ಇಂಫಾಲ(ಮಣಿಪುರ): ಮಣಿಪುರದ ಗಡಿ ಪಟ್ಟಣವಾದ ಮೊರೆಹ್ನ ಭಾಗಗಳಲ್ಲಿ ಸ್ಥಳೀಯ ಪೊಲೀಸರೊಂದಿಗೆ ಯೋಜಿತ ದಾಳಿ ನಡೆಸಿದ ಅಸ್ಸೋಂ ರೈಫಲ್ಸ್ ತಂಡ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ.
ಈ ದಾಳಿಯಲ್ಲಿ 167 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಡ್ರಗ್ಸ್ ಮತ್ತು ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಒಂದು ವಿದೇಶಿ 7.65 ಎಂಎಂ ಪಿಸ್ತೂಲ್ ಮತ್ತು ಡಿಬಿಬಿಎಲ್ ಗನ್ ಜೊತೆಗೆ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶೇಖರಣಾ ಮತ್ತು ವಿತರಣಾ ಕೇಂದ್ರಗಳಾಗಿ ಬಳಸಲಾಗುವ ಎರಡು ಸೇಫ್ ಹೌಸ್‌ಗಳಲ್ಲಿದ್ದ ಇಬ್ಬರು ಮ್ಯಾನ್ಮಾರ್ ಮತ್ತು ನಾಲ್ವರು ಭಾರತೀಯ ಸ್ಮಗ್ಲರ್ಗಳನ್ನು ಬಂಧಿಸಲಾಗಿದೆ.
ಅಂತಾರಾಷ್ಟ್ರೀಯ ಗಡಿಯ ಮೂಲಕ ಗಡಿಯಾಚೆಗಿನ ಕಳ್ಳಸಾಗಣೆಯನ್ನು ತಡೆಯುವ ಆದೇಶದೊಂದಿಗೆ ಈಶಾನ್ಯದಲ್ಲಿ ಡ್ರಗ್ಸ್ ಭಯೋತ್ಪಾದನೆ ಮತ್ತು ಬಂಡಾಯವನ್ನು ಎದುರಿಸಲು ಅಸ್ಸೋಂ ರೈಫಲ್ಸ್ ಮುಂಚೂಣಿಯಲ್ಲಿದೆ.