ETV Bharat / bharat

ತಿರುಮಲ ದೇವಸ್ಥಾನಕ್ಕೆ 1 ಕೋಟಿ ರೂಪಾಯಿ ದೇಣಿಗೆ ಅರ್ಪಿಸಿದ ಮುಸ್ಲಿಂ ದಂಪತಿ - ತಿರುಪತಿ ತಿರುಮಲ ದೇವಸ್ಥಾನ

ಮುಸ್ಲಿಂ ದಂಪತಿಯೊಬ್ಬರು ತಿರುಮಲ ತಿರುಪತಿ ದೇವಸ್ಥಾನಕ್ಕೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮ ರೆಡ್ಡಿ ದೇಣಿಗೆ ಸ್ವೀಕರಿಸಿದರು.

ತಿರುಮಲ ದೇವಸ್ಥಾನಕ್ಕೆ ಕೋಟಿ ರೂಪಾಯಿ ದೇಣಿಗೆ ಅರ್ಪಿಸಿದ ಮುಸ್ಲಿಂ ದಂಪತಿ
a-muslim-couple-donated-crores-of-rupees-to-the-tirumala-temple
author img

By

Published : Sep 21, 2022, 11:24 AM IST

ತಿರುಪತಿ: ಅಪರೂಪದ ಬೆಳವಣಿಗೆಯೊಂದರಲ್ಲಿ ಮುಸ್ಲಿಂ ದಂಪತಿಯೊಬ್ಬರು ತಿರುಪತಿ ತಿರುಮಲ ದೇವಸ್ಥಾನಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಚೆನ್ನೈ ಮೂಲದ ದಂಪತಿ ಸುಬೀನಾ ಬಾನು ಮತ್ತು ಅಬ್ದುಲ್ ಘನಿ ಇವರು ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ತಿರುಮಲದಲ್ಲಿ ಹೊಸದಾಗಿ ನಿರ್ಮಿಸಲಾದ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ 87 ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣ, ಪಾತ್ರೆ ಮತ್ತು ಎಸ್‌ವಿ ಅನ್ನ ಪ್ರಸಾದ ಟ್ರಸ್ಟ್‌ಗೆ 15 ಲಕ್ಷ ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್ ಇದರಲ್ಲಿ ಸೇರಿವೆ. ದಂಪತಿಯು ದೇಣಿಗೆಯ ಚೆಕ್ ಅನ್ನು ದೇವಾಲಯದ ವ್ಯವಹಾರಗಳನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗೆ ನೀಡಿದರು.

ಕುಟುಂಬದ ದೇಣಿಗೆಯನ್ನು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮ ರೆಡ್ಡಿ ಅವರು ಚೆಕ್ ರೂಪದಲ್ಲಿ ಔಪಚಾರಿಕವಾಗಿ ಸ್ವೀಕರಿಸಿ, ದಂಪತಿಗೆ ಧನ್ಯವಾದ ಅರ್ಪಿಸಿದರು.

ಟಿಟಿಡಿ ವೇದ ಪಂಡಿತರು ವೇದಾಶೀರ್ವಾದ ಮಾಡಿದರು. ಇದರ ನಂತರ ದೇವಾಲಯದ ಅಧಿಕಾರಿಗಳು ಅಬ್ದುಲ್ ಘನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಪ್ರಸಾದ ನೀಡಿದ್ದು ವಿಶೇಷವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.