ಭಾಗಲ್ಪುರ(ಬಿಹಾರ): ಧರ್ಮದ ಗೋಡೆ ಒಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೀತಿಯ ಜೋಡಿಯೊಂದು ಇಂಥದ್ದೊಂದು ಮದುವೆಗೆ ಬಿಹಾರದ ಭಾಗಲ್ಪುರದ ಪಿರಪೈಂಟಿ ಕಾಳಿ ದೇವಸ್ಥಾನ ಸಾಕ್ಷಿಯಾಗಿದೆ. ಈ ಮದುವೆಯ ವಿಶೇಷವೆಂದರೆ ಮುಸ್ಲಿಂ ಹುಡುಗಿಯೊಬ್ಬಳು ತನ್ನ ಧರ್ಮವನ್ನು ಬದಲಿಸಿ ಸನಾತನ ಧರ್ಮವನ್ನು ಅಳವಡಿಸಿಕೊಂಡು ಹಿಂದೂ ಹುಡುಗನನ್ನು ಮದುವೆಯಾಗಿದ್ದಾರೆ.
ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದ ಜೋಡಿ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ಸಪ್ತಪದಿ ತುಳಿದಿದೆ. ಮದುವೆಯಾದ ಬಳಿಕ ಇದೀಗ ವಧುವಿನ ಕುಟುಂಬಸ್ಥರು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ವಿವಾಹಿತ ಜೋಡಿ ರಕ್ಷಣೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹಿಂದೂ ಹುಡುಗನನ್ನು ಮದುವೆಯಾಗಿದ್ದಕ್ಕೆ ಕೊಲೆ ಬೆದರಿಕೆ: ಗೊಡ್ಡಾ ಜಿಲ್ಲೆಯ ಮೆಹ್ರಾಮಾ ಪ್ರದೇಶದ ನಿವಾಸಿ ರಾಮ್ ಕುಮಾರ್ ಮತ್ತು ಮುಸ್ಕಾನ್ ಖಾತೂನ್ ಪ್ರೀತಿಸುತ್ತಿದ್ದರು. ಒಂದು ವರ್ಷ ಪ್ರೀತಿಯ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಹುಡುಗಿ ಮುಸ್ಲಿಂ ಆಗಿದ್ದರಿಂದ ಆಕೆಯ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.
ಇದಕ್ಕೆ ಮುಸ್ಕಾನ್ ಅಕ್ಟೋಬರ್ 17ರಂದು ಗೊಡ್ಡಾ ನ್ಯಾಯಾಲಯಕ್ಕೆ ಬಂದು ಕಾನೂನು ರೀತಿಯ ರಿಜಿಸ್ಟರ್ ವಿವಾಹವಾದರು. ಈ ಬಗ್ಗೆ ತಿಳಿದ ಮುಸ್ಕಾನ್ ಕುಟುಂಬಸ್ಥರು ಕೋರ್ಟ್ಗೆ ಬಂದು ಅಲ್ಲೇ ಅವಳಿಗೆ ಹಲ್ಲೆ ಮಾಡಿದ್ದರು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಮತ್ತು ಮುಸ್ಕಾನ್ಗೆ ಪೊಲೀಸ್ ರಕ್ಷಣೆ ನೀಡಲಾಗಿದೆ.
ನನ್ನ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದೇನೆ: ನನ್ನ ಸ್ವಂತ ಇಚ್ಛೆಯ ಮೇರೆಗೆ ಮದುವೆಯಾಗುತ್ತಿದ್ದು, ಈ ಮದುವೆಯಿಂದ ನನಗೆ ಸಂತೋಷವಾಗಿದೆ ಎಂದು ಮುಸ್ಕಾನ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಇದೇ ಸಮಯದಲ್ಲಿ ತನ್ನ ಕುಟುಂಬದಿಂದ ಜೀವಕ್ಕೆ ಅಪಾಯವಿದೆ ಎಂದು ಪೊಲೀಸರ ರಕ್ಷಣೆಯನ್ನೂ ಕೇಳಿದ್ದಾಳೆ.
ಮನೆಯವರಿಂದ ಪ್ರಾಣ ಭಯ : ನನ್ನ ಮನೆಯವರು ಮದುವೆಗೆ ಸಿದ್ಧರಿರಲಿಲ್ಲ. ಈಗ ಅಮ್ಮ, ಅಪ್ಪ, ಮಾವ ಎಲ್ಲರೂ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನಾನು ನನ್ನ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದೇನೆ. ಯಾವುದೇ ಒತ್ತಡವಿಲ್ಲ, ಈಗ ನಮಗೆ ಭಯವಾಗುತ್ತಿದೆ ಎಂದು ಮುಸ್ಕಾನ್ ಖಾತೂನ್ ಹೇಳಿದ್ದಾಳೆ.
ಹಿಂದೂ ಸಂಪ್ರದಾಯದಂತೆ ವಿವಾಹ: ಭಾಗಲ್ಪುರದ ಪಿರಪೈಂಟಿ ಕಾಳಿ ದೇವಸ್ಥಾನದಲ್ಲಿ ಮುಸ್ಕಾನ್ ಸನಾತನ ಧರ್ಮವನ್ನು ಒಪ್ಪಿಕೊಂಡಿದ್ದಾರೆ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾಳೆ. ಈ ವಿವಾಹಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಸಾಕ್ಷಿಯಾದರು.
ಇದನ್ನೂ ಓದಿ: ಶ್ರದ್ಧಾ ಶವದ ಪಕ್ಕ ಕುಳಿತು ಗಾಂಜಾ ಸೇದಿದ್ದ ಅಫ್ತಾಬ್: ಮತ್ತೊಂದು ಬ್ಯಾಗ್ ಪತ್ತೆ, ಸ್ನೇಹಿತರ ಚಾಟಿಂಗ್ ಪರಿಶೀಲನೆ