ETV Bharat / bharat

ಮೂರು ವರ್ಷದ ಗಂಡು ಮಗುವನ್ನು ಕೊಂದು ಗೃಹಿಣಿ ಆತ್ಮಹತ್ಯೆ - ಮಗು ಕೊಂದು ಮಹಿಳೆ ಆತ್ಮಹತ್ಯೆ

ಮಹಾರಾಷ್ಟ್ರದ ನಾಸಿಕ್​ನಲ್ಲಿ ಮಹಿಳೆಯೋರ್ವರು ತನ್ನ ಮೂರು ವರ್ಷದ ಮಗು ಕೊಂದು ನಂತರ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ..

mother committed suicide by killing 3 year old son
ಮೂರು ವರ್ಷದ ಗಂಡು ಮಗುವನ್ನು ಕೊಂದು ಗೃಹಿಣಿ ಆತ್ಮಹತ್ಯೆ
author img

By

Published : Aug 11, 2021, 4:40 PM IST

ನಾಸಿಕ್(ಮಹಾರಾಷ್ಟ್ರ) : ಗೃಹಿಣಿಯೋರ್ವರು ತನ್ನ ಮೂರು ವರ್ಷದ ಮಗುವನ್ನು ಕೊಂದು ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಪಠಾರ್ಡಿ ಫಟಾ ಪ್ರದೇಶದಲ್ಲಿನ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ.

mother committed suicide by killing 3 year old son
ಮೂರು ವರ್ಷದ ಗಂಡು ಮಗುವನ್ನು ಕೊಂದು ಗೃಹಿಣಿ ಆತ್ಮಹತ್ಯೆ

ಶಖಾ ಸಾಗರ್​ (32) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ, ರಿಧಾನ್ (3) ಮೃತ ಬಾಲಕ ಎಂದು ಗುರುತಿಸಲಾಗಿದೆ. ಆಕೆ ಪಠಾರ್ಡಿ ಫಟಾನಲ್ಲಿರುವ ಸಾಯಿ ಸಿದ್ಧಿ ಅಪಾರ್ಟ್‌ಮೆಂಟ್​ನಲ್ಲಿ ವಾಸವಾಗಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕತ್ತು ಹಿಸುಕಿ ಮಗುವನ್ನು ಕೊಲೆ ಮಾಡಿದ್ದಾರೆ. ಆದರೆ, ಘಟನೆಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓದಿ: ಮಣಿಪುರ to ಟೋಕಿಯೋ.. ಅದ್ಭುತ ಜರ್ನಿ ಎಂದು 'ಬೆಳ್ಳಿ ಚನು'ಪ್ರಶಂಸಿಸಿದ ಸಚಿನ್​

ಮೃತದೇಹದ ಬಳಿ ಪತ್ರವೊಂದು ಪತ್ತೆಯಾಗಿದ್ದು, ಪರೀಕ್ಷೆಗಾಗಿ ಎರಡೂ ಮೃತದೇಶಗಳನ್ನು ಸರ್ಕಾರಿ ಆಸ್ಪತ್ರೆಗೆ ಪೊಲೀಸರು ಕಳುಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.