ಮುಂಬೈ(ಮಹಾರಾಷ್ಟ್ರ): ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರನ್ನು ಕರೆದೊಯ್ಯಲು ಆಗಮಿಸಿದ್ದ ಐಷಾರಾಮಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ(MNS) ಕಾರ್ಯಕರ್ತರಿಗೆ ಜಾಮೀನು ನೀಡಲಾಗಿದೆ.
ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್) ಕಾರ್ಯಕರ್ತರು ಐಪಿಎಲ್ಗಾಗಿ ಮುಂಬೈಗೆ ಬಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಐಷಾರಾಮಿ ಬಸ್ಸಿನ ಕಿಟಕಿಯ ಗಾಜುಗಳನ್ನು ಒಡೆದು ಹಾಕಿರುವ ಘಟನೆ ಮೊನ್ನೆ ತಡರಾತ್ರಿ ನಡೆದಿತ್ತು. ತಕ್ಷಣವೇ ಐವರು ಎಂಎನ್ಎಸ್ ಕಾರ್ಯಕರ್ತರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ಬಸ್ ಕಿಟಕಿ ಗಾಜು ಪುಡಿಗಟ್ಟಿದ MNS ಕಾರ್ಯಕರ್ತರು
ಇವರ ವಿಚಾರಣೆ ನಡೆಸಿದ್ದ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದರು. ಇದರ ಬೆನ್ನಲ್ಲೇ ಎಲ್ಲರಿಗೂ ಜಾಮೀನು ಸಿಕ್ಕಿದ್ದು, ಜೈಲಿನಿಂದ ಹೊರಗಡೆ ಬಂದಿದ್ದಾರೆ.
-
Delhi Capital IPL team parked bus allegedly attacked#IPL2022pic.twitter.com/hzmdb60yXm
— Himalayan Guy (@RealHimalayaGuy) March 16, 2022 " class="align-text-top noRightClick twitterSection" data="
">Delhi Capital IPL team parked bus allegedly attacked#IPL2022pic.twitter.com/hzmdb60yXm
— Himalayan Guy (@RealHimalayaGuy) March 16, 2022Delhi Capital IPL team parked bus allegedly attacked#IPL2022pic.twitter.com/hzmdb60yXm
— Himalayan Guy (@RealHimalayaGuy) March 16, 2022
ಘಟನೆ ಬಗ್ಗೆ ಮಾತನಾಡಿದ್ದ ಎಂಎನ್ಎಸ್ ಕಾರ್ಯಕರ್ತ ಸಂಜಯ್ ನಾಯಕ್, ಹೊರ ರಾಜ್ಯಗಳ ಬಸ್ಗಳನ್ನು ಬಾಡಿಗೆಗೆ ಪಡೆಯುವುದರಿಂದ ಸ್ಥಳೀಯರು ಉದ್ಯೋಗಾವಕಾಶದಿಂದ ವಂಚಿತರಾಗುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಪ್ರತಿಭಟನೆಯ ಹೊರತಾಗಿಯೂ ಅವರು ಕೆಲವು ಬಸ್ಗಳು ಮತ್ತು ಕೆಲವು ಚಿಕ್ಕ ವಾಹನಗಳನ್ನು ಡೆಲ್ಲಿ ಮತ್ತು ಬೇರೆ ಭಾಗಗಳಿಂದ ಇಲ್ಲಿಗೆ ಕರೆತಂದಿದ್ದಾರೆ. ಅದರಿಂದ ಸ್ಥಳೀಯರ ಜೀವನೋಪಾಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.