ಮುಂಬೈ : ಫೈವ್ ಸ್ಟಾರ್ ಹೋಟೆಲ್ವೊಂದರಲ್ಲಿ ಡ್ರಗ್ಸ್ ಪಾರ್ಟಿ ಮಾಡ್ತಿದ್ದ ಬಾಲಿವುಡ್ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಫ್ರೆಂಡ್ಸ್ ಜೊತೆ ಸೇರಿ ಹೋಟೆಲ್ವೊಂದರಲ್ಲಿ ಡ್ರಗ್ಸ್ ಜತೆಗೆ ಮೋಜು, ಮಸ್ತಿ ಮಾಡುತ್ತಿದ್ದ ಹಿನ್ನೆಲೆ ನಟಿ ಹಾಗೂ ಆಕೆಯ ಸ್ನೇಹಿತರನ್ನು ಬಂಧಿಸಲಾಗಿದೆ.

ಈ ಬಗ್ಗೆ ಮುಂಬೈ ಪೊಲೀಸರಿಗೆ ರಹಸ್ಯ ಮೂಲದಿಂದ ಮಾಹಿತಿ ಬಂದಿತ್ತು. ಅದರ ಆಧಾರದ ಮೇಲೆ ಮುಂಬೈ ಪೊಲೀಸ್ ತಂಡ ಫೈವ್ ಸ್ಟಾರ್ ಹೋಟೆಲ್ಗೆ ಹೋಗಿ ನೋಡಿದಾಗ ಈ ಬಾಲಿವುಡ್ ನಟಿ ತನ್ನ ಸಹೋದ್ಯೋಗಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಇದನ್ನು ಕಂಡ ಪೊಲೀಸರು ತಕ್ಷಣವೇ ಅವರೆಲ್ಲರನ್ನೂ ಬಂಧಿಸಿದ್ದಾರೆ.

ಪೊಲೀಸ್ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಬಂಧನವಾಗಿರುವ ನಟಿಯ ಹೆಸರು ನಾಯರ್ ಶಾ. ಅವರ ಸ್ನೇಹಿತರಲ್ಲದೇ, ಗೋವಾ ಮೂಲದ ಆಶಿಕ್ ಹುಸೇನ್ ಕೂಡ ಈ ಪಾರ್ಟಿಯಲ್ಲಿ ಉಪಸ್ಥಿತರಿದ್ದರು. ಇಬ್ಬರನ್ನೂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಇಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ ಎಂದು ಸಂತಕ್ರೂಜ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾರ್ಟಿಯಲ್ಲಿ ಬಳಸಿದ ಚರಸ್‌ನ ಎಲ್ಲಿಂದ ಖರೀದಿಸಲಾಗಿದೆ ಮತ್ತು ಸರಬರಾಜುದಾರ ಯಾರು ಎಂದು ಮುಂಬೈ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.