ಮುಂಬೈ(ಮಹಾರಾಷ್ಟ್ರ): ಕೇವಲ 10 ವರ್ಷದ ಬಾಲಕಿಯೊಬ್ಬಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾಳೆ. ಮುಂಬೈನ ಶಿವಾಜಿನಗರದಲ್ಲಿ ಸಣ್ಣ ಮನೆಯೊಂದರಲ್ಲಿ ವಾಸ ಮಾಡುತ್ತಿರುವ ಈಕೆ ತನ್ನ ರ್‍ಯಾಪ್ ಸಾಂಗ್ ಮೂಲಕ ಎಲ್ಲರ ಮನ ಗೆದ್ದಿದ್ದಾಳೆ.
ತನ್ನ ಮನೆಯ ಸ್ಥಿತಿ, ಬಡತನ, ತಾನಿರುವ ಪ್ರದೇಶ ದುಃಸ್ಥಿತಿಯನ್ನು ರ್‍ಯಾಪ್ ಸಾಂಗ್ ಮೂಲಕವೇ ಜನರಿಗೆ ತಲುಪಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿಯಾದ ಬಾಲಕಿಯ ಹೆಸರು ಸಾನಿಯಾ ಮಿಸ್ತ್ರಿ ಈಗ ಟಾಕ್ ಆಫ್ ದ ಟೌನ್ ಆಗಿದ್ದಾಳೆ.
ಬಡ ಮಧ್ಯಮ ಕುಟುಂಬದಿಂದ ಬಂದ ಸಾನಿಯಾ ಮಿಸ್ತ್ರಿ ಅವರ ತಂದೆ ದಿನಾಲೂ ಆಟೋ ರಿಕ್ಷಾ ಓಡಿಸುವ ಕೆಲಸ ಮಾಡುತ್ತಾರೆ. ಸರ್ಕಾರೇತರ ಸಂಘಟನೆಗಳಿಗಾಗಿ ಕೆಲಸ ಮಾಡುವ ಸಾನಿಯಾ, ಸರ್ಕಾರೇತರ ಸಂಘಟನೆಗಳು ನಡೆಸಿಕೊಡುವ ಕಾರ್ಯಕ್ರಮಗಳ ವೇದಿಕೆಗಳಲ್ಲಿ ರ್‍ಯಾಪ್ ಸಾಂಗ್ ಹಾಡುತ್ತಾಳೆ. ಅಂದಹಾಗೆ ಈಗ ಆಕೆ ಅಂಬೇಡ್ಕರ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ತಮ್ಮ ಹಾಡುಗಳು ವೈರಲ್ ಆಗಿರುವುದರ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಸಾನಿಯಾ, ರ್‍ಯಾಪ್ ಸಾಂಗ್ನೊಂದಿಗೆ ದೇಶಾದ್ಯಂತ ಪ್ರಸಿದ್ಧಿಪಡಬೇಕೆಂಬುದು ತನ್ನ ಆಸೆ ಎಂದು ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ನೀವು ಶ್ವಾನ ಪ್ರಿಯರೇ.. ಹಾಗಾದರೆ ಇಲ್ಲಿದೆ Dog Hostel... ಏನಿದರ ವಿಶೇಷತೆ?