ETV Bharat / bharat

ದೆಹಲಿ ಪಾಲಿಕೆ ಗದ್ದುಗೆ ಏರಿದ ಆಮ್​ ಆದ್ಮಿ..​15 ವರ್ಷಗಳ ಬಿಜೆಪಿ ಆಡಳಿತಕ್ಕೆ ಇತಿಶ್ರೀ - ದೆಹಲಿ ಪಾಲಿಕೆ ಗದ್ದುಗೆ ಏರಿದ ಆಮ್​ ಆದ್ಮಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಜ್ಷ ಭರ್ಜರಿ ಜಯ ಸಾಧಿಸಿದೆ. 126 ಮ್ಯಾಜಿಕ್​ ನಂಬರ್​ಗಳನ್ನು ದಾಟಿರುವ ಪಕ್ಷ ಗದ್ದುಗೆ ಹಿಡಿದಿದೆ. ಅಂತಿಮ ಫಲಿತಾಂಶ ಘೋಷಣೆಯೊಂದೇ ಬಾಕಿ ಇದೆ.

municipal-corporation-of-delhi
ದೆಹಲಿ ಪಾಲಿಕೆ ಮತ ಎಣಿಕೆ
author img

By

Published : Dec 7, 2022, 10:33 AM IST

Updated : Dec 7, 2022, 3:46 PM IST

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯಲ್ಲಿ 15 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಬಿಜೆಪಿಯನ್ನು ಹಿಮ್ಮೆಟ್ಟಿಸಿದ ಆಮ್​ ಆದ್ಮಿ ಪಕ್ಷ ಚುನಾವಣೆಯಲ್ಲಿ ಗೆದ್ದು ಗದ್ದುಗೆ ಏರಿದೆ. 250 ಸ್ಥಾನಗಳ ಮತ ಎಣಿಕೆಯಲ್ಲಿ ಆಪ್​ 126 ಸ್ಥಾನಗಳನ್ನು ಜಯಿಸಿದ್ದು, ಮ್ಯಾಜಿಕ್​ ನಂಬರ್​ಗೆ ಬೇಕಾದ ಸ್ಥಾನಗಳನ್ನು ಸಂಪಾದಿಸಿದೆ. ಇನ್ನೂ 8 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ.

ಗೆಲುವಿನ ಸಂಭ್ರಮದಲ್ಲಿ ಬಿಜೆಪಿ, ಆಪ್​ ಕಾರ್ಯಕರ್ತರು

ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ನಡೆಸುತ್ತಿರುವ ಆಪ್ ಇದೀಗ ಪಾಲಿಕೆಯಲ್ಲೂ ಅಧಿಕಾರ ಸ್ಥಾಪಿಸಿದೆ. ಈ ಗೆಲುವಿನ ಮೂಲಕ ಕಾರ್ಯಕರ್ತರು ದೆಹಲಿಯಾದ್ಯಂತ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಸದ್ಯ ಆಪ್​ 134 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 104 ರಲ್ಲಿ ವಿಜಯ ಪಡೆದಿದೆ. ಕಾಂಗ್ರೆಸ್​ 9 ಹಾಗೂ ಇತರರು 3ರರಲ್ಲಿ ಗೆಲುವು ಸಾಧಿಸಿದ್ದಾರೆ. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಪಾಲಿಕೆ ಚುನಾವಣೆಯಲ್ಲಿ ಆಪ್​ 140 ರಿಂದ 150 ಕ್ಕೂ ಅಧಿಕ ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, 130 ಸ್ಥಾನಗಳಲ್ಲಿ ಆಪ್​ ಗೆಲ್ಲುವ ಸಾಧ್ಯತೆ ಇದೆ. ಅಧಿಕಾರದಲ್ಲಿದ್ದ ಬಿಜೆಪಿಯನ್ನು ಮತದಾರರು ಮತ್ತೊಮ್ಮೆ ಕೈಬಿಟ್ಟಿದ್ದು, ರಾಷ್ಟ್ರ ರಾಜಧಾನಿಯಲ್ಲೇ ಬಿಜೆಪಿ ತೀವ್ರ ಹಿನ್ನಡೆ ಉಂಟು ಮಾಡಿದೆ.

ಆಪ್​ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಪಡೆದಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ. ಈಗಾಗಲೇ ನಗರದೆಲ್ಲೆಡೆ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಇತ್ತ ಗೆದ್ದ ಬಿಜೆಪಿಗರು ಕೂಡ ಗೆಲುವಿನ ಖುಷಿಯಲ್ಲಿದ್ದಾರೆ.

ಅಲುಗಾಡುತ್ತಿರುವ ಬಿಜೆಪಿಯ ಬೇರು: ಪಕ್ಷದ ನಾಗಾಲೋಟದ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್​ ಸಿಎಂ ಭಗವಂತ್​ ಮಾನ್​, ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ 15 ವರ್ಷಗಳ ಕಾಂಗ್ರೆಸ್ ಆಡಳಿತ ಮತ್ತು ಈಗ ಪಾಲಿಕೆಯಲ್ಲಿ 15 ವರ್ಷಗಳ ಬಿಜೆಪಿ ಆಡಳಿತವನ್ನು ಬೇರು ಸಮೇತ ಕಿತ್ತುಹಾಕುತ್ತಿದ್ದಾರೆ. ದೆಹಲಿಯ ಜನರು ದ್ವೇಷದ ರಾಜಕಾರಣವನ್ನು ಇಷ್ಟಪಡುವುದಿಲ್ಲ ಎಂಬುದು ಈ ಫಲಿತಾಂಶ ತೋರಿಸುತ್ತದೆ. ದೆಹಲಿಯ ಶಾಲೆ, ಆಸ್ಪತ್ರೆ, ವಿದ್ಯುತ್, ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಜನರು ಮತ ಹಾಕಿದ್ದಾರೆ ಎಂದು ಹರ್ಷಿಸಿದರು.

ಪಕ್ಷಗಳ ಬಲಾಬಲ

ಪಕ್ಷ ಗೆಲುವುಮುನ್ನಡೆ
ಆಪ್​1340
ಬಿಜೆಪಿ1040
ಕಾಂಗ್ರೆಸ್090
ಸ್ವತಂತ್ರ0300

ಓದಿ: ಮತ ಎಣಿಕೆ ಆರಂಭ.. ಯಾರ ಪಾಲಿಗೆ ದೆಹಲಿ ಮಹಾನಗರ ಪಾಲಿಕೆ?

Last Updated : Dec 7, 2022, 3:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.