ಮುಂಬೈ(ಮಹಾರಾಷ್ಟ್ರ): ನಕಲಿ ನೋಟು ದಂಧೆ ಭೇದಿಸಿರುವ ಮುಂಬೈ ಪೊಲೀಸರು 2 ಸಾವಿರ ರೂಪಾಯಿ ಮುಖಬೆಲೆಯ 7 ಕೋಟಿ ರೂ. ಮೌಲ್ಯದ ಫೇಕ್ ನೋಟು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಏಳು ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಈ ಮಹತ್ವದ ಕಾರ್ಯಾಚರಣೆ ಮಾಡಿದ್ದು, ನಕಲಿ ನೋಟು ದಂಧೆ ಬಯಲಿಗೆಳೆದಿದ್ದಾರೆ. ಬಂಧಿತ ಆರೋಪಿಗಳಿಂದ ಲ್ಯಾಪ್ಟಾಪ್, ಏಳು ಮೊಬೈಲ್ ಫೋನ್, ಒಂದು ಕಾರು ಮತ್ತು ಅನೇಕ ಸಿಮ್ ಕಾರ್ಡ್ ವಶಕ್ಕೆ ಪಡೆದುಕೊಂಡಿದ್ದಾರೆ.
-
Mumbai Police Crime Branch arrested 7 persons with fake Indian currency notes of 2000 denominations having a face value of Rs 7 crores. The accused have been sent to police custody till Jan 31 by a court: DCP Sangram Nishandar pic.twitter.com/5lm6qcaZ0H
— ANI (@ANI) January 26, 2022 " class="align-text-top noRightClick twitterSection" data="
">Mumbai Police Crime Branch arrested 7 persons with fake Indian currency notes of 2000 denominations having a face value of Rs 7 crores. The accused have been sent to police custody till Jan 31 by a court: DCP Sangram Nishandar pic.twitter.com/5lm6qcaZ0H
— ANI (@ANI) January 26, 2022Mumbai Police Crime Branch arrested 7 persons with fake Indian currency notes of 2000 denominations having a face value of Rs 7 crores. The accused have been sent to police custody till Jan 31 by a court: DCP Sangram Nishandar pic.twitter.com/5lm6qcaZ0H
— ANI (@ANI) January 26, 2022
ಇದನ್ನೂ ಓದಿರಿ: ಗಣರಾಜ್ಯೋತ್ಸದಂದೇ ಶೋಪಿಯಾನ್ನಲ್ಲಿ ಎನ್ಕೌಂಟರ್- ಇಬ್ಬರು ಉಗ್ರರ ಬಂಧನ
ಈ ನಕಲಿ ನೋಟು ಮುಂಬೈಗೆ ತೆಗೆದುಕೊಂಡು ಹೋಗಿ, ಇತರೆ ಗ್ಯಾಂಗ್ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ನಂತರ ಮಾರುಕಟ್ಟೆಗೆ ತೆಗೆದುಕೊಂಡು ಬಂದು, ಅಸಲಿ ನೋಟುಗಳೊಂದಿಗೆ ಮಿಶ್ರಣ ಮಾಡಲಾಗುತ್ತಿತ್ತು. ನಕಲಿ ನೋಟ್ ದಂಧೆ ನಡೆಸುತ್ತಿದ್ದ ಗ್ಯಾಂಗ್ ಬಂಧನ ಮಾಡಿರುವ ಪೊಲೀಸರು ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜನವರಿ 31ರವರೆಗೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಡಿಸಿಪಿ ಸಂಗ್ರಾಮ್ ತಿಳಿಸಿದ್ದಾರೆ.
ಜಾಹೀರಾತು:ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ