ಚೆನ್ನೈ(ತಮಿಳುನಾಡು) : ರಜೆಯ ಮೇಲೆ ಕುಟುಂಬಸ್ಥರೊಂದಿಗೆ ಹೊರಗಡೆ ತಿರುಗಾಡಲು ಹೋಗಿದ್ದ ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರು ಚೆನ್ನೈ ಸಮೀಪದ ಕೋವಲಂ ಬೀಚ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಜೆ.ಆರ್ ಸುರೇಶ್ ದೆಹಲಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ (ನವೆಂಬರ್ 25) ಕೋವಲಂ ಬೀಚ್‌ನಲ್ಲಿ ಈಜುವಾಗ ಕೊಚ್ಚಿಕೊಂಡು ಹೋಗಿದ್ದರು. ಇಂದು ಅವರ ಮೃತದೇಹ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಉಡುಪಿ : ಈಜಲು ಹೋದ ಮೂವರ ವಿದ್ಯಾರ್ಥಿಗಳು ನೀರುಪಾಲು
ದೆಹಲಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುರೇಶ್, ಕಳೆದ ಸೋಮವಾರ ರಜೆಯ ಮೇರೆಗೆ ಚೆನ್ನೈನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಪತ್ನಿ-ಮಕ್ಕಳ ಜೊತೆ ಗುರುವಾರ ಖಾಸಗಿ ರೆಸಾರ್ಟ್ವೊಂದರಲ್ಲಿ ತಂಗಿ ಕೋವಲಂ ಬೀಚ್ಗೆ ಭೇಟಿ ನೀಡಿದ್ದರು.
ಒಬ್ಬರೇ ಬೀಚ್‌ನಲ್ಲಿ ಈಜುವ ವೇಳೆ ಅಲೆಗಳ ಅಬ್ಬರವನ್ನು ಕಂಡ ಕುಟುಂಬಸ್ಥರು ತಿರುಗಿ ಬರುವಂತೆ ಕರೆದಿದ್ದಾರೆ. ಆದರೆ, ಅಷ್ಟರಲ್ಲಿ ಅಲೆಯ ಬಲೆಯಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದರು.