ನಾಗಾಲ್ಯಾಂಡ್: ಭಾರತದ ರಾಜಕೀಯ ಇತಿಹಾಸದಲ್ಲಿ ಆಡಳಿತ-ಪ್ರತಿಪಕ್ಷ ಇರುವುದು ಸರ್ವೇ ಸಾಮಾನ್ಯ. ಆದರೆ ನಾಗಾಲ್ಯಾಂಡ್ನಲ್ಲಿ ವಿಪಕ್ಷವೇ ಇಲ್ಲದಂತಾಗಿದ್ದು, ಆಡಳಿತ ನಡೆಸುತ್ತಿರುವ NDPP ಜೊತೆ ವಿಪಕ್ಷಸ್ಥಾನದಲ್ಲಿದ್ದ ನಾಗಾ ಪೀಪಲ್ಸ್ ಫ್ರಂಟ್(NPF) ಮೈತ್ರಿ ಮಾಡಿಕೊಂಡಿದೆ.
ರಾಷ್ಟ್ರೀಯವಾದಿ ಪ್ರಜಾಪ್ರಭುತ್ವ ಪ್ರಗತಿಶೀಲ ಪಕ್ಷ(NDPP) ಜೊತೆ ಒಟ್ಟಾರೆ ಕೆಲಸ ಮಾಡಲು ನಿರ್ಧರಿಸಿರುವ ಕಾರಣ ಆಡಳಿತ ಪಕ್ಷದೊಂದಿಗೆ ವಿಪಕ್ಷ ಮೈತ್ರಿ ಮಾಡಿಕೊಂಡಿದೆ. ಎನ್ಪಿಎಫ್ ಕಾರ್ಯದರ್ಶಿ ಅಚುಂಬೆಮೊ ಕಿಕಾನ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಶಾಸಕಾಂಗ ಪಕ್ಷದ ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಎನ್ಪಿಎಫ್ ಪಕ್ಷದಲ್ಲಿ 25 ಚುನಾಯಿತ ಪ್ರತಿನಿಧಿಗಳಿದ್ದು, ಅವರಿಗೆ ಆಡಳಿತ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ನಾಗಾಲ್ಯಾಂಡ್ನಲ್ಲಿ ಯಾವುದೇ ರೀತಿಯ ಪ್ರತಿಪಕ್ಷ ಇಲ್ಲದಂತಾಗಿದೆ.
ವಿವಿಧ ಪಕ್ಷದಳ ಬಲಾಬಲ ಹೀಗಿದೆ..
ಆಡಳಿತ ಪಕ್ಷ ಎನ್ಡಿಪಿಪಿಯಲ್ಲಿ 60 ಶಾಸಕರಿದ್ದು, ಇದರಲ್ಲಿ 12 ಶಾಸಕರು ಬಿಜೆಪಿಯವರಿದ್ದಾರೆ. ಹಲವಾರು ವರ್ಷಗಳ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿತ್ತು. ಆದರೆ ಇದೀಗ ಓರ್ವ ಶಾಸಕ ಕೂಡ ಕೈ ಪಕ್ಷದಿಂದ ಆಯ್ಕೆಯಾಗಿಲ್ಲ. ಹೀಗಾಗಿ NEPP-NPF ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.