ETV Bharat / bharat

ಉಗಾಂಡ ಪ್ರಜೆಯ ಹೊಟ್ಟೆಯಲ್ಲಿದ್ದವು 7 ಕೋಟಿ ಮೌಲ್ಯದ 70 ಕೊಕೇನ್​ ಮಾತ್ರೆಗಳು! - ಮುಂಬೈನಲ್ಲಿ ಡ್ರಗ್ಸ್​ ಸಾಗಣೆಕೋರನ ಬಂಧನ

ಉಗಾಂಡದಿಂದ ಅಕ್ರಮವಾಗಿ ಕೊಕೇನ್​ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಡಿಆರ್​ಐ ಅಧಿಕಾರಿಗಳು ದಾಳಿ ನಡೆಸಿ, 70 ಕೊಕೇನ್​ ಮಾತ್ರೆಗಳನ್ನು ವಶಕ್ಕೆ ಪಡೆದ ಘಟನೆ ಮುಂಬೈನಲ್ಲಿ ನಡೆದಿದೆ.

mumbai-dri-seizes-cocaine
ಕೊಕೇನ್​ ಮಾತ್ರೆಗಳು
author img

By

Published : May 18, 2022, 5:22 PM IST

ಮುಂಬೈ: ಅಕ್ರಮ ಸಾಗಣೆ ನಿಯಂತ್ರಿಸಲು ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ ಖದೀಮರು ಮಾತ್ರ ಇನ್ನಿಲ್ಲದ ಸಾಹಸ ಮಾಡಿ ಡ್ರಗ್ಸ್​ ಸಾಗಣೆ ಮಾಡುತ್ತಾರೆ. ಮುಂಬೈನಲ್ಲಿ ಉಗಾಂಡ ಪ್ರಜೆಯೊಬ್ಬ 70 ಕೊಕೇನ್​ ಮಾತ್ರೆಗಳನ್ನು ಸೇವಿಸಿ ಸಾಗಣೆ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ. ವಶಪಡಿಸಿಕೊಂಡ ಕೊಕೇನ್​ ಮಾತ್ರೆಗಳ ಮೌಲ್ಯ 7 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಬ್ರೆಂಡೆನ್​ ಮೆಗದ್ದೆ ಬಂಧಿತ ಉಗಾಂಡ ಪ್ರಜೆ. ಉಗಾಂಡದಿಂದ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬ್ರೆಂಡೆನ್​ ಮೆಗದ್ದೆಯನ್ನು ಡ್ರಗ್ಸ್​ ಸಾಗಣೆ ನಡೆಸುತ್ತಿರುವ ಮಾಹಿತಿಯ ಆಧಾರದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಎಕ್ಸ್-ರೇ, ಸ್ಯ್ಕಾನಿಂಗ್​, ಸೋನೋಗ್ರಫಿ ನಡೆಸಿದಾಗ ಉಗಾಂಡ ವ್ಯಕ್ತಿಯ ಹೊಟ್ಟೆಯಲ್ಲಿ ಸುಮಾರು 70 ಕೊಕೇನ್ ಮಾತ್ರೆಗಳು ಇರುವುದು ಕಂಡು ಬಂದಿದೆ. ಬಳಿಕ ಅವುಗಳನ್ನು ತೆಗೆದ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಇವುಗಳು 7 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ್ದು ಎಂದು ಹೇಳಲಾಗ್ತಿದೆ. ಆರೋಪಿಯನ್ನು ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿದೆ.

ಓದಿ: ಮಾವನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಸೊಸೆಯಿಂದ ಹಲ್ಲೆ, ಚಿಕಿತ್ಸೆ ವೇಳೆ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.