ನವದೆಹಲಿ: ದೇಶದ ಮೊದಲ ಉಪ ಪ್ರಧಾನಿ, ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮ ದಿನವಾದ ಅಕ್ಟೋಬರ್ 31ರಂದು 'ಮೇರೆ ಯುವ ಭಾರತ್' ಎಂಬ ವೇದಿಕೆಯನ್ನು ಆರಂಭಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಕಟಿಸಿದರು. ಇದು ರಾಷ್ಟ್ರ ನಿರ್ಮಾಣದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರವಹಿಸಲು ಯುವಕರಿಗೆ ಅವಕಾಶ ನೀಡಲಿದೆ ಎಂದರು.
-
MYBharat will provide an opportunity to the youth of India to play an active role in various nation building events. This is a unique effort of integrating the youth power of India in building a developed India. #MannKiBaat pic.twitter.com/lziVSWl2kv
— PMO India (@PMOIndia) October 29, 2023 " class="align-text-top noRightClick twitterSection" data="
">MYBharat will provide an opportunity to the youth of India to play an active role in various nation building events. This is a unique effort of integrating the youth power of India in building a developed India. #MannKiBaat pic.twitter.com/lziVSWl2kv
— PMO India (@PMOIndia) October 29, 2023MYBharat will provide an opportunity to the youth of India to play an active role in various nation building events. This is a unique effort of integrating the youth power of India in building a developed India. #MannKiBaat pic.twitter.com/lziVSWl2kv
— PMO India (@PMOIndia) October 29, 2023
ರೇಡಿಯೊದಲ್ಲಿ ಪ್ರಸಾರವಾದ ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ''ಅಕ್ಟೋಬರ್ 31ರಂದು ಮೇರೆ ಯುವ ಭಾರತ್ ವೆಬ್ಸೈಟ್ಗೂ ಚಾಲನೆ ನೀಡಲಾಗುತ್ತದೆ. ಯುವಕರು MYBharat.Gov.in.ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇದು ರಾಷ್ಟ್ರ ನಿರ್ಮಾಣದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ ವಹಿಸಲು ಯುವಕರಿಗೆ ಅವಕಾಶ ನೀಡಲಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಯುವ ಶಕ್ತಿಯನ್ನು ಸಂಯೋಜಿಸುವ ವಿಶಿಷ್ಟ ಪ್ರಯತ್ನ'' ಎಂದು ಹೇಳಿದರು.
ಅ.31ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿಯ ದಿನವಾಗಿದೆ ಎಂದೂ ಉಲ್ಲೇಖಿಸಿದ ಅವರು, ಇಂದಿರಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ವೇಳೆ, "ಇದು ದೇಶದ ರಾಜಧಾನಿಯ ಹೃದಯಭಾಗದಲ್ಲಿ ಅಮೃತ ಮಹೋತ್ಸವವು ಭವ್ಯ ಪರಂಪರೆಯಾಗಿ ಉಳಿಯುತ್ತದೆ. ದೇಶಾದ್ಯಂತ ಕಳೆದ ಎರಡೂವರೆ ವರ್ಷಗಳಿಂದ ನಡೆಯುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವವು ಅಕ್ಟೋಬರ್ 31ರಂದು ಮುಕ್ತಾಯವಾಗಲಿದೆ" ಅವರು ಹೇಳಿದರು.
-
Like every time, this time too, during festivals, our priority should be 'Vocal for Local'. #MannKiBaat pic.twitter.com/ZbCiIqBN71
— PMO India (@PMOIndia) October 29, 2023 " class="align-text-top noRightClick twitterSection" data="
">Like every time, this time too, during festivals, our priority should be 'Vocal for Local'. #MannKiBaat pic.twitter.com/ZbCiIqBN71
— PMO India (@PMOIndia) October 29, 2023Like every time, this time too, during festivals, our priority should be 'Vocal for Local'. #MannKiBaat pic.twitter.com/ZbCiIqBN71
— PMO India (@PMOIndia) October 29, 2023
ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಕರೆ: ''ಪ್ರತಿ ಬಾರಿಯಂತೆ ಈ ಬಾರಿಯೂ ಹಬ್ಬ ಹರಿದಿನಗಳಲ್ಲಿ 'ಲೋಕಲ್ ಫಾರ್ ವೋಕಲ್'ಗೆ ಆದ್ಯತೆ ನೀಡಬೇಕು. ಪ್ರವಾಸೋದ್ಯಮ ಅಥವಾ ತೀರ್ಥಯಾತ್ರೆಗೆ ಹೋದಲ್ಲೆಲ್ಲಾ ಸ್ಥಳೀಯ ಕುಶಲಕರ್ಮಿಗಳಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ. ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದರಿಂದ ಕುಶಲಕರ್ಮಿಗಳಿಗೆ ಮುಂಬರುವ ದೀಪಾವಳಿ ಹಬ್ಬದ ಪ್ರಕಾಶ ಹರಡುತ್ತದೆ'' ಎಂದು ಹೇಳಿದರು.
-
On Gandhi Jayanti, Khadi witnessed record sales. #MannKiBaat pic.twitter.com/o3puDNphR0
— PMO India (@PMOIndia) October 29, 2023 " class="align-text-top noRightClick twitterSection" data="
">On Gandhi Jayanti, Khadi witnessed record sales. #MannKiBaat pic.twitter.com/o3puDNphR0
— PMO India (@PMOIndia) October 29, 2023On Gandhi Jayanti, Khadi witnessed record sales. #MannKiBaat pic.twitter.com/o3puDNphR0
— PMO India (@PMOIndia) October 29, 2023
''ಗಾಂಧಿ ಜಯಂತಿಯಂದು ದಾಖಲೆಯ ಮಟ್ಟದಲ್ಲಿ ಖಾದಿ ಮಾರಾಟವಾಗಿದೆ. ಕನ್ನಾಟ್ ಪ್ರದೇಶವೊಂದರಲ್ಲಿ ಒಂದೇ ದಿನದಲ್ಲಿ ₹1.25 ಕೋಟಿ ಮೌಲ್ಯದ ಖಾದಿ ಮಾರಾಟಗೊಂಡಿದೆ. ಖಾದಿ ಉತ್ಪನ್ನಗಳ ಮಾರಾಟವು ಈ ಹಿಂದೆ ಕೇವಲ 30,000 ಕೋಟಿ ರೂ. ಮಾತ್ರ ಆಗಿತ್ತು. ಈಗ ಅದು ಸುಮಾರು 1.25 ಲಕ್ಷ ಕೋಟಿ ರೂ.ಗೆ ತಲುಪಿದೆ'' ಎಂದರು.
''ಇಂದು ಭಾರತವು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ. ಅನೇಕ ದೊಡ್ಡ ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ತಯಾರಿಸುತ್ತಿವೆ. ನಾವು ಆ ಉತ್ಪನ್ನಗಳನ್ನು ಅಳವಡಿಸಿಕೊಂಡರೆ, 'ಮೇಕ್ ಇನ್ ಇಂಡಿಯಾ' ಉತ್ತೇಜನ ಪಡೆಯುತ್ತದೆ ಮತ್ತು ಇದು ಸ್ಥಳೀಯರಿಗೆ ಧ್ವನಿಯಾಗುತ್ತಿದೆ. ವಹಿವಾಟಿನ ಸಮಯದಲ್ಲಿ ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆ ಬಳಸಬೇಕು'' ಎಂದು ಕರೆ ನೀಡಿದರು.
ಇದನ್ನೂ ಓದಿ: ಭಾರತ ಸೇರಿದಂತೆ ಜಗತ್ತಿನ ಹಲವೆಡೆ ವರ್ಷದ ಕೊನೆಯ ಚಂದ್ರಗ್ರಹಣ ಗೋಚರ; ಮೋಕ್ಷದ ನಂತರ ದೇವಾಲಯಗಳ ಶುದ್ಧೀಕರಣ, ವಿಶೇಷ ಪೂಜೆ