹೈಕೋರ್ಟ್: ಶಿಕ್ಷೆಯನ್ನು ರದ್ದುಗೊಳಿಸಿದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದರೂ, ಅವರಿಗೂ ಇನ್ನೂ ಸದನಕ್ಕೆ ಹಾಜರಾಗಲು ಅನುಮತಿ ನೀಡಲಾಗಿಲ್ಲ ಎಂದು ಸಿಂಘ್ವಿ ಹೇಳಿದರು. ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ವಿಷಯವನ್ನು ಪಟ್ಟಿ ಮಾಡಲು ಒಪ್ಪಿಕೊಂಡರು. 2023ರ ಜನವರಿ 11ರಂದು, ಲಕ್ಷದ್ವೀಪದ ಸೆಷನ್ಸ್ ನ್ಯಾಯಾಲಯವು 2009ರ ಘಟನೆಗೆ ಸಂಬಂಧಿಸಿದ ಕೊಲೆ ಯತ್ನ ಪ್ರಕರಣದಲ್ಲಿ ಎನ್‌ಸಿಪಿ ಸಂಸದ ಮತ್ತು ಇತರ ಮೂವರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಎರಡು ಬಾರಿ ಸಂಸದರಾಗಿರುವ ಫೈಝಲ್: ಐಲ್ಯಾಂಡ್​ನಿಂದ ಎರಡು ಬಾರಿ ಸಂಸದರಾಗಿರುವ ಫೈಝಲ್ ಅವರು ಸದನದ ಸದಸ್ಯತ್ವವನ್ನು ಕಳೆದುಕೊಂಡರು. ಭಾರತೀಯ ಚುನಾವಣಾ ಆಯೋಗವು ಅವರ ಕ್ಷೇತ್ರಕ್ಕೆ ಉಪ ಚುನಾವಣೆಯನ್ನು ಘೋಷಿಸಿತ್ತು. ಜ.25ರಂದು ಕೇರಳ ಹೈಕೋರ್ಟ್​ನ ಏಕ ಪೀಠ ಫೈಝಲ್ ಶಿಕ್ಷೆಯನ್ನು ಅಮಾನತುಗೊಳಿಸಿತ್ತು. ಎನ್‌ಸಿಪಿ ನಾಯಕನ ಶಿಕ್ಷೆಯನ್ನು ಅಮಾನತುಗೊಳಿಸುವಾಗ, ಹೈಕೋರ್ಟಿನ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಉಪಚುನಾವಣೆಯ ವ್ಯರ್ಥ ವೆಚ್ಚದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ವಿಶೇಷವಾಗಿ ಲೋಕಸಭೆಯ ಅವಧಿಯು ಒಂದೂವರೆ ವರ್ಷಗಳಲ್ಲಿ ಮುಕ್ತಾಯಗೊಳ್ಳಲಿದೆ. ರಾಹುಲ್ ಗಾಂಧಿ ಅವರ ಅನರ್ಹತೆಗೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವ ಪ್ರತಿಪಕ್ಷಗಳ ಮೇಲಿನ ವಿವಾದದ ನಡುವೆಯೇ, ಎನ್‌ಸಿಪಿ ನಾಯಕ ಮೊಹಮ್ಮದ್ ಫೈಜಲ್ ಅವರ ಸಂಸತ್ತಿನ ಅನರ್ಹತೆಯನ್ನು ಹಿಂಪಡೆಯಲಾಗಿದೆ.

ಇದನ್ನೂ ಓದಿ: ವಯನಾಡು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲು ಆತುರವಿಲ್ಲ: ಚುನಾವಣಾ ಆಯೋಗ

Last Updated : Mar 29, 2023, 5:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.