ಕೊರೊನಾ ಸೋಂಕಿಗೆ ಒಳಗಾದವರಿಗೆ ಲಸಿಕೆ ಔಷಧ ಲಭ್ಯವಾಗಿದೆ. ಇದರೊಂದಿಗೆ ಇದೀಗ ನಾಸಲ ಸ್ಪ್ರೇಯನ್ನು ಪರಿಚಯಿಸಲಾಗಿದೆ. ಮುಂಬೈ ಮೂಲದ ಔಷಧೀಯ ಕಂಪನಿ ಗ್ಲೆನ್‌ಮಾರ್ಕ್ ಸೋಂಕಿತರ ಚಿಕಿತ್ಸೆಗಾಗಿ ಫ್ಯಾಬಿಸ್ಪ್ರೇ ಹೆಸರಿನಲ್ಲಿ ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇಯನ್ನು ಬಿಡುಗಡೆ ಮಾಡಿದೆ. ಕೆನಡಾದ ಔಷಧೀಯ ಕಂಪನಿ ಸ್ಯಾನೋಟೈಜ್ ಸಹಭಾಗಿತ್ವದಲ್ಲಿ ನಾಸಲ್ ಸ್ಪ್ರೇಯನ್ನು ಅಭಿವೃದ್ಧಿಪಡಿಸಲಾಗಿದೆ.
ಗ್ಲೆನ್‌ಮಾರ್ಕ್ ಸಂಸ್ಥೆಯು ಈ ಹಿಂದೆ ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇ (NONS)ನ ತುರ್ತು ಬಳಕೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(DCGI) ಗೆ ಮನವಿ ಸಲ್ಲಿಸಿತ್ತು.
ಫ್ಯಾಬಿಸ್ಪ್ರೇಯು ಶ್ವಾಸನಾಳದಲ್ಲಿನ ಕೊರೊನಾ ವೈರಸ್ ಅನ್ನು ಕೊಲ್ಲಲು ಸಹಾಯಕವಾಗುತ್ತದೆ. ಇದು ಸಾರ್ಸ್ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.
ನೈಟ್ರಿಕ್ ಆಕ್ಸೈಡ್ ನಾಸಲ್ ಸ್ಪ್ರೇಯನ್ನು ಮೂಗಿಗೆ ಸ್ಪ್ರೇ ಮಾಡಿದಾಗ ವೈರಸ್ ವಿರುದ್ಧ ಹೋರಾಡಿ, ವೈರಸ್ ವ್ಯಾಪಿಸದಂತೆ, ಶ್ವಾಸಕೋಶಕ್ಕೆ ಹಾನಿಯಾಗದಂತೆ ತಡೆಯುತ್ತದೆ. ಭಾರತದಲ್ಲಿ ಇದನ್ನು 3 ಹಂತದ ಕ್ಲಿನಿಕಲ್ ಪ್ರಯೋಗ ನಡೆದಿದ್ದು ಡಿಸಿಜಿಐ ಸೋಂಕಿತರ ಬಳಕೆಗೆ ಅನುಮತಿ ನೀಡಿದೆ.