ಜಾರ್ಖಂಡ್: ಇಲ್ಲಿನ ಗುಮ್ಲಾದಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಫೈರಿಂಗ್‌ನಲ್ಲಿ 15 ಲಕ್ಷ ಬಹುಮಾನ ಘೋಷಿಸಲಾಗಿದ್ದ ನಕ್ಸಲ್ ನಾಯಕ ಬುದ್ದೇಶ್ವರ್ ಒರೊನ್ ಹತನಾಗಿದ್ದಾನೆ.
ಈ ದಾಳಿ ವೇಳೆ ಎಕೆ-47 ರೈಫಲ್ ಸೇರಿದಂತೆ ಬೃಹತ್ ಪ್ರಮಾಣದ ಮದ್ದುಗುಂಡುಗಳು ಮತ್ತು ಐಇಡಿ ಸ್ಫೋಟಕಗಳು, ಮೊಬೈಲ್ ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ನಕ್ಸಲ್ ನಾಯಕ ಬುದೇಶ್ವರ್ ವಿರುದ್ಧ ಕನಿಷ್ಠ 53 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, 20 ಹತ್ಯೆ ಕೇಸ್ ಹಾಗೂ 12ಕ್ಕೂ ಅಧಿಕ ಹತ್ಯೆ ಯತ್ನ ಪ್ರಕರಣಗಳು ದಾಖಲಾಗಿದ್ದವು.