ETV Bharat / bharat

ಛತ್ತೀಸ್​ಗಢ: ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲ್ ಮಹಿಳೆಯರು ಹತ - ಛತ್ತೀಸ್​ಗಢದಲ್ಲಿ ನಕ್ಸಲ್​ ಮಹಿಳಯರ ಹತ್ಯೆ

ರಾಜಧಾನಿ ರಾಯ್‌ಪುರದಿಂದ 450 ಕಿಮೀ ದೂರದಲ್ಲಿರುವ ಜಬೇಲಿ, ದುರ್ಧಾ ಮತ್ತು ಮೊಸ್ಲಾ ಗ್ರಾಮಗಳಲ್ಲೂ ಜಂಟಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಈ ವೇಳೆ 12 ಬೋರ್ ಗನ್, 9 ಎಂಎಂ ಪಿಸ್ತೂಲ್, ಕಾರ್ಡೆಕ್ಸ್ ವೈರ್, ಸ್ಫೋಟಕ ವಸ್ತುಗಳು ಮತ್ತು ಇತರೆ ವಸ್ತುಗಳು ವಶವಾಗಿವೆ.

Naxals killed
ಮಹಿಳೆಯರು ಹತ
author img

By

Published : Feb 27, 2022, 12:04 PM IST

ರಾಯ್‌ಪುರ(ಛತ್ತೀಸ್​ಗಢ): ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲರು ಹತರಾಗಿದ್ದಾರೆ.

ಜಬೇಲಿ ಎಂಬಲ್ಲಿಯ ಕಾಡಿನಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲ್​ ನಾಯಕಿಯರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೇ, ರಾಜಧಾನಿ ರಾಯ್‌ಪುರದಿಂದ 450 ಕಿಮೀ ದೂರದಲ್ಲಿರುವ ಜಬೇಲಿ, ದುರ್ಧಾ ಮತ್ತು ಮೊಸ್ಲಾ ಗ್ರಾಮಗಳಲ್ಲೂ ಜಂಟಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಈ ವೇಳೆ 12 ಬೋರ್ ಗನ್, 9 ಎಂಎಂ ಪಿಸ್ತೂಲ್, ಕಾರ್ಡೆಕ್ಸ್ ವೈರ್, ಸ್ಫೋಟಕ ವಸ್ತುಗಳು ಮತ್ತು ಇತರೆ ವಸ್ತುಗಳು ವಶವಾಗಿವೆ.

ತಲೆಮರೆಸಿಕೊಂಡಿರುವ ನಕ್ಸಲರ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉಕ್ರೇನ್​: ಆಹಾರ, ನೀರಿಲ್ಲದೇ ಬಂಕರ್​ನಲ್ಲಿ ಸಿಲುಕಿರುವ ಮೈಸೂರಿನ ವಿದ್ಯಾರ್ಥಿನಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.