ಪಾಲ್ಗರ್(ಮಹಾರಾಷ್ಟ್ರ): ವಸಾಯಿಯಲ್ಲಿನ ಲಾಡ್ಜ್ವೊಂದರಲ್ಲಿ ಅಪ್ರಾಪ್ತೆಯ ಕೊಲೆ ಮಾಡಿರುವ ಯುವಕನೋರ್ವ ತಂದನಂತರ ರೈಲು ಹಳಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಹಾರಾಷ್ಟ್ರದ ಕಲಾಂಬ್ ಲಾಡ್ಜ್ನಲ್ಲಿ ಬಾಲಕಿಯನ್ನು ಕೊಂದು, ತದನಂತರ ಆತನೂ ಸಾವಿಗೆ ಶರಣಾಗಿದ್ದಾನೆ.
21 ವರ್ಷದ ಅಭಿಷೇಕ್ ಶಾ ತನ್ನ 17 ವರ್ಷದ ಗೆಳತಿಯೊಂದಿಗೆ ಲಾಡ್ಜ್ವೊಂದಕ್ಕೆ ಬಂದಿದ್ದನು. ಕೆಲ ಸಮಯದ ಬಳಿಕ ಆತ ಊಟ ತರುವುದಾಗಿ ಲಾಡ್ಜ್ ಮಾಲೀಕರಿಗೆ ಹೇಳಿ ಹೊರಹೋಗಿದ್ದಾನೆ. ತುಂಬಾ ಸಮಯವಾದ್ರೂ ಹಿಂತಿರುಗಲಿಲ್ಲ. ಹೀಗಾಗಿ ಲಾಡ್ಜ್ ಮಾಲೀಕರು ಕೋಣೆಗೆ ಹೋಗಿ ನೋಡಿದಾಗ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಇದರ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಗೆ ಪೊಲೀಸರು ಹುಡುಕಾಟ ನಡೆಸಿದ್ದು, ಈ ವೇಳೆ ರೈಲಿನಡಿ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಿಳಿದು ಬಂದಿದೆ.
ಇದನ್ನೂ ಓದಿ: ದಾಂಪತ್ಯಕ್ಕೆ ಕಾಲಿಟ್ಟ ಆಲಿಯಾ-ರಣ್ಬೀರ್: ನೋಡಿ Mr And Mrs ಕಪೂರ್ ಜೋಡಿ!
ಮೃತ ಬಾಲಕಿ ಅಪ್ರಾಪ್ತೆಯಾಗಿದ್ದು, ಆಕೆ ಲಾಡ್ಜ್ಗೆ ಬಂದಿದ್ದು ಹೇಗೆ? ಅವರಿಗೆ ಲಾಡ್ಜ್ ಮಾಲೀಕರು ರೂಂನಲ್ಲಿರಲು ಅವಕಾಶ ನೀಡಿದ್ದು ಯಾವ ಆಧಾರದ ಮೇಲೆ? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಉದ್ಭವವಾಗಿವೆ.