ETV Bharat / bharat

ಕಂಗನಾ ಭೇಟಿ ಮಾಡುವ ರಾಜ್ಯಪಾಲರಿಗೆ ರೈತರ ಭೇಟಿಗೆ ಸಮಯವಿಲ್ಲ; ಶರದ್ ಪವಾರ್ ವಾಗ್ದಾಳಿ - ಮೋದಿ ವರ್ಸಸ್​ ಎನ್​ಸಿಪಿ

ಕಳೆದ 60 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ, ಪ್ರಧಾನಿ ಮೋದಿ ಅವರ ಬಗ್ಗೆ ಮಾಹಿತಿ ಪಡೆದುಕೊಂಡಿಲ್ಲ. ಈ ರೈತರು ಪಾಕಿಸ್ತಾನಕ್ಕೆ ಸೇರಿದವರಾ? ಎಂದು ಶರದ್ ಪವಾರ್ ಪ್ರಶ್ನೆ ಮಾಡಿದ್ದಾರೆ.

NCP chief Sharad Pawar
NCP chief Sharad Pawar
author img

By

Published : Jan 25, 2021, 4:56 PM IST

Updated : Jan 25, 2021, 5:03 PM IST

ಮುಂಬೈ: ಮಹಾರಾಷ್ಟ್ರ ರಾಜ್ಯಪಾಲರ ವಿರುದ್ಧ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ಬಾಲಿವುಡ್ ನಟಿ ಕಂಗನಾ ರಣಾವತ್ ಭೇಟಿಗೆ ನಿಮಗೆ ಸಮಯವಿದೆ, ಆದರೆ ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿ ಮಾತನಾಡುವಷ್ಟು ಸಮಯಾವಕಾಶ ನಿಮ್ಮಲ್ಲಿ ಇಲ್ಲ ಎಂದಿದ್ದಾರೆ.

ಕೇಂದ್ರದ ಕೃಷಿ ಕಾನೂನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ಮುಂಬೈನಲ್ಲಿ ಮಾತನಾಡಿದ ಶರದ್​ ಪವಾರ್​, ಕಳೆದ 60 ದಿನಗಳಿಂದ ಪಂಜಾಬ್​, ಹರಿಯಾಣ ಹಾಗೂ ಉತ್ತರ ಪ್ರದೇಶ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ಇದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರಾ? ಈ ರೈತರು ಪಾಕಿಸ್ತಾನಕ್ಕೆ ಸೇರಿದವರಾ? ಎಂದು ಎನ್​ಸಿಪಿ ಮುಖ್ಯಸ್ಥ ವಾಗ್ದಾಳಿ ನಡೆಸಿದರು.

ಹರೇ ಕೃಷ್ಣ ಹರೇ ರಾಮ್​, ತೃಣಮೂಲ ಘೋರ್ ಘೋರ್: ಮೋದಿ ವಿರುದ್ಧ ದೀದಿ ವಾಗ್ದಾಳಿ!

ಮಹಾರಾಷ್ಟ್ರ ಗವರ್ನರ್​ಗೆ ಬಾಲಿವುಡ್ ನಟಿ ಕಂಗನಾ ರಣಾವತ್​ ಅವರನ್ನು ಭೇಟಿ ಮಾಡಲು ಅವಕಾಶವಿದೆ. ಆದರೆ ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಿ ಮಾತನಾಡುವಷ್ಟು ಸಮಯವಿಲ್ಲ. ಈ ಹಿಂದೆ ಇಂತಹ ರಾಜ್ಯಪಾಲರನ್ನು ಮಹಾರಾಷ್ಟ್ರ ನೋಡಿಲ್ಲ ಎಂದರು.

Last Updated : Jan 25, 2021, 5:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.