ETV Bharat / bharat

ನಾಸಿಕ್: ಮಾಲೆಗಾಂವ್‌ನಲ್ಲಿ ಹಿಜಾಬ್ ಡೇ... ಪೊಲೀಸ್ ಬಿಗಿ ಭದ್ರತೆ.. - Hijab Day in Malegaon

ಭಾರತವು ಮಹಿಳೆಯರನ್ನು ಗೌರವಿಸುತ್ತದೆ. ಈ ಸಂಸ್ಕೃತಿಯನ್ನು ನಾಶ ಮಾಡುವ ಷಡ್ಯಂತ್ರವನ್ನು ಕೆಲವು ಮತಾಂಧ ಶಕ್ತಿಗಳು ಆರಂಭಿಸುತ್ತಿವೆ ಎಂದು ಶಾಸಕ ಮುಫ್ತಿ ತಿಳಿಸಿದರು.

hijab day in malegav
ಮಾಲೆಗಾಂವ್‌ನಲ್ಲಿ ಹಿಜಾಬ್ ಡೇ
author img

By

Published : Feb 11, 2022, 3:33 PM IST

ನಾಸಿಕ್: ಹಿಜಾಬ್ ಮತ್ತು ಬುರ್ಖಾ ಬೆಂಬಲಿಸಿ ಇಂದು ಮಾಲೆಗಾಂವ್​ನಲ್ಲಿ ಹಿಜಾಬ್ ದಿನ ಆಚರಿಸಲಾಯಿತು. ಇಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾಲೆಗಾಂವ್‌ನಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿತ್ತು.

ಹಿಜಾಬ್‌ಗೆ ಬೆಂಬಲ ಸೂಚಿಸಿ ನೂರಾರು ಮುಸ್ಲಿಂ ಮಹಿಳೆಯರು ಗುರುವಾರ ಮಾಲೆಗಾಂವ್‌ನ ಅಜೀಜ್ ಕಲ್ಲು ಕ್ರೀಡಾಂಗಣದಲ್ಲಿ ರ‍್ಯಾಲಿ ನಡೆಸಿದರು. ಈ ವೇಳೆ ಒಂದು ಗಂಟೆ ಸಭೆಯನ್ನುದ್ದೇಶಿಸಿ ಶಾಸಕ ಮುಫ್ತಿ ಮಾತನಾಡಿದರು.

ಭಾರತವು ಮಹಿಳೆಯರನ್ನು ಗೌರವಿಸುತ್ತದೆ. ಈ ಸಂಸ್ಕೃತಿಯನ್ನು ನಾಶ ಮಾಡುವ ಷಡ್ಯಂತ್ರವನ್ನು ಕೆಲವು ಮತಾಂಧ ಶಕ್ತಿಗಳು ಆರಂಭಿಸುತ್ತಿವೆ ಎಂದರು. ಹಿಜಾಬ್​​ ದಿನಕ್ಕೆ ಮಾಲೆಗಾಂವ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಭೆಯಲ್ಲಿ ಮಹಿಳೆಯರು ಹಿಜಾಬ್ ಮತ್ತು ಬುರ್ಖಾ ಧರಿಸುವ ಮೂಲಕ ತಮ್ಮ ಧರ್ಮದ ಬೋಧನೆಗಳನ್ನು ಎತ್ತಿಹಿಡಿಯುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಸಿದ್ಧರಾಗಿರಬೇಕು ಎಂದು ಒತ್ತಾಯಿಸಲಾಯಿತು.

ಓದಿ: ಮುಂಬೈಗೂ ಕಾಲಿಟ್ಟ ಹಿಜಾಬ್ ವಿವಾದ : ಕಾಲೇಜ್​ಗಳಲ್ಲಿ ದುಪಟ್ಟಾ, ಮುಸುಕು, ಬುರ್ಖಾ ನಿಷೇಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.