ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಜಾರಿ ನಿರ್ದೇಶನಾಲಯದ ಎದುರು ಹಾಜರಾಗಿ ವಿಚಾರಣೆ ಎದುರಿಸಿದರು. ಲಭ್ಯವಾಗಿರುವ ಮಾಹಿತಿ ಪ್ರಕಾರ ಇಡಿ ಕಚೇರಿಯಲ್ಲಿ ಹೆಚ್ಚುವರಿ ಮಹಿಳಾ ನಿರ್ದೇಶಕಿ ನೇತೃತ್ವದಲ್ಲಿ ಐವರು ಅಧಿಕಾರಿಗಳಿಂದ ಸೋನಿಯಾ ಗಾಂಧಿ ವಿಚಾರಣೆಗೊಳಪಟ್ಟಿದ್ದಾರೆ. ಬರೋಬ್ಬರಿ 2.20 ಗಂಟೆಗಳ ಕಾಲ ಕಾಂಗ್ರೆಸ್ ಅಧಿನಾಯಕಿ ವಿಚಾರಣೆ ಎದುರಿಸಿದ್ದಾರೆ.
ಸೋನಿಯಾ ಗಾಂಧಿ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯ ಹೆಚ್ಚಿನ ನಿಗಾ ವಹಿಸಿದ್ದಾಗಿ ತಿಳಿದು ಬಂದಿದೆ. ಇಡಿಯ ಇಬ್ಬರು ವೈದ್ಯರ ನಿಗಾ ಹಾಗೂ ಆ್ಯಂಬುಲೆನ್ಸ್ ಸನ್ನದ್ಧವಾಗಿ ಇಟ್ಟುಕೊಂಡಿದ್ದರು ಎಂಬ ವರದಿ ತಿಳಿದು ಬಂದಿದೆ.
-
ED kept 2 doctors & an ambulance on standby during its interrogation with Congress chief Sonia Gandhi, which lasted 2.20hrs. It also allowed Priyanka Gandhi to be at the ED office, who went to meet her twice in the meanwhile: ED sources (1/2)
— ANI (@ANI) July 21, 2022 " class="align-text-top noRightClick twitterSection" data="
">ED kept 2 doctors & an ambulance on standby during its interrogation with Congress chief Sonia Gandhi, which lasted 2.20hrs. It also allowed Priyanka Gandhi to be at the ED office, who went to meet her twice in the meanwhile: ED sources (1/2)
— ANI (@ANI) July 21, 2022ED kept 2 doctors & an ambulance on standby during its interrogation with Congress chief Sonia Gandhi, which lasted 2.20hrs. It also allowed Priyanka Gandhi to be at the ED office, who went to meet her twice in the meanwhile: ED sources (1/2)
— ANI (@ANI) July 21, 2022
ಇಡಿ ಮೂಲಗಳ ಮಾಹಿತಿ ಪ್ರಕಾರ 2.20 ನಿಮಿಷಗಳ ಕಾಲ ಕಾಂಗ್ರೆಸ್ ಮುಖ್ಯಸ್ಥೆ ವಿಚಾರಣೆಗೊಳಪಟ್ಟಿದ್ದರು. ವಿಚಾರಣೆ ಮಧ್ಯೆ ಪ್ರಿಯಾಂಕಾ ಗಾಂಧಿ ಎರಡು ಸಲ ಅವರ ಬಳಿ ಹೋಗಿ ಮಾತನಾಡಲು ಅವಕಾಶ ಸಹ ಕಲ್ಪಿಸಲಾಗಿತ್ತು ಎಂದು ವರದಿಯಾಗಿದೆ. ವಿಚಾರಣೆ ವೇಳೆ, ಎರಡು ಡಜನ್ಗಿಂತಲೂ ಹೆಚ್ಚಿನ ಪ್ರಶ್ನೆ ಕೇಳಲಾಗಿದ್ದು, ಔಷಧ ಪಡೆದುಕೊಳ್ಳಲು ಮನೆಗೆ ತೆರಳುವಂತೆ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಅನುಮತಿ ನೀಡಿರುವ ಇಡಿ ಸೋಮವಾರ ಮತ್ತೊಮ್ಮೆ ವಿಚಾರಣೆಗೆ ಕರೆಯಲಿದೆ ಎಂದು ಇಡಿ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿರಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ: ಮೂರು ಗಂಟೆ ಇ.ಡಿ ವಿಚಾರಣೆ ಎದುರಿಸಿ ಹೊರ ಬಂದ ಸೋನಿಯಾ ಗಾಂಧಿ
75 ವರ್ಷದ ಸೋನಿಯಾ ಗಾಂಧಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ವಿಚಾರಣೆ ವೇಳೆ ವಿಶ್ರಾಂತಿ ಪಡೆದುಕೊಳ್ಳಲು ಅವಕಾಶ ನೀಡಲಾಗಿತ್ತು ಎಂದು ಹೇಳಲಾಗಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪುತ್ರ ರಾಹುಲ್ ಗಾಂಧಿ ಸಹ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸಿದ್ದಾರೆ. ಕೋವಿಡ್ ಕಾರಣದಿಂದಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸೋನಿಯಾ ಗಾಂಧಿ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ವಿಚಾರಣೆ ಎದುರಿಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಬಿಗಿ ಭದ್ರತೆಯಲ್ಲಿ ಸೋನಿಯಾ ಗಾಂಧಿ ಇಡಿ ಕಚೇರಿಗೆ ಆಗಮಿಸಿದ್ದು, ಅವರಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಸಾಥ್ ನೀಡಿದರು.