ETV Bharat / bharat

DRUGS: 3,414 ಕೆಜಿ ಡ್ರಗ್ಸ್ ವಶಪಡಿಸಿಕೊಂಡ ಮುಂಬೈ ಪೊಲೀಸರು! - Anti Narcotics Cell of Mumbai Police

ಕಳೆದ ಮೂರು ವರ್ಷಗಳಲ್ಲಿ 3,414 ಕಿ.ಗ್ರಾಂ.ಗಳಷ್ಟು ಡ್ರಗ್ಸ್ (drugs) ಅನ್ನು ಮುಂಬೈ ಪೊಲೀಸರು (mumbai police) ವಶಪಡಿಸಿಕೊಂಡಿದ್ದಾರೆ.

mumbai drugs case
ಮುಂಬೈ ಡ್ರಗ್ಸ್​ ಕೇಸ್​
author img

By

Published : Nov 12, 2021, 10:42 AM IST

Updated : Nov 12, 2021, 10:48 AM IST

ಮುಂಬೈ: ಕಳೆದ ಮೂರು ವರ್ಷಗಳಲ್ಲಿ 3,414 ಕಿ.ಗ್ರಾಂ.ಗಳಷ್ಟು ಡ್ರಗ್ಸ್(drugs) ಅನ್ನು ಮುಂಬೈ ಪೊಲೀಸರು (mumbai police) ವಶಪಡಿಸಿಕೊಂಡಿದ್ದಾರೆ. ಆ ಪೈಕಿ, ಪ್ರಸ್ತುತ 2021ರಲ್ಲಿ 2,593 ಕೆ.ಜಿ. ಡ್ರಗ್ಸ್​ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಂಬೈ ಪೊಲೀಸರು, ಮಾಹಿತಿ ಹಕ್ಕು ಕಾಯ್ದೆ (RTI) ಪ್ರಶ್ನೆಗೆ ಉತ್ತರಿಸಿದ್ದಾರೆ.

2021ರ ಅಕ್ಟೋಬರ್ 25 ರವರೆಗೆ ಮುಂಬೈ ಪೊಲೀಸರು 83.13 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. 2019ರಲ್ಲಿ 25.28 ಕೋಟಿ ರೂ. ಮತ್ತು 2020ರಲ್ಲಿ 22.23 ಕೋಟಿ ರೂ. ಮೌಲ್ಯದ ಡ್ರಗ್ಸ್​​ ವಶಪಡಿಸಿಕೊಳ್ಳಲಾಗಿತ್ತು. ಕಳೆದೆರಡು ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ವಶಪಡಿಸಿಕೊಂಡ ಡ್ರಗ್ಸ್ ಮೌಲ್ಯ ಮೂರು ಪಟ್ಟು ಹೆಚ್ಚಿದೆ.

ಕಳೆದ ಮೂರು ವರ್ಷಗಳಲ್ಲಿ ವಶಪಡಿಸಿಕೊಂಡ ಡ್ರಗ್ಸ್ ಮತ್ತು ವಿಲೇವಾರಿ ಮಾಡಿರುವ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಗಲ್​​ಗಲಿ(Galgali, an RTI activist) ಮುಂಬೈ ಪೊಲೀಸರಿಂದ ಮಾಹಿತಿ ಕೇಳಿದ್ದರು.

ಇದನ್ನೂ ಓದಿ: ಲಖನೌದಲ್ಲಿ ಮತ್ತೆ 2 ಝಿಕಾ ವೈರಸ್ ಪತ್ತೆ

2019 ಮತ್ತು 2020ರಲ್ಲಿ ಡ್ರಗ್ಸ್​​ ಬಗ್ಗೆ ಸೂಕ್ತ ವರದಿಯಾಗಿಲ್ಲ. 2021ರಲ್ಲಿ 248 ಕೆ.ಜಿ ಡ್ರಗ್ಸ್​​ ವಿಲೇವಾರಿ ಬಗ್ಗೆ ವರದಿಯಾಗಿದೆ. ಇಂದಿಗೂ ಸಹ, ಪೊಲೀಸ್ ಅಧಿಕಾರಿಗಳು ಜಪ್ತಿ ಮಾಡಿದ ವಸ್ತುಗಳನ್ನು ಪರಸ್ಪರ ಮಾರಾಟ ಮಾಡುತ್ತಾರೆ ಎಂಬ ಅನುಮಾನ ಮತ್ತು ವದಂತಿಗಳಿವೆ. ಹಾಗಾಗಿ ಈ ಮಾಹಿತಿ ನೀಡುವುದು ಅವಶ್ಯಕವಾಗಿದೆ ಎಂದು ಗಲ್​​ಗಲಿ ತಿಳಿಸಿದ್ದಾರೆ.

ಹಾಗಾಗಿ, 2019, 2020 ಮತ್ತು 2021ನೇ ಸಾಲಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮುಂಬೈ ಪೊಲೀಸ್​ ಮಾದಕ ವಸ್ತು ನಿಗ್ರಹ ದಳವು(Anti-Narcotics Cell of Mumbai Police) ಗಲ್​ಗಲಿಗೆ ಮಾಹಿತಿ ನೀಡಿದೆ.

  • 2019ರಲ್ಲಿ 25.28 ಕೋಟಿ ರೂ. ಮೌಲ್ಯದ 395 ಕೆ.ಜಿ 35 ಗ್ರಾಂ ಡ್ರಗ್ಸ್​​ ವಶಪಡಿಸಿಕೊಳ್ಳಲಾಗಿದ್ದು, ಈ ಪೈಕಿ 1,343 ಸ್ಟ್ರಿಪ್ಸ್​, 7,577 ಬಾಟಲಿಗಳು, 1,551 ಡಾಟ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಇದ್ರ ವಿಲೇವಾರಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
  • 2020ರಲ್ಲಿ 22.23 ಕೋಟಿ ರೂ. ಮೌಲ್ಯದ 427 ಕೆ.ಜಿ 277 ಗ್ರಾಂ ಡ್ರಗ್ಸ್​ ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 5,191 ಬಾಟಲಿಗಳು, 66,000 ಟ್ಯಾಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
  • 2021 ರ ಅಕ್ಟೋಬರ್ 25ರವರೆಗೆ 2,592 ಕೆಜಿ 93 ಗ್ರಾಂ ಡ್ರಗ್ಸ್​ ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 15,830 ಬಾಟಲಿಗಳು, 189 ಎಲ್​ಎಸ್​ಡಿ ಪೇಪರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಲೇವಾರಿ ಮಾಡಿರುವ ಪೈಕಿ, 248 ಕೆಜಿ 344 ಗ್ರಾಂ ಗಾಂಜಾ, 0.010 ಕೆಜಿ ಎಂಡಿ ಮತ್ತು 368 ಕೊಡೈನ್ ಫಾಸ್ಫೇಟ್ ಮಿಶ್ರಿತ ಕೆಮ್ಮಿನ ಸಿರಪ್ ಬಾಟಲಿಗಳು ಸೇರಿವೆ.

Last Updated : Nov 12, 2021, 10:48 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.