ಮುಂಬೈ : ಸಮಾಜದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಇಂದು ಮುಖ್ಯ ವಾಹಿನಿಗೆ ಬರುತ್ತಿದ್ದಾರೆ. ಅದಕ್ಕೆ ಕಾರಣ ಬದಲಾಗುತ್ತಿರುವ ಸಮಾಜ. ಆದರೆ, ಇಲ್ಲೊಂದು ದುರಂತ ಸಂಭವಿಸಿದೆ. 'ಆತನಿಗಾಗಿ ಆತ ಆಕೆಯಾದ. ಆದರೆ, ಆತ ಆಕೆಯನ್ನು ಕೈಬಿಟ್ಟು ಹೋದ'.
ತೃತೀಯ ಲಿಂಗಿಯಾಗಿದ್ದ ಜಮಾಲ್ ಶೇಖ್ (Jamal Sheikh )ಎಂಬುವ ತನ್ನ ನೆರೆಯ ಫುರ್ಕಾನ್ ಶೇಖ್ ( Furqan Sheikh) ಎಂಬುವನನ್ನು ಪ್ರೀತಿಸುತ್ತಿದ್ದ. ಪರಿಣಾಮ ಇಬ್ಬರು ಮದುವೆಯಾಗಲು ಮುಂದಾಗಿದ್ದರು.
ಆದರೆ, ಮದುವೆಗೂ ಮುನ್ನ ಜಮಾಲ್ ಶೇಖ್ ಸಂಪೂರ್ಣವಾಗಿ ಹೆಣ್ಣಾಗಿ ಪರಿವರ್ತನೆ ಆಗಬೇಕಿತ್ತು. ಅದರಂತೆ ತನ್ನ ಇನಿಯನಿಗಾಗಿ ಜಮಾಲ್ ಲಿಂಗವನ್ನೂ ಪರಿವರ್ತಿಸಿಕೊಂಡ. ಆದರೆ, ಕೊನೆಗೆ ಆಗಿದ್ದೇ ಮೋಸ ಎಂಬ ದುರಂತದ ನೋವು.

ಲಿಂಗ ಪರಿವರ್ತನೆ ಮಾಡಿಕೊಂಡ ಜಮಾಲ್ : ಈ ಪ್ರೇಮಿಗಳು ಬರೀ ಪ್ರೀತಿ ಮಾಡಿಕೊಂಡಿದ್ದರೆ ಸಾಕಾಗುತ್ತಿತ್ತೇನೋ.. ಆದರೆ, ಹೊಸ ಜೀವನದ ಸಲುವಾಗಿ ಜಮಾಲ್ ತನ್ನ ಲಿಂಗವನ್ನೇ ಬದಲಾಯಿಸಿಕೊಂಡ.
ಅಷ್ಟೇ ಅಲ್ಲ, ಜಮಾಲ್ ತನ್ನ ಹೆಸರನ್ನು ಶಿಲ್ಪಾ(Shilpa) ಎಂದೂ ಬದಲಾಯಿಸಿಕೊಂಡ. ಈ ಸಂಪೂರ್ಣ ಪ್ರಕ್ರಿಯೆಗೆ ಜಮಾಲ್ 2,00,000 ರೂ. ಖರ್ಚು ಮಾಡಿದ್ದ.

ಮಹಾರಾಷ್ಟ್ರದ ಮುಂಬೈನ ಗೂಂಡಿ(Goondi in Mumbai) ನಿವಾಸಿ ಜಮಾಲ್ ಶೇಖ್ ತೃತೀಯ ಲಿಂಗದ ವರ್ಗಕ್ಕೆ ಸೇರಿದವರು. ಜಮಾಲ್ ಶೇಖ್ ಅವರಿಗೆ 31 ವರ್ಷ. ಕೋಲ್ಕತ್ತಾದಿಂದ ಬಂದ ಜಮಾಲ್ ತನ್ನ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ.
ವಿವಾಹದ ಕನಸು ಭಗ್ನ: ಲಿಂಗ ಪರಿವರ್ತನೆ ಮಾಡಿಕೊಂಡು ವಿವಾಹವಾಗಿ ನವ ಜೀವನ ಮಾಡಬೇಕು ಎಂದು ಕೊಂಡಿದ್ದ ಜಮಾಲ್ ಬಾಳಲ್ಲಿ ಈಗ ಬಿರುಗಾಳಿ ಬೀಸಿದೆ. ಲಿಂಗ ಪರಿವರ್ತನೆ ಮಾಡಿಕೊಂಡಿದ್ದರೂ ಸಹ ಇವರ ಪ್ರಿಯತಮ ಮದುವೆಯಾಗಲು ನಿರಾಕರಿಸಿದ್ದಾನೆ.

ಇನಿಯನಿಗೆ ಈ ಮೊದಲೇ ವಿವಾಹವಾಗಿತ್ತು: ಜಮಾಲ್ ಅಲಿಯಾಸ್ ಶಿಲ್ಪಾ ಹೇಳುವಂತೆ ಫುರ್ಖಾನ್ ತನ್ನೊಂದಿಗೆ ದೈಹಿಕ ಸಂಬಂಧ( physical relationship ) ಹೊಂದಿದ್ದ. ಆತ ಮದುವೆಯ ಭರವಸೆ ನೀಡಿದ್ದ. ಆದರೆ, ಅದು ಈಡೇರಲಿಲ್ಲ. ಆತ ಈಗಾಗಲೇ ಮದುವೆಯಾಗಿದ್ದಾನೆ. ದೆಹಲಿಯಲ್ಲಿ ಆತ ಸಂಸಾರ ಕೂಡ ನಡೆಸುತ್ತಿದ್ದಾನೆ.
ಗಾಯದ ಮೇಲೆ ಬರೆ ಎಳೆದಂಗೆ ಎಂಬಂತೆ ಈಗ ಜಮಾಲ್ ಅವರ ಕುಟುಂಬವು ಅವರನ್ನು ತಮ್ಮ ಮನೆಗೆ ಸೇರಿಸಿಕೊಳ್ಳಲು ಹಿಂದೇಟು ಹಾಕಿದೆ. ಪರಿಣಾಮ ಲಿಂಗ ಪರಿವರ್ತನೆ. ಇಷ್ಟೆಲ್ಲಾ ನೋವುಂಡಿರುವ ಜಲಾಲ್ ಅಲಿಯಾಸ್ ಶಿಲ್ಪಾ ನ್ಯಾಯಕ್ಕಾಗಿ ಆಗ್ರಹ ಮಾಡಿದ್ದಾರೆ.