ಪುಣೆ : ಅಕ್ಟೋಬರ್ 2ರಂದು NCB ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ನ ಬಂಧಿಸಿತ್ತು. ನಂತರ ಆರ್ಯನ್ ಜತೆ ಸೆಲ್ಫಿ ಕ್ಲಿಕ್ಕಿಸಿ ವೈರಲ್ ಆಗಿದ್ದ ಖಾಸಗಿ ಡಿಟೆಕ್ಟಿವ್ ಎಂದು ಹೇಳಿಕೊಂಡಿರುವ ಕಿರಣ್ ಗೋಸಾವಿ ವಿರುದ್ಧ ಪುಣೆ ನಗರ ಪೊಲೀಸರು ಲುಕ್‌ಔಟ್ ನೋಟಿಸ್ (LOC) ಹೊರಡಿಸಿದ್ದಾರೆ.
ಮುಂಬೈ ಕರಾವಳಿಯಲ್ಲಿ ಐಷಾರಾಮಿ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಈತ ದೇಶದಿಂದ ಪಲಾಯನ ಮಾಡುವುದನ್ನು ತಡೆಯಲು ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಐಷಾರಾಮಿ ಹಡಗು ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತ ಎನ್‌ಸಿಬಿ ಗೋಸಾವಿಯನ್ನು 'ಸ್ವತಂತ್ರ ಸಾಕ್ಷಿ'(independent witnesses) ಎಂದು ಉಲ್ಲೇಖಿಸಲಾಗಿದೆ. ಆತ 2018ರ ಪುಣೆ ನಗರ ಪೋಲಿಸ್ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣದಲ್ಲಿ ವಾಂಟೆಡ್ ಆರೋಪಿಯಾಗಿದ್ದಾನೆ ಎಂದು ಹೇಳಲಾಗಿದೆ.
ಪಾಲ್ಘರ್‌ನ ಈಧವಾನ್ ಪ್ರದೇಶದಲ್ಲಿ ಇಬ್ಬರು ಯುವಕರನ್ನು ವಂಚಿಸಿದ ಆರೋಪದ ಮೇಲೆ ಕಿರಣ್ ಗೋಸಾವಿ ವಿರುದ್ಧ ಕೇಲ್ವಾದ ಸಾಗರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ ಕಿರಣ್ ಗೋಸಾವಿ ಯುವಕರನ್ನು ವಿದೇಶಕ್ಕೆ ಕಳುಹಿಸುವ ನೆಪದಲ್ಲಿ 1.5 ಲಕ್ಷ ರೂ. ವಂಚಿಸಿದ್ದ ಎನ್ನಲಾಗಿದೆ. ತನಗೆ ನೀಡಿದ ಟಿಕೆಟ್ ಮತ್ತು ವೀಸಾ ನಕಲಿ ಎಂದು ಯುವಕರು ವಿಮಾನ ನಿಲ್ದಾಣದಲ್ಲಿ ಅರಿತುಕೊಂಡ ಕೂಡಲೇ ದೂರು ದಾಖಲಿಸಲಾಗಿದೆ.
ಇದಲ್ಲದೇ, ಕಿರಣ್ ಗೋಸಾವಿ 2018ರ ಪ್ರತ್ಯೇಕ ಪ್ರಕರಣದಲ್ಲಿ ಪುಣೆ ಪೊಲೀಸರು ವಂಚನೆ ಆರೋಪದ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ. ಒಂದು ವರದಿಯ ಪ್ರಕಾರ, ಗೋಸಾವಿ ಕೆಪಿಜಿ ಡ್ರೀಮ್ಜ್ ಸೊಲ್ಯೂಷನ್ಸ್ ಹೆಸರಿನ ಕಂಪನಿಯನ್ನು ನಡೆಸುತ್ತಿದ್ದು, ಇದು ವಿವಿಧ ಕ್ಷೇತ್ರಗಳ ಆಕಾಂಕ್ಷಿಗಳಿಗೆ ವಿದೇಶದಲ್ಲಿ ಉದ್ಯೋಗ ನೀಡುವ ಭರವಸೆ ನೀಡುತ್ತದಂತೆ. ಕಂಪನಿಯು ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಿತ್ತಂತೆ.
2018ರಲ್ಲಿ ಮಲೇಷ್ಯಾದ ಹೋಟೆಲ್‌ನಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಕಿರಣ್ ಗೋಸಾವಿ 3.09 ಲಕ್ಷ ರೂಪಾಯಿಗಳನ್ನು ವಂಚಿಸಿದ ಆರೋಪದ ಮೇಲೆ ಆಗ ಪ್ರಕರಣ ದಾಖಲಿಸಲಾಗಿತ್ತು. ಮಲೇಷ್ಯಾಗೆ ಬಂದ ಮೇಲೆ, ಆಕಾಂಕ್ಷಿಯು ತಾನು ಕಿರಣ್ ಗೋಸಾವಿಯಿಂದ ಮೋಸ ಹೋಗಿದ್ದನ್ನು ಕಂಡುಕೊಂಡನು. ಈ ಕುರಿತು ಪ್ರಕರಣ ದಾಖಲಾಗಿದೆ. ಗೋಸಾವಿ ವಿರುದ್ಧ ಸೆಕ್ಷನ್ 419, 420ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈ ಕ್ರೂಸ್ ಡ್ರಗ್ ಪ್ರಕರಣದ ಆರೋಪಿ ಆರ್ಯನ್ ಖಾನ್ ಜೊತೆಗಿನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ ಕಿರಣ್ ಗೋಸಾವಿ ಅವರ ಹೆಸರು ಮುನ್ನೆಲೆಗೆ ಬಂದಿತು. ಈ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)ನಿಂದ ಗೋಸಾವಿಯನ್ನು ಸ್ವತಂತ್ರ ಸಾಕ್ಷಿಯಾಗಿ (ಪಂಚ) ಪಟ್ಟಿ ಮಾಡಲಾಗಿದೆ.
ಅಕ್ಟೋಬರ್ 2ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಕಚೇರಿಯಲ್ಲಿ ಆರ್ಯನ್ ಖಾನ್ ಜೊತೆ ಸೆಲ್ಫಿ ತೆಗೆದ ನಂತರ ಸುದ್ದಿಯಲ್ಲಿರುವ ಕಿರಣ್ ಗೋಸಾವಿಗಾಗಿ ಪುಣೆ ಪೊಲೀಸರು ಲುಕ್‌ಔಟ್ ನೋಟಿಸ್ ನೀಡಿದ್ದಾರೆ.
ಓದಿ: ಮುಗ್ಧ ಮಗುವನ್ನು ಲಾಕಪ್‌ನಲ್ಲಿ ದಿನ ಕಳೆಯುವಂತೆ ಮಾಡುವುದು ಸರಿಯೇ?: ಪೂಜಾ ಬೇಡಿ