ಜ್ವಾಲಾಜಿ: ಕಳೆದ 15 ದಿನಗಳಿಂದ ನಿವೃತ್ತ ಪ್ರಾಂಶುಪಾಲರೊಬ್ಬರ ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಈ ನಿಗೂಢ ಬೆಂಕಿಯಿಂದ ಕುಟುಂಬಸ್ಥರು ಗಾಬರಿಗೊಂಡಿರುವ ಘಟನೆ ಬಾನಿ ಗ್ರಾಮದಲ್ಲಿ ಕಂಡು ಬಂದಿದೆ.
ಡೆಹ್ರಾ ಗ್ರಾಮ ಪಂಚಾಯ್ತಿಯ ಬಾನಿಯಲ್ಲಿರುವ ನಿವೃತ್ತ ಪ್ರಾಂಶುಪಾಲ ಹೋಶಿಯಾರ್ ಸಿಂಗ್ ಕುಟುಂಬವು ಭಯಭೀತವಾಗಿದೆ. ಕಳೆದ 15 ದಿನಗಳಿಂದ ಮನೆಯ ಯಾವುದಾದ್ರೂ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಆದ್ರೆ ಬೆಂಕಿ ಯಾಕೆ ಕಾಣಿಸಿಕೊಳ್ಳುತ್ತಿದೆ ಎಂಬುದು ನಿಗೂಢವಾಗಿದೆ. ಇದರಿಂದ ಕುಟುಂಬಸ್ಥರು ಭಯಭೀತರಾಗಿದ್ದಾರೆ.
ಇಡೀ ರಾತ್ರಿ ಕುಟುಂಬ ಸದಸ್ಯರು ಕಾವಲು ಕಾಯುತ್ತಿದ್ದೇವೆ. ಹಾಕಿಕೊಳ್ಳುತ್ತಿರುವ ಬಟ್ಟೆಗಳು ಸೇರಿದಂತೆ ಇತರ ವಸ್ತುಗಳು ಬೆಂಕಿಗಾಹುತಿಯಾಗುತ್ತಿವೆ. ಬೆಂಕಿ ನಂದಿಸಲು ಎಲ್ಲ ಕೋಣೆಗಳಲ್ಲಿ ಬಕೆಟ್ಗಳಲ್ಲಿ ನೀರನ್ನು ತುಂಬಿ ಇಡಲಾಗುತ್ತಿದೆ. ಅಡುಗೆ ಮನೆಯಲ್ಲಿರುವ ಗ್ಯಾಸ್ನ್ನು ಮನೆಯಿಂದ ಹೊರ ಇಡಲಾಗುತ್ತಿದೆ. ಈ ಬೆಂಕಿ ಬಗ್ಗೆ ಎಷ್ಟೇ ತಿಳಿಯಲು ಪ್ರಯತ್ನಿಸಿದ್ರೂ ಪ್ರಯೋಜನವಾಗುತ್ತಿಲ್ಲ. ಯಾವರೀತಿ ಬೆಂಕಿ ಬರತ್ತೋ... ಎಲ್ಲಿ ಬೆಂಕಿ ಬೀಳತ್ತೋ ಎಂಬುದು ತಿಳಿಯದಂತಾಗಿದೆ. ಇದರಿಂದ ಕುಟುಂಬದ ಸದಸ್ಯರೆಲ್ಲರೂ ಭಯಭೀತರಾಗಿದ್ದಾರೆಂದು ಹೋಶಿಯರ್ ಸಿಂಗ್ ಹೇಳಿದರು.
ಬಾಣಿಯಲ್ಲಿ ನಿಗೂಢ ಬೆಂಕಿ ಘಟನೆಗಳು ಎರಡು ದಶಕಗಳಿಂದ ನಡೆಯುತ್ತಲೇ ಇದೆ. ಕೆಲವೊಮ್ಮೆ ಇಂತಹ ಪ್ರಕರಣಗಳು ಜ್ವಾಲಾಮುಖಿಯಂತೆ ಬೆಳಕಿಗೆ ಬರುತ್ತದೆ. ಸುಮಾರು 15 ವರ್ಷಗಳ ಹಿಂದೆ ಜ್ವಾಲಾಮುಖಿಯಂತಹ ಬೆಂಕಿಯಲ್ಲಿ ಪ್ರಖ್ಯಾತ ಕುಟುಂಬವೊಂದು ಹಾನಿಗೊಳಗಾಗಿದೆ. ದಶಕದ ಹಿಂದೆ, ಜ್ವಾಲಾಮುಖಿಯಂತಹ ಪ್ರಕರಣಗಳು ನಡೆದಿದ್ದಾವೆ ಎಂದು ತೆಹ್ರಿ ಗ್ರಾಮಸ್ಥರು ಇಂತಹ ಘಟನೆ ಬಗ್ಗೆ ಹೇಳುತ್ತಿದ್ದಾರೆ.
ಈ ವಿಷಯ ಬೆಳಕಿಗೆ ಬಂದ ನಂತರ ಕೈಗಾರಿಕಾ ಸಚಿವ ಬಿಕ್ರಮ್ ಠಾಕೂರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಪರಿಷತ್ ಉಪಾಧ್ಯಕ್ಷ ಸ್ನೇಹಲತಾ ಪರ್ಮಾರ್ ಘಟನೆ ಬಗ್ಗೆ ಮಾಹಿತಿ ಪಡೆದ ಬಳಿಕ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.