ETV Bharat / bharat

ಚುನಾವಣೆಗಾಗಿ ಪ್ರದರ್ಶನದ ಬೊಂಬೆ ನಾನಲ್ಲ: ಸಿಎಂ ವಿರುದ್ಧ ಸಿಧು ವಾಗ್ದಾಳಿ

ಪಂಜಾಬ್​ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ವಿರುದ್ಧ ವಾಗ್ದಾಳಿ ನಡೆಸಿರುವ ನವಜೋತ್ ಸಿಂಗ್​ ಸಿಧು, ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕೆ ಮಾತ್ರ ನನ್ನನ್ನ ಬಳಕೆ ಮಾಡಿಕೊಳ್ಳಲು ನಾನು ಪ್ರದರ್ಶನದ ಬೊಂಬೆ ಅಲ್ಲ ಎಂದಿದ್ದಾರೆ.

Navjot Singh Sidhu
Navjot Singh Sidhu
author img

By

Published : Jun 21, 2021, 3:49 PM IST

ಅಮೃತಸರ: ಹಿಂದಿನಿಂದಲೂ ಪಂಜಾಬ್ ಸಿಎಂ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ನವಜೋತ್​ ಸಿಂಗ್​ ಸಿಧು ಇದೀಗ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ. ಪಕ್ಷದಲ್ಲಿನ ಯಾವುದೇ ಹುದ್ದೆಯ ಹಿಂದೆ ತಾವು ಬಿದ್ದಿಲ್ಲ ಎಂದು ಹೇಳಿರುವ ಅವರು, ಚುನಾವಣೆಯಲ್ಲಿ ಮಾತ್ರ ಬಳಸಿಕೊಳ್ಳಲು ನಾನು ಪ್ರದರ್ಶನದ ಬೊಂಬೆ ಅಲ್ಲ ಎಂದಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಆಕ್ರೋಶ ಹೊರಹಾಕಿರುವ ಸಿಧು, ಚುನಾವಣೆ ವೇಳೆ ಪ್ರಚಾರಕ್ಕೆ ಕರೆದೊಯ್ದು, ತದನಂತರ ಕಪಾಟಿನಲ್ಲಿಡಲು ನಾನು ಪ್ರದರ್ಶನದ ಬೊಂಬೆ ಅಲ್ಲ. ನೀವು ಏನು ಮಾಡುತ್ತಿದ್ದೀರಿ ಎಂದು ನೋಡುತ್ತ ಕುಳಿತುಕೊಳ್ಳುವುದು ನನ್ನ ಕೆಲಸವಲ್ಲ ಎಂದರು.

ಇದನ್ನೂ ಓದಿರಿ: ಡಿಆರ್‌ಎನ ಮೊದಲ ನಿರ್ದೇಶಕರಾಗಿ ವಾರಣಾಸಿ ಆಯುಕ್ತ ದೀಪಕ್​​ ಅಗರ್​ವಾಲ್​ ನೇಮಕ

ನನ್ನ ನಿಲುವು ತುಂಬಾ ಸ್ಪಷ್ಟವಾಗಿದೆ. ನಿಲುವು ತೆಗೆದುಕೊಳ್ಳುವುದಕ್ಕೂ ಮುಂಚಿತವಾಗಿ ಹತ್ತಾರು ಸಲ ವಿಚಾರ ಮಾಡುತ್ತೇನೆ. ಒಂದು ಸಲ ಅದಕ್ಕೆ ಬದ್ಧವಾಗಿದ್ದರೆ ಯಾವುದೇ ಕಾರಣಕ್ಕೂ ಹಿಂತಿರುಗಿ ನೋಡುವುದಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ. ಸಿಧು ಅವರು ಪಂಜಾಬ್​ ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್ನಲಾಗಿದೆ. ಕಳೆದ ಕೆಲ ತಿಂಗಳಿಂದ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.