ETV Bharat / bharat

National Water Awards 2020: ಕರ್ನಾಟಕಕ್ಕೆ ಒಲಿದ ಎರಡು ಪ್ರಶಸ್ತಿಗಳು! - ರಾಷ್ಟ್ರೀಯ ಜಲ ಪ್ರಶಸ್ತಿಗೆ ಉತ್ತರಪ್ರದೇಶಕ್ಕೆ ಮೊದಲ ರಾಜ್ಯ

ಕೇಂದ್ರದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರ್ವಸತಿ ಸಚಿವಾಲಯವು ನೀರಿನ ಸಂರಕ್ಷಣೆ ಉತ್ತಮ ರೀತಿಯಲ್ಲಿ ಮಾಡುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಉತ್ತೇಜಿಸಲು National Water Awards ನೀಡುತ್ತಿದೆ. 2020ರ ಪ್ರಶಸ್ತಿ ಯಾವ ರಾಜ್ಯ, ಜಿಲ್ಲೆ ಮತ್ತ ಗ್ರಾಮ ಪಡೆದುಕೊಂಡಿದೆ ಎಂಬುದು ತಿಳಿಯೋಣ ಬನ್ನಿ.

National Water Awards 2020, UttarPradesh tops in Best State category, National Water Awards first prize to UttarPradesh,  National Water Awards  2020 news, ರಾಷ್ಟ್ರೀಯ ಜಲ ಪ್ರಶಸ್ತಿ 2020, ಅತ್ಯುತ್ತಮ ರಾಜ್ಯ ವಿಭಾಗದಲ್ಲಿ ಉತ್ತರಪ್ರದೇಶ ಫಸ್ಟ್​, ರಾಷ್ಟ್ರೀಯ ಜಲ ಪ್ರಶಸ್ತಿಗೆ ಉತ್ತರಪ್ರದೇಶಕ್ಕೆ ಮೊದಲ ರಾಜ್ಯ, ರಾಷ್ಟ್ರೀಯ ಜಲ ಪ್ರಶಸ್ತಿ 2020 ಸುದ್ದಿ,
ರಾಷ್ಟ್ರೀಯ ಜಲ ಪ್ರಶಸ್ತಿ 2020
author img

By

Published : Jan 8, 2022, 7:33 AM IST

ನವದೆಹಲಿ: 3ನೇ National Water Awards 2020 ಅನ್ನು ಕೇಂದ್ರ ಜಲ ಶಕ್ತಿ ಸಚಿವರು ಘೋಷಿಸಿದ್ದು, ಕರ್ನಾಟಕಕ್ಕೆ ಎರಡು ಪ್ರಶಸ್ತಿಗಳು ಲಭಿಸಿವೆ. 3ನೇ ರಾಷ್ಟ್ರೀಯ ಜಲ ಪ್ರಶಸ್ತಿಯನ್ನು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಘೋಷಿಸಿದ್ದು, ಅತ್ಯುತ್ತಮ ರಾಜ್ಯ ವಿಭಾಗದಲ್ಲಿ ಉತ್ತರ ಪ್ರದೇಶ ಪ್ರಥಮ, ರಾಜಸ್ಥಾನ ಮತ್ತು ತಮಿಳುನಾಡು ನಂತರದ ಸ್ಥಾನ ಪಡೆದಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಶೇಖಾವತ್, ಭಾರತದ ಪ್ರಸ್ತುತ ನೀರಿನ ಅವಶ್ಯಕತೆ ವರ್ಷಕ್ಕೆ ಸುಮಾರು 1,100 ಶತಕೋಟಿ ಕ್ಯೂಬಿಕ್ ಮೀಟರ್ ಎಂದು ಅಂದಾಜಿಸಲಾಗಿದೆ. 2050 ರ ವೇಳೆಗೆ 1,447 ಶತಕೋಟಿ ಘನ ಮೀಟರ್‌ಗಳಿಗೆ ಏರಲಿದೆ ಎಂದು ಲೆಕ್ಕ ಹಾಕಲಾಗಿದೆ. ಭಾರತವು ವಿಶ್ವದ ಜನಸಂಖ್ಯೆಯ ಶೇಕಡಾ 18 ಕ್ಕಿಂತ ಹೆಚ್ಚು ಹೊಂದಿದೆ. ಇದು ಪ್ರಪಂಚದ ನವೀಕರಿಸಬಹುದಾದ ನೀರಿನ ಸಂಪನ್ಮೂಲಗಳಲ್ಲಿ ಕೇವಲ 4 ಪ್ರತಿಶತವನ್ನು ಹೊಂದಿದೆ ಎಂದು ಹೇಳಿದರು.

ದೇಶಾದ್ಯಂತ 'ಜಲ ಸಮೃದ್ಧ ಭಾರತ'ವನ್ನು ನೋಡಲು ರಾಜ್ಯಗಳು, ಜಿಲ್ಲೆಗಳು, ವ್ಯಕ್ತಿಗಳು, ಸಂಸ್ಥೆಗಳು ಮುಂತಾದವುಗಳು ಮಾಡಿದ ಅನುಕರಣೀಯ ಕೆಲಸ ಮತ್ತು ಪ್ರಯತ್ನಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಸಚಿವರು ಇದೇ ವೇಳೆ ವಿವರಣೆ ಕೊಟ್ಟರು.

ಓದಿ: 15-18 ವರ್ಷದವರಿಗೆ ಕೋವ್ಯಾಕ್ಸಿನ್ ಲಸಿಕೆ​ ಮಾತ್ರ ಸೂಕ್ತ: ಆರೋಗ್ಯ ಕಾರ್ಯಕರ್ತರಿಗೆ ಭಾರತ್ ಬಯೋಟೆಕ್​ ಸೂಚನೆ

ಮೇಲ್ಮೈ ನೀರು ಮತ್ತು ಅಂತರ್ಜಲ ಜಲಚಕ್ರದ ಅವಿಭಾಜ್ಯ ಅಂಗವಾಗಿದೆ ಎಂಬ ಅಂಶವನ್ನು ಪರಿಗಣಿಸಿ, ಜಲಸಂಪನ್ಮೂಲ ನಿರ್ವಹಣೆಗೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲು ಮಧ್ಯಸ್ಥಗಾರರನ್ನು ಉತ್ತೇಜಿಸುವ ಉದ್ದೇಶಗಳೊಂದಿಗೆ ಏಕೀಕೃತ ರಾಷ್ಟ್ರೀಯ ಜಲ ಪ್ರಶಸ್ತಿಯನ್ನು ನೀಡುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಮೊದಲ ರಾಷ್ಟ್ರೀಯ ಜಲ ಪ್ರಶಸ್ತಿಯನ್ನು ಜಲ ಶಕ್ತಿ ಸಚಿವಾಲಯವು 2018 ರಲ್ಲಿ ಪ್ರಾರಂಭಿಸಿತು. ಜಲಸಂಪನ್ಮೂಲ ನಿರ್ವಹಣೆ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ, ಜಲಶಕ್ತಿ ಸಚಿವಾಲಯವು 11 ವಿವಿಧ ವಿಭಾಗಗಳಲ್ಲಿ ರಾಜ್ಯಗಳು, ಸಂಸ್ಥೆಗಳು, ವ್ಯಕ್ತಿಗಳು ಇತ್ಯಾದಿಗಳಿಗೆ 57 ಪ್ರಶಸ್ತಿಗಳನ್ನು ನೀಡುತ್ತಿದೆ.

ಓದಿ: ಕೋಳಿಗಳ ಕಾಲಿಗೆ ಬ್ಲೇಡ್‌ ಕಟ್ಟದೇ ಕಾಳಗ ನಡೆಸಲು ಕೋರ್ಟ್​ ಸಮ್ಮತಿ

ಅತ್ಯುತ್ತಮ ರಾಜ್ಯ, ಅತ್ಯುತ್ತಮ ಜಿಲ್ಲೆ, ಅತ್ಯುತ್ತಮ ಗ್ರಾಮ ಪಂಚಾಯತ್, ಅತ್ಯುತ್ತಮ ನಗರ ಸ್ಥಳೀಯ ಸಂಸ್ಥೆ, ಅತ್ಯುತ್ತಮ ಮಾಧ್ಯಮ (ಮುದ್ರಣ ಮತ್ತು ಎಲೆಕ್ಟ್ರಾನಿಕ್), ಅತ್ಯುತ್ತಮ ಶಾಲೆ, ಅತ್ಯುತ್ತಮ ಸಂಸ್ಥೆ/RWA/ ಕ್ಯಾಂಪಸ್ ಬಳಕೆಗಾಗಿ ಅತ್ಯುತ್ತಮ ಸಂಸ್ಥೆ/RWA/ಧಾರ್ಮಿಕ ಸಂಸ್ಥೆ, ಅತ್ಯುತ್ತಮ ಉದ್ಯಮ, ಅತ್ಯುತ್ತಮ NGO, ಅತ್ಯುತ್ತಮ ನೀರು ಬಳಕೆದಾರರ ಸಂಘ ಮತ್ತು ಅತ್ಯುತ್ತಮ ಉದ್ಯಮ CSR ಚಟುವಟಿಕೆಗಾಗಿ ಪ್ರಶಸ್ತಿಗಳನ್ನು ಘೋಷಿಸಲಾಗುವುದು. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪತ್ರ, ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು.

ಉತ್ತರ ಪ್ರದೇಶದ ಮುಜಾಫರ್‌ನಗರವು ‘ಅತ್ಯುತ್ತಮ ಜಿಲ್ಲೆ’ ಎಂದು ಪ್ರಶಸ್ತಿ ಪಡೆದಿದೆ. ಕರ್ನಾಟಕದ ತುಮಕೂರು ಜಿಲ್ಲೆಯ ಎಲೆರಾಂಪುರ ಪಂಚಾಯತ್​ಗೆ ‘ಅತ್ಯುತ್ತಮ ಗ್ರಾಮ ಪಂಚಾಯತ್​’ ವಿಭಾಗದಲ್ಲಿ ಮೊದಲನೇ ಪ್ರಶಸ್ತಿ ಲಭಿಸಿದೆ. ಅದರಂತೆ ಬೆಂಗಳೂರಿನ ಹೆಚ್​ಎಎಲ್​ಗೆ ‘ಅತ್ಯುತ್ತಮ ಉದ್ಯಮ CSR ಚಟುವಟಿಕೆ’ ಪ್ರಶಸ್ತಿ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.