ETV Bharat / bharat

Lok Adalat.. ಕೋರ್ಟ್​ಗಳಲ್ಲಿ ಬಾಕಿ ಉಳಿದಿದ್ದ 15 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥ

ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ 33 ಲಕ್ಷಕ್ಕೂ ಹೆಚ್ಚು ಪ್ರಕರಣಗಳ ಪೈಕಿ 15 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ರಾಷ್ಟ್ರೀಯ ಲೋಕ ಅದಾಲತ್(Lok Adalat) ತಿಳಿಸಿದೆ.

Lok Adalat
Lok Adalat
author img

By

Published : Sep 12, 2021, 7:12 AM IST

ನವದೆಹಲಿ: ನ್ಯಾಯಾಂಗ ವ್ಯವಸ್ಥೆಯ ಮೇಲಿನ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ಬಾಕಿ ಉಳಿದಿದ್ದ 33 ಲಕ್ಷಕ್ಕೂ ಹೆಚ್ಚು ಪ್ರಕರಣಗಳಲ್ಲಿ 15 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ರಾಷ್ಟ್ರೀಯ ಲೋಕ ಅದಾಲತ್(Lok Adalat)​​ ಮಾಹಿತಿ ನೀಡಿದೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಲ್ಸಾ) ಈ ವರ್ಷ ಆಯೋಜಿಸುತ್ತಿರುವ ಮೂರನೇ ರಾಷ್ಟ್ರೀಯ ಲೋಕ ಅದಾಲತ್ ಇದಾಗಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿನ ಪ್ರಕರಣಗಳನ್ನು ಕಡಿಮೆ ಮಾಡಲು ಲೋಕ ಅದಾಲತ್ ಅಗತ್ಯ ಎಂದು ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿ, ನಲ್ಸಾ ಕಾರ್ಯಕಾರಿ ಅಧ್ಯಕ್ಷರಾಗಿರುವ ಯು.ಯು. ಲಲಿತ್ ಹೇಳಿದ್ದಾರೆ.

ರಾಷ್ಟ್ರೀಯ ಲೋಕ ಅದಾಲತ್ ನಡೆಸುವುದನ್ನು ನ್ಯಾಯಮೂರ್ತಿ ಲಲಿತ್​​ ಮೇಲ್ವಿಚಾರಣೆ ಮಾಡಿದ್ದು, 50ಕ್ಕೂ ಹೆಚ್ಚು ನ್ಯಾಯಾಧೀಶರೊಂದಿಗೆ ಸಂವಾದ ನಡೆಸಿದ್ದಾರೆ.

ನ್ಯಾಯಾಲಯದಲ್ಲಿದ್ದ 33,12,389 ಪ್ರಕರಣಗಳ ಪೈಕಿ 15,33,186 ಪ್ರಕರಣಗಳನ್ನು ಲೋಕ ಅದಾಲತ್ ಇತ್ಯರ್ಥಗೊಳಿಸಿದೆ. ಇದರಲ್ಲಿ 2,281 ಕೋಟಿ ರೂಪಾಯಿಗಳನ್ನು ಪರಿಹಾರ ನೀಡಲಾಗಿದೆ ಎಂದು ನಲ್ಸಾ ಸದಸ್ಯರೊಬ್ಬರು ತಿಳಿಸಿದ್ದಾರೆ.

ಮೋಟಾರ್ ಆಕ್ಸಿಡೆಂಟ್ ಕ್ಲೇಮ್ ಟ್ರಿಬ್ಯೂನಲ್ (MACT), ವೈವಾಹಿಕ ವಿವಾದಗಳು, ಚೆಕ್ ಬೌನ್ಸ್ ಮತ್ತು ಕಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಲೋಕ ಅದಾಲತ್‌ಗಳಲ್ಲಿ ಇತ್ಯರ್ಥಪಡಿಸಲಾಗಿದೆ. ಇದು ಕಾನೂನು ಸೇವೆಗಳ ಅಧಿಕಾರಿಗಳಿಗೆ ಒಂದು ದೊಡ್ಡ ಸಾಧನೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲೋಕ ಅದಾಲತ್​​, ಪ್ರಕರಣಗಳನ್ನು ಇತ್ಯರ್ಥಪಡಿಸಲು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯ ನ್ಯಾಯಾಲಯಗಳ ಸಲಹೆ- ಸಹಾಯ ಪಡೆಯಲಾಗಿದೆ.

ಮಹಾರಾಷ್ಟ್ರ, ಒಡಿಶಾ, ಕರ್ನಾಟಕ ಮತ್ತು ಗೋವಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಾಷ್ಟ್ರೀಯ ಲೋಕ ಅದಾಲತ್​ಅನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಈ ರಾಜ್ಯಗಳಲ್ಲಿ ಸೆಪ್ಟೆಂಬರ್ ಅಂತ್ಯದೊಳಗೆ ದಿನಾಂಕಗಳನ್ನು ನಿಗದಿಪಡಿಸುವುದಾಗಿ ನಲ್ಸಾ ತಿಳಿಸಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನ​ ಕುರಿತು ಭಾರತ-ಆಸ್ಟ್ರೇಲಿಯಾ ಚರ್ಚೆ.. ಭಯೋತ್ಪಾದನೆ ವಿರುದ್ಧ ಸಮರಕ್ಕೆ ನಿರ್ಧಾರ

ಈ ವರ್ಷಕ್ಕೆ ನಿಗದಿಪಡಿಸಿದ್ದ ನಾಲ್ಕು ಲೋಕ ಅದಾಲತ್​ಗಳಲ್ಲಿ ಈಗಾಗಲೇ ಮೂರು ಅದಾಲತ್​ಗಳು ಮುಕ್ತಾಯಗೊಂಡಿವೆ. ಡಿಸೆಂಬರ್​ನಲ್ಲಿ ಮತ್ತೊಂದು ಅದಾಲತ್​ ಆಯೋಜಿಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.