ETV Bharat / bharat

ನೀರವ್ ಮೋದಿಗೆ ಶೋಕಾಸ್ ನೋಟಿಸ್​.. ಜೂನ್​ 11ರಂದು ಕೋರ್ಟ್​ಗೆ ಹಾಜರಾಗಲು ಸೂಚನೆ - ನೀರವ್ ಮೋದಿ ಲಂಡನ್​

ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 14,000 ಸಾವಿರ ಕೋಟಿ ವಂಚನೆ ಮಾಡಿ ಲಂಡನ್​ಗೆ ಪರಾರಿಯಾಗಿರುವ ನೀರವ್ ಮೋದಿ ವಿರುದ್ಧ ಇದೀಗ ಶೋಕಾಸ್ ನೋಟಿಸ್ ಜಾರಿಯಾಗಿದೆ.

Nirav Modi
Nirav Modi
author img

By

Published : May 13, 2021, 5:51 PM IST

ಮುಂಬೈ: ಸಾವಿರಾರು ಕೋಟಿ ರೂ. ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ಭಾರತ ಬಿಟ್ಟು ಪರಾರಿಯಾಗಿರುವ ವಜ್ರೋದ್ಯಮಿ ನೀರವ್​ ಮೋದಿಗೆ ಇದೀಗ ಶೋಕಾಸ್ ನೋಟಿಸ್ ಜಾರಿಯಾಗಿದೆ. ಬರುವ ಜೂನ್​ 11ರಂದು ಕೋರ್ಟ್​ಗೆ ಹಾಜರಾಗುವಂತೆ ಮುಂಬೈ ವಿಶೇಷ ಕೋರ್ಟ್​ ಸೂಚನೆ ನೀಡಿದೆ. ಇದರ ಜತೆಗೆ ಅವರ ಸ್ವತ್ತು ಮುಟ್ಟುಗೋಲು ಹಾಕಿಕೊಳ್ಳಬಾರದೇಕೆ ಎಂದು ಕಾರಣ ಕೇಳಿದೆ.

ಪಂಜಾಬ್ ನ್ಯಾಷನಲ್​​ ಬ್ಯಾಂಕ್​ನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ಬ್ರಿಟನ್​ಗೆ ಪರಾರಿಯಾಗಿರುವ ನೀರವ್ ಮೋದಿ ಹಸ್ತಾಂತರಕ್ಕೆ ಭಾರತ ಕಾನೂನು ಹೋರಾಟ ನಡೆಸಿದ್ದು, ಈಗಾಗಲೇ ಅಲ್ಲಿನ ಸರ್ಕಾರದೊಂದಿಗೆ ಮಾತನಾಡಿದೆ. ಆದರೆ, ಇದರ ಮಧ್ಯೆ ಮುಂಬೈನ ವಿಶೇಷ ನ್ಯಾಯಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ವಂಚನೆ ಪ್ರಕರಣದಲ್ಲಿ ಜೂನ್​ 11ರಂದು ನೀರವ್​ ಮೋದಿ, ಅವರ ಪತ್ನಿ ಅಮಿ, ಸಹೋದರಿ ಪುರ್ವಿ ಮತ್ತು ಸೋದರ ಮಾವನಿಗೂ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ: ಹಸ್ತಾಂತರದಿಂದ ಪಾರಾಗಲು ಇಂಗ್ಲೆಂಡ್​ ಹೈಕೋರ್ಟ್​​ನಲ್ಲಿ ನೀರವ್​ ಮೋದಿ ಮೇಲ್ಮನವಿ

ಮುಂಬೈ ಕೋರ್ಟ್​​ನ ವಿಶೇಷ ನ್ಯಾಯಾಧೀಶ ವಿ.ಸಿ. ಬರ್ಡೆ ಅವರು ಈ ಆದೇಶ ಹೊರಡಿಸಿದ್ದು, ಜೂನ್​ 11ರಂದು ವಿಚಾರಣೆಗೆ ಹಾಜರಾಗದಿದ್ದರೆ ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.