ETV Bharat / bharat

ದೇಶದ ಅತಿದೊಡ್ಡ ಚಿನ್ನಾಭರಣ ದರೋಡೆ ಪ್ರಕರಣದ ಆರೋಪಿ ಹತ್ಯೆ!.. ಈತನ ವಿರುದ್ಧದ ಆರೋಪ ಎಂತಹದ್ದು ಗೊತ್ತಾ?

author img

By ETV Bharat Karnataka Team

Published : Sep 11, 2023, 4:59 PM IST

gold heist accused killed: ದುಷ್ಕರ್ಮಿಗಳು ದೇಶದ ಅತಿದೊಡ್ಡ ಚಿನ್ನಾಭರಣ ದರೋಡೆ ಪ್ರಕರಣದ ಆರೋಪಿಯಾಗಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಮುತ್ತೂಟ್ ಫೈನಾನ್ಸ್ ಕಂಪನಿಯಿಂದ ಸುಮಾರು 55 ಕೆಜಿ ಚಿನ್ನವನ್ನು ಲೂಟಿ ಮಾಡಿದ್ದ ಪ್ರಕರಣದಲ್ಲಿ ಹತ ವ್ಯಕ್ತಿ ಪ್ರಮುಖ ಆರೋಪಿಯಾಗಿದ್ದ.

ದೇಶದ ಅತಿದೊಡ್ಡ ಚಿನ್ನಾಭರಣ ದರೋಡೆ ಪ್ರಕರಣದ ಆರೋಪಿಯಾಗಿದ್ದ ವ್ಯಕ್ತಿಯ ಹತ್ಯೆ!
Etv Bharat murder of a man who was accused in the countrys biggest gold heist case in Hajipur

ಹಾಜಿಪುರ(ಬಿಹಾರ): 2019ರಲ್ಲಿ ವೈಶಾಲಿಯಲ್ಲಿ ನಡೆದಿದ್ದ ದೇಶದ ಅತಿದೊಡ್ಡ ಚಿನ್ನಾಭರಣ ದರೋಡೆ ಪ್ರಕರಣದ ಆರೋಪಿಯಾಗಿದ್ದ ಹನಿ ರಾಜ್‌ ಎಂಬುವವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಭಾನುವಾರ ರಾತ್ರಿ ನಡೆದ ಗ್ಯಾಂಗ್ ವಾರ್‌ನಲ್ಲಿ ಹತ್ಯೆ ನಡೆದಿದೆ ಎಂದು ವರದಿಯಾಗಿದೆ. ಎರಡು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಯೂಸುಫ್ ಅಲಿಯಾಸ್ ಹನಿ ರಾಜ್ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಡೀ ಪ್ರಕರಣ ಜಿಲ್ಲೆಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆರ್‌ಎನ್‌ ಕಾಲೇಜು ಬಳಿ ನಡೆದಿದೆ. ಘಟನೆಯ ದೃಶ್ಯಾವಳಿಗಳು ಇಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಭಾನುವಾರ ರಾತ್ರಿ 9.45ರ ಸುಮಾರಿಗೆ ಎರಡು ಬೈಕುಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಹನಿ ರಾಜ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳೆಲ್ಲ ಬೇರೆ ಬೇರೆ ಕಡೆಗೆ ಪರಾರಿಯಾಗಿದ್ದಾರೆ.

ಸ್ನೇಹಿತನ ಮನೆಯಲ್ಲಿ ವಾಸಿಸುತ್ತಿದ್ದ ಹನಿ ರಾಜ್‌: ಮೃತನು ಕಳೆದ ಹಲವಾರು ದಿನಗಳಿಂದ ತನ್ನ ಸ್ನೇಹಿತನ ಮನೆಯಲ್ಲಿ ವಾಸಿಸುತ್ತಿದ್ದನು ಎಂದು ಹೇಳಲಾಗುತ್ತಿದೆ. ಘಟನೆಯ ನಂತರ, ಹನಿ ರಾಜ್ ಅವರ ಸ್ನೇಹಿತ ಅವರ ಕುಟುಂಬಕ್ಕೆ ಕರೆ ಮಾಡಿ ಸದರ್ ಆಸ್ಪತ್ರೆಗೆ ಬರುವಂತೆ ಹೇಳಿದ್ದಾನೆ. ಅವರ ಕುಟುಂಬವು ಆಸ್ಪತ್ರೆಗೆ ತಲುಪಿದ ಕೂಡಲೇ ಹನಿ ರಾಜ್​ನ ಸ್ನೇಹಿತ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಘಟನೆಯ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಬಗ್ಗೆ ನೀಡಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಐದು ತಿಂಗಳ ಹಿಂದೆ ಜೈಲಿನಿಂದ ಹೊರಬಂದಿದ್ದ ಹನಿ ರಾಜ್‌: ಪೊಲೀಸರ ಪ್ರಕಾರ, 2019ರಲ್ಲಿ ನಗರ ಪೊಲೀಸ್ ಠಾಣೆ ಪ್ರದೇಶದ ಮುತ್ತೂಟ್ ಫೈನಾನ್ಸ್ ಕಂಪನಿಯಿಂದ ಸುಮಾರು 55 ಕೆಜಿ ಚಿನ್ನವನ್ನು ಲೂಟಿ ಮಾಡಲಾಗಿತ್ತು. ಇದರಲ್ಲಿ ಮೃತನು ಆರೋಪಿಯಾಗಿದ್ದನು ಮತ್ತು ದೀರ್ಘಕಾಲ ಜೈಲಿನಲ್ಲಿದ್ದನು. ಮೃತ ವ್ಯಕ್ತಿ ಸುಮಾರು ಐದು ತಿಂಗಳ ಹಿಂದೆ ಜೈಲಿನಿಂದ ಹೊರಬಂದಿದ್ದ ಎಂದು ಹೇಳಿದ್ದಾರೆ.

ಪೊಲೀಸರು ನೀಡುವ ಮಾಹಿತಿ ಹೀಗಿದೆ; ಹಾಜಿಪುರ ಎಸ್‌ಡಿಪಿಒ ಓಂಪ್ರಕಾಶ್ ಮಾತನಾಡಿ, ಆರ್.ಎನ್.ಕಾಲೇಜಿನ ಬಳಿ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಅಪರಿಚಿತರು ಬಗ್ದುಲ್‌ಹಾನ್‌ ನಿವಾಸಿ ಹನಿರಾಜ್‌ ಎಂಬುವವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ನಾಲ್ಕರಿಂದ ಐದು ಗುಂಡುಗಳು ಬೆನ್ನಿಗೆ ತಗುಲಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹನಿರಾಜ್‌ಗೆ ಅಪರಾಧದ ಹಿನ್ನೆಲೆ ಇತ್ತು. 2019 ರಲ್ಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮುತ್ತೂಟ್ ಫೈನಾನ್ಸ್‌ನ ಚಿನ್ನಾಭರಣ ದರೋಡೆ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ. ಪ್ರಕರಣ ಸಂಬಂಧ ಬಂಧನಕ್ಕೂಳಗಾಗಿದ್ದ ಈತ ನಾಲ್ಕೈದು ತಿಂಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ. ಈ ಘಟನೆಯ ಅಪರಾಧಿಗಳು ಪರಾರಿಯಾಗಿರುವ ಕಡೆಗಳ ಸಿಸಿಟಿವಿ ದೃಶ್ಯಾವಳಿಗಳು ಪತ್ತೆಯಾಗಿವೆ. ಅವರನ್ನು ಪತ್ತೆ ಹಚ್ಚಿ ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಹಳೆ ದ್ವೇಷಕ್ಕೆ ಕಾರು ಹರಿಸಿ ಬಾಲಕನ ಕೊಂದ ಕೀಚಕ.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.