ETV Bharat / bharat

ಕುನೋ ಅರಣ್ಯದಲ್ಲಿ ನಮೀಬಿಯಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವನ್ನಪ್ಪಿದೆ. ಈ ಮೂಲಕ ಮೂರು ಮರಿಗಳು ಸೇರಿ 10 ಚೀತಾ ಮೃತಪಟ್ಟಿವೆ.

ಚೀತಾ ಸಾವು
ಚೀತಾ ಸಾವು
author img

By ETV Bharat Karnataka Team

Published : Jan 16, 2024, 10:13 PM IST

ಗ್ವಾಲಿಯರ್/ಶಿಯೋಪುರ: ನಮೀಬಿಯಾದಿಂದ ತರಲಾಗಿದ್ದ ಶೌರ್ಯ ಎಂಬ ಗಂಡು ಚೀತಾ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮಂಗಳವಾರ ಮೃತಪಟ್ಟಿದೆ. ಕುನೋ ರಾಷ್ಟ್ರೀಯ ಉದ್ಯಾನದ ಮೇಲ್ವಿಚಾರಣಾ ತಂಡವು ಚೀತಾವನ್ನು ಸಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ ಮಾಡಿದ್ದರು. ಬಳಿಕ ಅದು ಇಂದು ಬೆಳಗಿನ ಜಾವ 3.17 ನಿಮಿಷಕ್ಕೆ ಉಸಿರು ನಿಲ್ಲಿಸಿದೆ. ಈ ಮೂಲಕ ಮೂರು ಮರಿಗಳು ಸೇರಿದಂತೆ 10 ಚೀತಾಗಳು ಸಾವನ್ನಪ್ಪಿದಂತಾಗಿದೆ.

ನಮೀಬಿಯಾದಿಂದ ತರಲಾದ ಆಶಾ ಎಂಬ ಹೆಣ್ಣು ಚೀತಾ ಈಚೆಗೆ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಇದು ಭಾರೀ ಸಂತಸಕ್ಕೆ ಕಾರಣವಾಗಿತ್ತು. ಭಾರತದ ವಾತಾವರಣಕ್ಕೆ ಅವುಗಳು ಒಗ್ಗಿಕೊಂಡಿವೆ ಎಂದು ಭಾವಿಸಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ವಯಸ್ಕ ಚೀತಾ ಸಾವಿಗೀಡಾಗಿರುವುದು ಬೇಸರ ತರಿಸಿದೆ.

ಮರಣೋತ್ತರ ಪರೀಕ್ಷೆ ಬಳಿಕ ಮಾಹಿತಿ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾ ಸಾವಿಗೀಡಾಗಿದ್ದರ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಅದರ ವರದಿ ಬಂದ ಬಳಿಕ ಸಾವಿಗೆ ಕಾರಣ ಏನೆಂಬುದು ತಿಳಿದು ಬರುತ್ತದೆ ಎಂದು ಅವರು ಚೀತಾ ಮರುಸೃಷ್ಟಿ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ. ಚೀತಾಗಳ ಮೇಲೆ ತೀವ್ರ ನಿಗಾ ಇಟ್ಟಾಗ್ಯೂ ಸಾವು ಸಂಭವಿಸುತ್ತಿರುವುದು ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ.

ಕುನೊ ವನ್ಯಜೀವಿ ಅಭಯಾರಣ್ಯದಲ್ಲಿ ಚೀತಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಆರಂಭಿಸಿದ್ದರು. ನಮೀಬಿಯಾದಿಂದ ಚೀತಾಗಳನ್ನು ತಂದು ಅಭಯಾರಣ್ಯಕ್ಕೆ ಬಿಟ್ಟಿದ್ದರು. ಈಚೆಗೆ ಹೆಣ್ಣು ಚೀತಾ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಇದನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. "ಕುನೊ ರಾಷ್ಟ್ರೀಯ ಉದ್ಯಾನ ಮೂರು ಹೊಸ ಸದಸ್ಯರನ್ನು ಸ್ವಾಗತಿಸಿದೆ. ಆಶಾ ಚೀತಾ ಮರಿಗಳಿಗೆ ಜನ್ಮ ನೀಡಿದೆ. ಚೀತಾ ಯೋಜನೆಯು ದೇಶದಲ್ಲಿ ಯಶಸ್ವಿಯತ್ತ ಸಾಗಿದೆ" ಎಂದು ಬರೆದುಕೊಂಡಿದ್ದರು.

ಸಾವಿಗೆ ನಾನಾ ಕಾರಣ: ಸದ್ಯ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 13 ವಯಸ್ಕ ಚೀತಾಗಳು ಮತ್ತು ನಾಲ್ಕು ಮರಿಗಳಿವೆ. ಶೌರ್ಯನ ಸಾವಿನ ಮೂಲಕ ಇಲ್ಲಿಯವರೆಗೂ 10 ಚೀತಾಗಳು ಸಾವನ್ನಪ್ಪಿದಂತಾಗಿದೆ. ಚಿರತೆಗಳ ಸಾವಿನ ಹಿಂದಿನ ಕಾರಣಗಳಲ್ಲಿ ಸೋಂಕುಗಳು, ಹೃದಯ ಅಪಧಮನಿ ವೈಫಲ್ಯ ಮತ್ತು ಪ್ರಾಣಿಗಳ ನಡುವೆ ಕಿತ್ತಾಟ, ಗಾಯದ ಕಾರಣಕ್ಕಾಗಿ ಸಾವಿಗೀಡಾಗಿದ್ದವು.

ಕುನೋ ರಾಷ್ಟ್ರೀಯ ಉದ್ಯಾನವನ ಚೀತಾಗಳ ಸಂರಕ್ಷಣೆಯ ವಿಚಾರದಲ್ಲಿ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ. ಈಗ ಮರಣವನ್ನಪ್ಪಿರುವ ಶೌರ್ಯ ಚೀತಾದ ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಸಾವಿನ ಕಾರಣ ತಿಳಿದು ಬರಲಿದೆ.

ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದ ಚೀತಾ ಆಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.