ETV Bharat / bharat

ಗುರುವಾಯೂರು ದೇವಾಲಯಕ್ಕೆ ಮುಸ್ಲಿಂ ಯುವತಿಯಿಂದ ಶ್ರೀಕೃಷ್ಣನ 101 ಕಲಾಕೃತಿ ಉಡುಗೊರೆ

ಗುರುವಾಯೂರು ದೇವಸ್ಥಾನಕ್ಕೆ 101 ಶ್ರೀ ಕೃಷ್ಣನ ಕಲಾಕೃತಿ ನೀಡಿದ ಮುಸ್ಲಿಂ ಯುವತಿ - ತಾಮರಸ್ಸೆರಿಯ ಮುಸ್ಲಿಂ ಯುವತಿ ಜಸ್ನಾ ಅವರಿಂದ ಶ್ರೀ ಕೃಷ್ಣನ ಕಲಾಕೃತಿ ರಚನೆ - ಎಂಟು ವರ್ಷಗಳಲ್ಲಿ ಸುಮಾರು 500 ಕಲಾಕೃತಿಗಳನ್ನು ಬಿಡಿಸಿರುವ ಕಲಾವಿದೆ

Muslim woman Jasna consecrate 101 portraits of Lord Krishna to the Guruvayoor temple
ಗುರುವಾಯೂರು ದೇವಾಲಯಕ್ಕೆ ಮುಸ್ಲಿಂ ಯುವತಿಯಿಂದ ಶ್ರೀಕೃಷ್ಣನ 101 ಕಲಾಕೃತಿ ಉಡುಗೊರೆ
author img

By

Published : Jan 1, 2023, 5:42 PM IST

Updated : Jan 1, 2023, 6:56 PM IST

ಗುರುವಾಯೂರು ದೇವಾಲಯಕ್ಕೆ ಮುಸ್ಲಿಂ ಯುವತಿಯಿಂದ ಶ್ರೀಕೃಷ್ಣನ 101 ಕಲಾಕೃತಿ ಉಡುಗೊರೆ

ಕೋಯಿಕ್ಕೋಡ್(ಕೇರಳ): ಇಲ್ಲಿನ ತಾಮರಸ್ಸೆರಿಯ ಮುಸ್ಲಿಂ ಯುವತಿ ಗುರುವಾಯೂರು ದೇವಸ್ಥಾನಕ್ಕೆ 101 ಶ್ರೀ ಕೃಷ್ಣನ ಕಲಾಕೃತಿಗಳನ್ನು ತನ್ನ ಕೈಯಾರೆ ಚಿತ್ರಿಸಿ ಉಡುಗೊರೆ ನೀಡಿದ್ದಾರೆ. ಹೊಸ ವರ್ಷದ ಹಿನ್ನಲೆ ಇಂದು ದೇವಾಲಯದ ತಂತ್ರಿಗಳ ನೇತೃತ್ವದಲ್ಲಿ ಕೃಷ್ಣನ ಕಲಾಕೃತಿಗಳನ್ನು ದೇವಾಲಯಕ್ಕೆ ಹಸ್ತಾಂತರಿಸಿದರು.

ಜಸ್ನಾ ಸಲೀಂ ಮೂಲತಃ ಕೋಯಿಕ್ಕೋಡ್​ ಜಿಲ್ಲೆಯ ತಾಮಸ್ಸೇರಿಯ ನಿವಾಸಿಯಾಗಿದ್ದಾರೆ. ಹಿಂದೊಮ್ಮೆ ತಮ್ಮ ಮನೆ ನಿರ್ಮಾಣ ಸಂದರ್ಭ ನಿರ್ಮಿಸಿದ್ದ ಶೆಡ್​ನಲ್ಲಿ ಮೊದಲ ಬಾರಿಗೆ ಜಸ್ನಾ ಕೃಷ್ಣನ ಭಾವಚಿತ್ರವನ್ನು ಕಂಡು ಕುತೂಹಲದಿಂದ ಬಿಡಿಸಿದ್ದರು. ಈಕೆಯ ಪ್ರತಿಭೆಯನ್ನು ಕಂಡ ಪತಿ ಶ್ಲಾಘಿಸಿದರೂ, ಮನೆಯವರಿಗೆ ತಿಳಿದರೆ ತೊಂದರೆಯಾಗುತ್ತದೆ ಎಂದು ಹೇಳಿ ಚಿತ್ರವನ್ನು ಹಾಳು ಮಾಡುವಂತೆ ಸೂಚಿಸಿದ್ದರು. ಆದರೆ ಇದಕ್ಕೆ ಒಪ್ಪದ ಜಸ್ನಾ, ಅಂತಿಮವಾಗಿ ಈ ಕಲಾಕೃತಿಯನ್ನು ತಾಮರಸ್ಸೆರಿಯ ನಂಬೂದಿರಿ ಕುಟುಂಬಕ್ಕೆ ಉಡುಗೊರೆಯಾಗಿ ನೀಡಿದ್ದರು.

ಮುಸ್ಲಿಂ ಯುವತಿ ಶ್ರೀ ಕೃಷ್ಣನ ಚಿತ್ರ ಬಿಡಿಸಿದ್ದು, ಈ ನಂಬೂದಿರಿ ಅವರಿಂದ ಗ್ರಾಮದೆಲ್ಲೆಡೆ ಹರಡಿತು. ಇದರಿಂದಾಗಿ ಜಸ್ನಾರಿಗೆ ಕೃಷ್ಣನ ಕಲಾಕೃತಿಯನ್ನು ಚಿತ್ರಿಸಿ ಕೊಡುವಂತೆಯೂ ಬೇಡಿಕೆ ಬರತೊಡಗಿತು.ಇಂದು ಜಸ್ನಾರಿಗೆ ಇದು ಕೇವಲ ಹವ್ಯಾಸವಾಗಿರದೇ ಜೀವನಾಧಾರವಾಗಿದೆ.

ಜಸ್ನಾ ಕಳೆದ ಎಂಟು ವರ್ಷಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಕಲಾಕೃತಿಗಳನ್ನು ಮಾಡಿದ್ದಾರೆ. ಇದೀಗ ಪತ್ತನಂತಿಟ್ಟ ಜಿಲ್ಲೆಯ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಕೃಷ್ಣನ ಭಾವಚಿತ್ರ ನೀಡುವ ಮತ್ತು ಕೃಷ್ಣನ ದರ್ಶನಕ್ಕೆ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಜಸ್ನಾ ಹೇಳುತ್ತಾರೆ.

ಈ 101 ಕಲಾಕೃತಿಗಳನ್ನು ಮಾಡಲು ಸುಮಾರು ನಾಲ್ಕು ತಿಂಗಳು ತೆಗೆದುಕೊಂಡಿದ್ದೇನೆ. ಇದಕ್ಕೆ ತಂದೆ, ತಾಯಿ, ಪತಿ ಕೂಡ ನನಗೆ ಬೆಂಬಲ ನೀಡಿದ್ದಾರೆ. ಈ ವಿವಿಧ ಗಾತ್ರದ ಕಲಾಕೃತಿಗಳನ್ನು ಗುರುವಾಯೂರು ದೇವಾಲಯಕ್ಕೆ ಉಡುಗೊರೆ ನೀಡಿದ್ದು, ಶ್ರೀ ಕೃಷ್ಣ ನಮಗೆ ದಾರಿ ತೋರುತ್ತಾನೆ ಎಂದು ಹೇಳಿದ್ದಾರೆ.

ಈ ನಡುವೆಯೂ ತನ್ನ ಹವ್ಯಾಸವನ್ನು ಒಪ್ಪಿಕೊಳ್ಳಲು ತಮ್ಮದೇ ಕುಟುಂಬದ ಅನೇಕರಿಗೆ ಸಾಧ್ಯವಾಗಿಲ್ಲ. ತನ್ನ ಸಂಬಂಧಿಕರ ತಿರಸ್ಕಾರ ಮತ್ತು ಬಹಿಷ್ಕಾರದಿಂದ ನಾನು ದುಃಖಿತಳಾಗಿದ್ದೇನೆ. ಆದರೆ ನನಗೆ ದೊರೆಯುವ ಆಂತರಿಕ ಬೆಂಬಲವನ್ನು ನಂಬಿದ್ದೇನೆ ಎಂದು ಜಸ್ನಾ ಹೇಳುತ್ತಾರೆ.

ಇದನ್ನೂ ಓದಿ : ಸಾಯಿ ಬಾಬಾಗೆ ಚಿನ್ನದ ಕಿರೀಟ ಅರ್ಪಿಸಿ ಹೊಸ ವರ್ಷ ಆರಂಭಿಸಿದ ಬೆಂಗಳೂರಿನ ದಂಪತಿ

Last Updated : Jan 1, 2023, 6:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.