ETV Bharat / bharat

ಮೋದಿ ಭಾರತದ ಅತ್ಯಂತ ಯಶಸ್ವಿ ಪ್ರಧಾನಿ, ಶ್ರೇಷ್ಠ ಜಾಗತಿಕ ನಾಯಕ: ಮುಖೇಶ್ ಅಂಬಾನಿ - ಪ್ರಧಾನಿ ನರೇಂದ್ರ ಮೋದಿ

ರಿಲಯನ್ಸ್​ ಇಂಡಸ್ಟ್ರೀಸ್​ನ ಮುಖ್ಯಸ್ಥ ಮುಖೇಶ್ ಅಂಬಾನಿ, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ
author img

By PTI

Published : Jan 11, 2024, 11:10 AM IST

ಗಾಂಧಿನಗರ(ಗುಜರಾತ್​): ನರೇಂದ್ರ ಮೋದಿ ಭಾರತ ಕಂಡ ಅತ್ಯಂತ ಯಶಸ್ವಿ ಪ್ರಧಾನಮಂತ್ರಿ ಮತ್ತು ಈ ಪೀಳಿಗೆಯ ಶ್ರೇಷ್ಠ ಜಾಗತಿಕ ನಾಯಕ ಎಂದು ರಿಲಯನ್ಸ್​ ಇಂಡಸ್ಟ್ರೀಸ್​ನ ಮುಖ್ಯಸ್ಥ, ಬಿಲಿಯನೇರ್ ಮುಖೇಶ್ ಅಂಬಾನಿ ಬಣ್ಣಿಸಿದರು. ಬುಧವಾರ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, "ಜಾಗತಿಕ ನಾಯಕರಾದ ಮೋದಿ ಮಾತನಾಡಿದರೆ ಇಡೀ ಜಗತ್ತೇ ಕೇಳುತ್ತದೆ, ಜೊತೆಗೆ ಚಪ್ಪಾಳೆ ತಟ್ಟುತ್ತದೆ. ದೇಶದಲ್ಲಿ ಸದ್ಯಕ್ಕೆ ಧ್ವನಿಸುತ್ತಿರುವ ಒಂದು ವಾಕ್ಯವೆಂದರೆ, ಅದು ಮೋದಿ ಹೈ ತೋ ಮಮ್ಕಿನ್ ಹೈ. ಇದು ವಿದೇಶದವರೆಗೂ ವಿಸ್ತರಿಸಿದೆ" ಎಂದು ಹೇಳಿದರು.

"ವಿದೇಶದಲ್ಲಿರುವ ನನ್ನ ಸ್ನೇಹಿತರು 'ಮೋದಿ ಹೈ ತೋ ಮಮ್ಕಿನ್ ಹೈ' ಎಂದರೇನು ಅಂಥ ಕೇಳುತ್ತಾರೆ. ಅದಕ್ಕೆ ನಾನು, ಭಾರತದ ಪ್ರಧಾನಿ ಮೋದಿ ಅವರು ತಮ್ಮ ದೂರದೃಷ್ಟಿ, ಸಂಕಲ್ಪ ಮತ್ತು ಕಾರ್ಯಗತದಿಂದಾಗಿ ಅಸಾಧ್ಯಗಳೆಲ್ಲವನ್ನೂ ಸಾಧಿಸಿ ತೋರಿಸಿದ್ದಾರೆ ಎಂದಾಗ, ಇದನ್ನು ಒಪ್ಪಿದ ಅವರೇ ಮೋದಿ 'ಇದ್ದಾಗ ಎಲ್ಲವೂ ಸಾಧ್ಯ' ಎಂದು ಉದ್ಗರಿಸಿದರು" ಎಂದರು.

ಮುಂದಿನ ಪೀಳಿಗೆ ಮೋದಿಗೆ ಕೃತಜ್ಞ: "ವಿದೇಶಿಯರು ನವ ಭಾರತದ ಜೊತೆಗೆ, ಹೊಸ ಗುಜರಾತ್ ಬಗ್ಗೆಯೂ ಯೋಚಿಸುವಂತಾಗಿದೆ. ಈ ಪರಿವರ್ತನೆ ಸಾಧ್ಯವಾಗಿದ್ದು, ನರೇಂದ್ರ ಮೋದಿ ಎಂಬ ನಾಯಕನ ಕಾರಣದಿಂದ. ನಾನೂ ಹೆಮ್ಮೆಯ ಗುಜರಾತಿ. ರಿಲಯನ್ಸ್ ಕಂಪನಿಯೂ ಗುಜರಾತಿನದ್ದೇ. ಈ ಹೆಮ್ಮೆ ಮುಂದೆಯೂ ಇರುತ್ತದೆ" ಎಂದು ಅಂಬಾನಿ ಹೇಳಿದರು.

"ಮುಂದಿನ ಪೀಳಿಗೆ ರಾಷ್ಟ್ರೀಯವಾದಿ ಮತ್ತು ಅಂತಾರಾಷ್ಟ್ರೀಯವಾದಿಯಾಗಿರುವ ಮೋದಿ ಅವರಿಗೆ ಕೃತಜ್ಞರಾಗಿರುತ್ತದೆ. ವಿಕಸಿತ ಭಾರತಕ್ಕೆ ಭದ್ರ ಬುನಾದಿ ಹಾಕಲಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಕಾಲದಲ್ಲಿ ದೇಶ ಅಭಿವೃದ್ಧಿಯತ್ತ ದಾಪುಗಾಲಿಟ್ಟಿದೆ. 2047 ರ ವೇಳೆಗೆ ಭಾರತವು 35 ಟ್ರಿಲಿಯನ್ ಡಾಲರ್​ ಆರ್ಥಿಕತೆ ಹೊಂದುವುದನ್ನು ಭೂಮಿಯ ಮೇಲಿನ ಯಾವುದೇ ಶಕ್ತಿಯಿಂದ ತಡೆಯಲು ಸಾಧ್ಯವಿಲ್ಲ. ಅದರಲ್ಲಿ ಗುಜರಾತ್ ರಾಜ್ಯವೇ 3 ಟ್ರಿಲಿಯನ್ ಡಾಲರ್​ ಆರ್ಥಿಕತೆ ಪಡೆಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಕಾಸಗಳ ಕ್ರಾಂತಿ: "ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಭಾರತದ ಅಭಿವೃದ್ಧಿಗಾಗಿ ಗುಜರಾತ್‌ನ ಅಭಿವೃದ್ಧಿ ಎಂಬ ಘೋಷವಾಕ್ಯ ಹೊರಡಿಸಿದ್ದರು. ಈಗ ದೇಶದ ಪ್ರಧಾನಿಯಾಗಿ ಜಗತ್ತಿನ ಒಳಿತಿಗಾಗಿ ಭಾರತದ ಅಭಿವೃದ್ಧಿ ಎಂಬ ಕ್ರಾಂತಿಕಾರಿ ಘೋಷಣೆಯನ್ನು ಹೊರಡಿಸಿದ್ದಾರೆ. ಜಾಗತಿಕ ಒಳಿತಿನ ಜತೆಗೆ, ಭಾರತವನ್ನು ವಿಶ್ವಗುರು ಮಾಡಲು ಹೊರಟಿರುವುದು ಶ್ಲಾಘನೀಯ. ಮೋದಿ ಯುಗವು ದೇಶವನ್ನು ಸಮೃದ್ಧಿ, ಪ್ರಗತಿ ಮತ್ತು ವೈಭವದ ಕಡೆಗೆ ಕೊಂಡೊಯ್ಯುತ್ತಿದೆ" ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅಡ್ವಾಣಿ: ವಿಹೆಚ್‌ಪಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.