ETV Bharat / bharat

ಮುತ್ತೂಟ್ ಗ್ರೂಪ್ ಅಧ್ಯಕ್ಷ ಎಂ.ಜಿ.ಜಾರ್ಜ್​ ಮುತ್ತೂಟ್ ಮೃತ

author img

By

Published : Mar 6, 2021, 4:10 AM IST

ಹಿಂದಿನ ವರ್ಷ ಫೋರ್ಬ್ಸ್ ಏಷಿಯಾ ಮ್ಯಾಗಜೀನ್ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಜಾರ್ಜ್ ಮುತ್ತೂಟ್ ದೇಶದ 26ನೇ ಶ್ರೀಮಂತ ವ್ಯಕ್ತಿ ಮತ್ತು ಮಲೆಯಾಳಿಗಳಲ್ಲಿ ನಂಬರ್ 1 ಶ್ರೀಮಂತ ವ್ಯಕ್ತಿ ಎಂದು ಘೋಷಿಸಿತ್ತು

MG George Muthoot
ಎಂ.ಜಿ.ಜಾರ್ಜ್​ ಮುತ್ತೂಟ್

ನವದೆಹಲಿ: ಮುತ್ತೂಟ್ ಗ್ರೂಪ್​ ಅಧ್ಯಕ್ಷ ಎಂ.ಜಿ.ಜಾರ್ಜ್ ಮುತ್ತೂಟ್ (72) ಶುಕ್ರವಾರ ಸಂಜೆ ತಮ್ಮ ಮನೆಯ ಮೆಟ್ಟಿಲುಗಳ ಮೇಲಿಂದ ಆಕಸ್ಮಿಕವಾಗಿ ಜಾರಿ ಬಿದ್ದು, ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಮೆಟ್ಟಿಲುಗಳಿಂದ ಬಿದ್ದಾಕ್ಷಣ ಅವರನ್ನು ದೆಹಲಿಯ ಎಸ್ಕಾರ್ಟ್​ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಎಂ.ಜಿ.ಜಾರ್ಜ್​ ಮೃತಪಟ್ಟಿರುವುದಾಗಿ ವೈದ್ಯರು ಸಂಜೆ 7 ಗಂಟೆಗೆ ಘೋಷಿಸಿದ್ದಾರೆ.

ನವೆಂಬರ್ 2, 1949ರಲ್ಲಿ ಜನಿಸಿದ್ದ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಸಣ್ಣ ನಗರದಲ್ಲಿ ಜನಿಸಿದ್ದ ಅವರು, 2020ರ ಫೋರ್ಬ್ಸ್​ ಪಟ್ಟಿಯಲ್ಲಿ ಕಾಣಿಸಿಕೊಂಡ ಆರು ಮಲೆಯಾಳಿ ಉದ್ಯಮಿಗಳ ಪೈಕಿ ಒಬ್ಬರಾಗಿದ್ದರು.

ಇದನ್ನೂ ಓದಿ: ಫಾಸ್ಟ್ ಟ್ಯಾಗ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಹಿಂದಿನ ವರ್ಷ ಫೋರ್ಬ್ಸ್ ಏಷಿಯಾ ಮ್ಯಾಗಜೀನ್ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಜಾರ್ಜ್ ಮುತ್ತೂಟ್ ದೇಶದ 26ನೇ ಶ್ರೀಮಂತ ವ್ಯಕ್ತಿ ಮತ್ತು ಮಲೆಯಾಳಿಗಳಲ್ಲಿ ನಂಬರ್ 1 ಶ್ರೀಮಂತ ವ್ಯಕ್ತಿ ಎಂದು ಘೋಷಿಸಿತ್ತು.

ಮುತ್ತೂಟ್ ಗ್ರೂಪ್​ನ ಅಂಗಸಂಸ್ಥೆಯಾದ ಮುತ್ತೂಟ್ ಫೈನಾನ್ಸ್​ ಇವರ ನಾಯಕತ್ವದಲ್ಲಿ ನಡೆಯುತ್ತಿದ್ದು, ದೇಶದ ಅತಿ ದೊಡ್ಡ ಚಿನ್ನದ ಮೇಲೆ ಸಾಲ ನೀಡುವ ಕಂಪನಿಯಾಗಿದೆ.

ಈ ಕಂಪನಿ 1 ಸಾವಿರ ಕೋಟಿ ನಿವ್ವಳ ಆದಾಯವಿರುವ ಕ್ಲಬ್​​ಗೆ ಸೇರಿದ ಮೊಟ್ಟ ಮೊದಲ ಬ್ಯಾಂಕೇತರ ಹಣಕಾಸು ಸಂಸ್ಥೆ ಹೆಗ್ಗಳಿಕೆಯೂ ಇದೆ. ಇವರ ನಾಯಕತ್ವಲ್ಲಿಯೇ ಮುತ್ತೂಟ್ ಗ್ರೂಪ್ ಸುಮಾರು 20 ವಿವಿಧ ಸಂಸ್ಥೆಗಳನ್ನು ಹುಟ್ಟುಹಾಕಿರುವುದು ಮಾತ್ರವಲ್ಲದೇ, ವಿಶ್ವದಾದ್ಯಂತ ಸುಮಾರು 5,500 ಬ್ರಾಂಚ್​​ಗಳನ್ನು ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.