ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಎರಡನೇ ಸಲ ವಿಚಾರಣೆಗೊಳಪಟ್ಟಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ನಾಳೆ ಸಹ ಹಾಜರಾಗಲು ಇಡಿ ತಿಳಿಸಿದೆ ಎಂದು ವರದಿಯಾಗಿದೆ. ಇಂದು ನಡೆದ ಆರು ಗಂಟೆಗಳ ವಿಚಾರಣೆ ವೇಳೆ ಸುಮಾರು 55ಕ್ಕೂ ಹೆಚ್ಚಿನ ಪ್ರಶ್ನೆ ಅವರಿಗೆ ಕೇಳಲಾಗಿದೆ ಎಂದು ಹೇಳಲಾಗ್ತಿದೆ.
-
Congress interim president Sonia Gandhi has been asked to reappear tomorrow before ED in the National Herald case: Sources
— ANI (@ANI) July 26, 2022 " class="align-text-top noRightClick twitterSection" data="
(File pic) pic.twitter.com/Mtxj722GGQ
">Congress interim president Sonia Gandhi has been asked to reappear tomorrow before ED in the National Herald case: Sources
— ANI (@ANI) July 26, 2022
(File pic) pic.twitter.com/Mtxj722GGQCongress interim president Sonia Gandhi has been asked to reappear tomorrow before ED in the National Herald case: Sources
— ANI (@ANI) July 26, 2022
(File pic) pic.twitter.com/Mtxj722GGQ
ಇಂದು ಬೆಳಗ್ಗೆ 11 ಗಂಟೆಗೆ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿದ್ದ ಸೋನಿಯಾ ಗಾಂಧಿ ಆರು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದು, ಅಧಿಕಾರಿಗಳು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸೋನಿಯಾ ಗಾಂಧಿ ಅವರಿಗೆ ನೋಟಿಸ್ ನೀಡಿದ್ದಾಗಿ ತಿಳಿದು ಬಂದಿದ್ದು, ನಾಳೆ ಮತ್ತೆ ಆಗಮಿಸಲಿದ್ದಾರೆ. ಜುಲೈ 21ರಂದು ಮೊದಲ ಸುತ್ತಿನ ವಿಚಾರಣೆ ಎದುರಿಸಿರುವ ಸೋನಿಯಾ ಗಾಂಧಿ, ಇಂದು ಎರಡನೇ ಸುತ್ತಿನ ವಿಚಾರಣೆಗೆ ಹಾಜರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಹುಲ್ ಗಾಂಧಿ ಸಹ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಪಟ್ಟಿದ್ದಾರೆ.
ಸೋನಿಯಾ ಗಾಂಧಿ ಅವರನ್ನ ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿರುವುದನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಈ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಹ ಭಾಗಿಯಾಗಿದ್ದರು. ಅವರನ್ನ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಸೋನಿಯಾ ಗಾಂಧಿ ಅವರ ವಿಚಾರಣೆ ಮುಗಿದ ಬಳಿಕ ಬಿಡುಗಡೆ ಮಾಡಿದ್ದಾರೆ.
-
#UPDATE | Congress interim president Sonia Gandhi leaves from the ED office in Delhi after around 6 hours of questioning in the National Herald case. pic.twitter.com/3oYSVqn0pn
— ANI (@ANI) July 26, 2022 " class="align-text-top noRightClick twitterSection" data="
">#UPDATE | Congress interim president Sonia Gandhi leaves from the ED office in Delhi after around 6 hours of questioning in the National Herald case. pic.twitter.com/3oYSVqn0pn
— ANI (@ANI) July 26, 2022#UPDATE | Congress interim president Sonia Gandhi leaves from the ED office in Delhi after around 6 hours of questioning in the National Herald case. pic.twitter.com/3oYSVqn0pn
— ANI (@ANI) July 26, 2022
ಕಾಂಗ್ರೆಸ್ ಅಧಿನಾಯಕಿಯನ್ನ ವಿಚಾರಣೆಗೊಳಪಡಿಸಿರುವುದನ್ನ ಖಂಡಿಸಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ನ 50 ಸಂಸದರು, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಠಾಣೆಗೆ ಕರೆದೊಯ್ಯಲಾಗಿತ್ತು.