ETV Bharat / bharat

ಕಳೆದು ಹೋದ ಆಟೋರಿಕ್ಷಾ ಹುಡುಕಿ ಚಾಲಕನಿಗೆ ಮರಳಿಸಿದ ಮುಂಬೈ ಪೊಲೀಸರು

author img

By

Published : Feb 22, 2023, 12:34 PM IST

ಆಟೋ ರಿಕ್ಷಾ ಚಾಲಕನೊಬ್ಬನ ಕಳುವಾದ ಆಟೋ ರಿಕ್ಷಾವನ್ನು ಪತ್ತೆ ಮಾಡಿದ ಮುಂಬೈ ಪೊಲೀಸರು, ಅದನ್ನು ಮರಳಿ ಚಾಲಕನಿಗೆ ಹಸ್ತಾಂತರಿಸಿದ್ದಾರೆ. ಎರಡು ವರ್ಷಗಳ ನಂತರ ಕಳುವಾದ ಆಟೋ ಮರಳಿ ಸಿಕ್ಕಿದ್ದರಿಂದ ಆಟೋ ಚಾಲಕ ಅಮರನಾಥ್ ತುಂಬಾ ಖುಷಿಯಾಗಿದ್ದಾರೆ.

ಆಟೋರಿಕ್ಷಾ ಹುಡುಕಿ ಚಾಲಕನಿಗೆ ಮರಳಿಸಿದ ಮುಂಬೈ ಪೊಲೀಸರು
Mumbai police returns auto rickshaw

ಮುಂಬೈ: ಯಾರದಾದರೂ ಒಂದು ವಸ್ತು ಕಳೆದುಹೋದಾಗ ಅವರಿಗೆ ಆತಂಕವಾಗುವುದು ಸಹಜ. ಆದರೆ ಕೆಲ ದಿನಗಳ ನಂತರ ಅದೇ ವಷ್ಟತ ಮರಳಿ ಸಿಕ್ಕರೆ ಸಿಕ್ಕಾಪಟ್ಟೆ ಸಂತೋಷವಾಗುತ್ತದೆ. ಅಂಥದೇ ಒಂದು ಖುಷಿ ಮುಂಬೈನ ಆಟೋ ರಿಕ್ಷಾ ಚಾಲಕನೊಬ್ಬನಿಗೆ ಇಂದು ಆಗಿರುವುದು ಕಂಡು ಬಂದಿತು. ಈ ಆಟೋ ಚಾಲಕನ ಖುಷಿಗೆ ಕಾರಣವಾಗಿದ್ದು ಮುಂಬೈ ಪೊಲೀಸರು. ಮುಂಬೈ ಪೊಲೀಸರ ಪ್ರಯತ್ನದಿಂದ ಆಟೋ ಚಾಲಕನೊಬ್ಬನ ಮುಖದಲ್ಲಿ ಮಂದಹಾಸ ಮರಳಿದೆ ಎಂಬುದು ಸತ್ಯ.

ಮಾರ್ಚ್ 2020 ರಲ್ಲಿ ಆರಂಭವಾದ ಕೊರೊನಾ ಬಿಕ್ಕಟ್ಟು ಎಲ್ಲರ ಮೇಲೂ ಪರಿಣಾಮ ಬೀರಿತ್ತು. ಅದಾಗಿ ಕೆಲ ತಿಂಗಳುಗಳ ನಂತರ ಜೀವನ ಸುಗಮವಾಗಲು ಪ್ರಾರಂಭಿಸಿತ್ತು. ಇದೇ ಸಮಯದಲ್ಲಿ ಅಮರನಾಥ ಶರ್ಮಾ ಎಂಬುವರು ನಿಧಾನವಾಗಿ ರಿಕ್ಷಾ ಡ್ರೈವಿಂಗ್ ವ್ಯವಹಾರ ಆರಂಭಿಸಿದ್ದರು. ಬಾಂದ್ರಾ ಈಸ್ಟ್ ಪ್ರದೇಶದಲ್ಲಿ ವಾಸವಾಗಿರುವ ರಿಕ್ಷಾ ಚಾಲಕ ಅಮರನಾಥ್ ರಿಕ್ಷಾ ಓಡಿಸಿ ಗಳಿಸಿದ ಹಣದಿಂದ ತನ್ನ ಕುಟುಂಬವನ್ನು ಸಾಕುತ್ತಿದ್ದ. ಅಮರನಾಥ್ ಅವರ ಮಗ ಅಮಿತ್​ಕುಮಾರ್ ಕೂಡ ತನ್ನ ತಂದೆಯ ರಿಕ್ಷಾ ವ್ಯಾಪಾರಕ್ಕೆ ಸಹಾಯ ಮಾಡುವ ಮೂಲಕ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ ಒಂದು ದಿನ ಅಮಿತ್‌ಕುಮಾರ್ ರಿಕ್ಷಾ ಓಡಿಸುವ ಕೆಲಸ ಮಾಡುತ್ತಿದ್ದಾಗ ಬಾಂದ್ರಾ ಈಸ್ಟ್ ಮೆಟ್ರೋ ನಿಲ್ದಾಣದ ಬಳಿ ಲೇನ್ ನಂಬರ್ ಎರಡರಲ್ಲಿ ರಿಕ್ಷಾ ಕಳ್ಳತನವಾಗಿತ್ತು.

ಅಮರನಾಥ ಶರ್ಮಾ 1995ರಲ್ಲಿ ಸಾಲ ಮಾಡಿ ರಿಕ್ಷಾ ಖರೀದಿಸಿದ್ದರು. ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯವರಾದ ಅವರು ಬಾಂದ್ರಾ ಈಸ್ಟ್ ಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ರಿಕ್ಷಾ ಓಡಿಸಿ ಬರುವ ಆದಾಯದಲ್ಲಿ ಅವರ ಕುಟುಂಬ ಬದುಕುತ್ತಿತ್ತು. ಆದರೆ 2021ರಲ್ಲಿ ಅಮರನಾಥ್ ಅವರ ರಿಕ್ಷಾ ಕಳುವಾಗಿದ್ದರಿಂದ ಅವರಿಗೆ ಬಲು ದೊಡ್ಡ ಸಂಕಷ್ಟ ಎದುರಾಗಿತ್ತು. ಇಂಥ ಸಂದರ್ಭದಲ್ಲಿ ಅಮರನಾಥ್ ಬೇರೆಯವರ ರಿಕ್ಷಾ ಓಡಿಸಿ ಸಂಸಾರ ನಿಭಾಯಿಸಲಾರಂಭಿಸಿದರು.

2021ರಲ್ಲಿ ರಿಕ್ಷಾ ಕಳವಾದ ಬಳಿಕ ಅಮರನಾಥ ಶರ್ಮಾ ಅವರ ಪುತ್ರ ಅಮಿತ್ ಕುಮಾರ್ ಖೇರ್ವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಖೇರ್ವಾಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 379 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದ್ದಕ್ಕಿದ್ದಂತೆ 2023 ರಲ್ಲಿ ಖೇರ್ವಾಡಿ ಪೊಲೀಸ್ ಠಾಣೆಯಿಂದ ಅಮರನಾಥ್ ಅವರ ಮಗ ಅಮಿತ್ ಕುಮಾರ್ ಅವರಿಗೆ ಕರೆ ಬಂದಿತ್ತು. ಜೊತೆಗೆ ಒಂದು ಒಳ್ಳೆಯ ಸುದ್ದಿಯೂ ಸಿಕ್ಕಿತ್ತು.

ಕಳ್ಳತನವಾಗಿದ್ದ ರಿಕ್ಷಾ ಸಿಕ್ಕಿರುವುದಾಗಿ ಖೇರ್ವಾಡಿ ಪೊಲೀಸರು ಅಮಿತ್ ಕುಮಾರ್ ಅವರಿಗೆ ತಿಳಿಸಿದರು. ಅಲ್ಲದೆ ರಿಕ್ಷಾ ಪಡೆಯಲು ಬರುವಂತೆ ತಿಳಿಸಿದರು. ಪ್ರಸಿದ್ಧ ಚಿತ್ರನಟ ರೋಹಿತ್ ಶೆಟ್ಟಿ ಅವರ ಕೈಯಿಂದ ರಿಕ್ಷಾವನ್ನು ಅಮರನಾಥರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಪಂಚಾಲ್ಕರ್, ವಿಶೇಷ ಪೊಲೀಸ್ ಕಮಿಷನರ್ ದೇವೆನ್ ಭಾರ್ತಿ ಕೂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 'ಈಟಿವಿ ಭಾರತ' ಜೊತೆ ಮಾತನಾಡಿದ ಅಮರನಾಥ್ ಶರ್ಮಾ, ಮುಂಬೈ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ತನ್ನ ರಿಕ್ಷಾ ಮರಳಿ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗಿರುವುದಾಗಿ ತಿಳಿಸಿದರು.

ಇದನ್ನೂ ಓದಿ: ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕ ವಸ್ತು ಮಾರಾಟ: 11 ಮಂದಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.