ದೇವುಣಿ ಕಡಪ (ಆಂಧ್ರಪ್ರದೇಶ): ಯುಗಾದಿ ಹಬ್ಬ ಆಚರಿಸಲು ಭಕ್ತರ ದಂಡು ದೇವಸ್ಥಾನಗಳಿಗೆ ಹರಿದು ಬರುತ್ತಿದೆ. ತಿರುಮಲ ತಿರುಪತಿಯ ಮೊದಲ ಪ್ರವೇಶ ದ್ವಾರ ಎಂದು ಕರೆಯಲ್ಪಡುವ ದೇವುಣಿ ಕಡಪದಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮುಸ್ಲಿಂ ಬಾಂಧವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಬೀಬಿ ನಾಂಚಾರಮ್ಮನನ್ನು ಮುಸ್ಲಿಂ ಬಾಂಧವರ ತಮ್ಮ ಮಗಳು ಎಂದು ಪರಿಗಣಿಸುತ್ತಾರೆ. ಹೀಗಾಗಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುವುದು ಇಲ್ಲಿ ಸಂಪ್ರದಾಯವಾಗಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಉಂದ್ರಜಾವರಂ ಮುತ್ಯಾಲಮ್ಮ ಪೇಟೆಯಲ್ಲಿ ಶುಭಕೃತ್ ನಾಮ ಯುಗಾದಿ ನಿಮಿತ್ತ ಅಮ್ಮವಾರಿ ದೇವಿಯ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕಿದವು. ಬೆಳಗ್ಗೆಯಿಂದಲೇ ಭಕ್ತರು ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ಯುಗಾದಿಯಂದೇ ಮಹಾ ಅಪಘಾತ...11 ಮಂದಿ ದುರ್ಮರಣ, ಹಲವರ ಸ್ಥಿತಿ ಗಂಭೀರ