ETV Bharat / bharat

ಅಂಬಾನಿ ಕಾರು ಚಾಲಕರಿಗೆ ಸಿಗುವ ಮಾಸಿಕ ಸಂಬಳ ಎಷ್ಟು ಗೊತ್ತಾ? ಸಾಫ್ಟ್‌ವೇರ್ ಉದ್ಯೋಗಿಗಳಿಗೂ ಇಲ್ಲ! - ವಿಶ್ವದ ಶ್ರೀಮಂತರ ಪಟ್ಟಿ

ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಕಾರು ಚಾಲಕನಿಗೆ ಕೊಡುತ್ತಿರುವ ಮಾಸಿಕ ವೇತನ ಎಷ್ಟು ಗೊತ್ತಾ? ಈ ಬಗ್ಗೆ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ. ಸದ್ಯ ಅಂಬಾನಿ ಡ್ರೈವರ್‌ಗಳ ಸಂಬಳದ ಬಗ್ಗೆ ಜಾಲತಾಣದಲ್ಲಿ ಮೀಮ್‌ ಮತ್ತು ಜೋಕ್‌ಗಳು ಸಹ ಹರಿದಾಡುತ್ತಿವೆ.

mukesh ambani car driver salary
mukesh ambani car driver salary
author img

By

Published : Mar 4, 2023, 4:29 PM IST

ಮಹಾರಾಷ್ಟ್ರ: ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯ ಸಂಬಳ, ಸಂಪತ್ತು ಮತ್ತು ಐಷಾರಾಮಿ ಜೀವನದ ಬಗ್ಗೆ ಸುದ್ದಿಯಾಗುವುದು ಸಾಮಾನ್ಯ. ಆದರೆ, ಅವರ ಕಾರು ಚಾಲಕರ ಸಂಬಳ ಎಷ್ಟಿದೆ ಅಂತ ಸುದ್ದಿ ಕೇಳಿದ್ದೀರಾ? ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಮುಖೇಶ್ ಅಂಬಾನಿ ತಮ್ಮ ಕಾರು ಚಾಲಕನಿಗೆ ಎಷ್ಟು ಸಂಬಳ ನೀಡುತ್ತಾರೆ ಗೊತ್ತಾ? ಕೇಳಿದರೆ ಸಾಮಾನ್ಯರಿಗೆ ಅಚ್ಚರಿ ಅನ್ನಿಸಬಹುದು.

mukesh ambani car driver salary
ದೇವಸ್ಥಾನದಲ್ಲಿ ಮುಖೇಶ್ ಅಂಬಾನಿ ಕುಟುಂಬ

ಕಾರು ಚಾಲಕರಿಗೆ ಸಂಬಳದ ಜೊತೆ ವಿಶೇಷ ಭತ್ಯೆ: ಸುಮಾರು 7 ಲಕ್ಷ ಕೋಟಿ ರೂ. ಸಂಪತ್ತು ಹೊಂದಿರುವ ಅಂಬಾನಿಯು ವಿಶ್ವದ ಅತ್ಯಂತ ದುಬಾರಿ ವಸತಿ ಕಟ್ಟಡ ಆಂಟಿಲಿಯಾ ಕೂಡ ಅವರ ಸಿರಿವಂತಿಕೆಗೆ ಸಾಕ್ಷಿ. ಸದ್ಯ ಅವರು ತಮ್ಮ ಕುಟುಂಬದೊಂದಿಗೆ ಇದೇ ಕೋಟೆಯಲ್ಲಿ ವಾಸ ಮಾಡುತ್ತಾರೆ. ಕಟ್ಟಡವು ಬರೋಬ್ಬರಿ 27 ಸಂತಸ್ತು ಹೊಂದಿದ್ದು, ಇದರಲ್ಲಿ ಎಲ್ಲ ಐಷಾರಾಮಿ ಸೌಕರ್ಯವೂ ಉಂಟು. ಈ ಐಷಾರಾಮಿ ಜೀವನ ನಡೆಸುವ ಅವರು ತಮ್ಮ ಕಾರು ಚಾಲಕನಿಗೆ ಕೊಡುತ್ತಿರುವ ಮಾಸಿಕ ಸಂಬಳ ಎಷ್ಟಿರಬಹುದು ಅನ್ನೋದನ್ನು ಒಮ್ಮೆ ಊಹಿಸಿಕೊಳ್ಳಿ!

ಮಾಹಿತಿ ಪ್ರಕಾರ ಅಂಬಾನಿ ಕಾರು ಚಾಲಕನ ಮಾಸಿಕ ಸಂಬಳ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್ ಉದ್ಯೋಗಿಗಳಿಗಿಂತ ಹೆಚ್ಚು. ಅಂಬಾನಿ ಬಳಿ ಹಲವು ದುಬಾರಿ ಕಾರುಗಳಿದ್ದು ಆ ಕಾರು ಚಾಲಕರಿಗೆ ಸಂಬಳದ ಜೊತೆ ವಿಶೇಷ ಭತ್ಯೆಗಳನ್ನು ಸಹ ನೀಡಲಾಗುತ್ತದೆಯಂತೆ.

mukesh ambani car driver salary
ದೇವಸ್ಥಾನದಲ್ಲಿ ಮುಖೇಶ್ ಅಂಬಾನಿ ಕುಟುಂಬ

ಕಾರು ಚಾಲಕನ ವಿಡಿಯೋ ವೈರಲ್: ಅಂಬಾನಿ ಅವರ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿ ಸಂಬಳ ಎಂದು ಈ ವಿಡಿಯೋದಲ್ಲಿ ಅವರೇ ಬಹಿರಂಗಪಡಿಸಿದ್ದಾರೆ. ವರ್ಷಕ್ಕೆ ತಾಳೆ ಮಾಡಿ ನೋಡಿದರೆ 24 ಲಕ್ಷ ರೂ.ಗಳು. ಆದರೆ, ಇದು ಐದು ವರ್ಷಗಳ ಹಿಂದಿನ ವಿಡಿಯೋ ಎನ್ನಲಾಗುತ್ತಿದೆ. ಅವರು ಹೇಳಿದ್ದು ನಿಜವೇ ಆಗಿದ್ದರೆ ಸದ್ಯದ ಕಾರು ಚಾಲಕರ ಸಂಬಳ ಎಷ್ಟು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಹಾಗಾದರೆ, ಈ ಪ್ರಮಾಣದ ಮಾಸಿಕ ಸಂಬಳ ಪಡೆಯುವುದು ಅಷ್ಟು ಸುಲಭವೇ?

ಕಾರು ಚಾಲಕನ ಅರ್ಹತೆಗಳೇನು? ಏನು ಮಾಡಬೇಕು: ಅಂಬಾನಿ ಒಡೆತನದ ಕಾರು ಚಾಲಕರಾಗಬೇಕೆಂದರೆ ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಪರಿಣಿತರಾಗಿರಬೇಕು. ಕಾರು ಓಡಿಸುವುದೊಂದೆ ಅವರ ಕೆಲಸವಲ್ಲ. ಖಾಸಗಿ ಗುತ್ತಿಗೆ ಕಂಪನಿಯಿಂದ ಮೊದಲು ನೇಮಕವಾಗಬೇಕು. ಐಷಾರಾಮಿ ಜೀವನಶೈಲಿಗೆ ಹೊಂದಿಸಲು ಇಲ್ಲಿ ಅವರಿಗೆ ಕಠಿಣ ತರಬೇತಿ ನೀಡಲಾಗುತ್ತದೆ. ಸಾಕಷ್ಟು ಅರ್ಹತಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಎಲ್ಲ ಮಾದರಿಯ ತರಬೇತಿ ಹಾಗೂ ಪರೀಕ್ಷೆಗಳ ಬಳಿಕವೇ ಅವರ ಮನೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಬುಲೆಟ್ ಪ್ರೂಫ್ ಕಾರು: ಸುರಕ್ಷತಾ ದೃಷ್ಟಿಯಿಂದ ಅಂಬಾನಿ ಬುಲೆಟ್ ಪ್ರೂಫ್ ಕಾರುಗಳಲ್ಲೇ ಓಡಾಡುವುದು ಹೆಚ್ಚು. ಹಾಗಾಗಿ ಈ ಬಗ್ಗೆಯೂ ಕಾರು ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಪ್ರಯಾಣಿಕರ ಸುರಕ್ಷತೆಯ ಜೊತೆಗೆ ಐಷಾರಾಮಿ ಕಾರುಗಳ ಸಂಪೂರ್ಣ ಜವಾಬ್ದಾರಿ ಈತನದ್ದಾಗಿರುತ್ತದೆ. ತುಂಬಾ ಪರಿಣಿತ ಕಾರು ಚಾಲಕರನ್ನು ಒದಗಿಸುವ ಏಜೆನ್ಸಿಯನ್ನು ಸಹ ಕೆಲವು ಬಾರಿ ಗೌಪ್ಯವಾಗಿಡಲಾಗುತ್ತದೆ. ಇದರ ಜೊತೆಗೆ ಅಂಬಾನಿ ಒಡೆತನದ ಕಾರು ಚಾಲಕರ ವೈಯಕ್ತಿಕ ವಿವರಗಳನ್ನು ಸಹ ಬಹಿರಂಗಪಡಿಸುವುದಿಲ್ಲ.

ಖಾಸಗಿ ಜೆಟ್‌ ಹೊಂದಿರುವ ಅಂಬಾನಿ: ವಿಶ್ವದ ಅತ್ಯಂತ ದುಬಾರಿ ಕಾರುಗಳ ಒಡೆಯನಾರಿವ ಅಂಬಾನಿ, ಕೆಲವು ಖಾಸಗಿ ಜೆಟ್‌ ಮತ್ತು ಐಷಾರಾಮಿ ಹಡಗುಗಳನ್ನು ಸಹ ಹೊಂದಿದ್ದಾರೆ. ಕೇವಲ ಕಾರು ಚಾಲಕರಿಗೆ ಈ ಪ್ರಮಾಣದ ಮಾಸಿಕ ವೇತನ ನೀಡುವ ಅಂಬಾನಿ ಜೆಟ್‌ ಮತ್ತು ಐಷಾರಾಮಿ ಹಡಗುಗಳನ್ನು ನಡೆಸುವವರಿಗೆ ಇನ್ನೆಷ್ಟು ಕೊಡುತ್ತಿರಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಅಂಬಾನಿ ಡ್ರೈವರ್‌ಗಳ ಸಂಬಳದ ಬಗ್ಗೆ ಮೀಮ್‌ಗಳು ಮತ್ತು ಜೋಕ್‌ಗಳು ಸಹ ಹರಿದಾಡುತ್ತಿವೆ.

ಇದನ್ನೂ ಓದಿ: ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಆವೃತ್ತಿ ಬಿಡುಗಡೆ: ಒಮ್ಮೆ ಚಾರ್ಜ್‌ ಮಾಡಿ 90 ಕಿ.ಮೀ. ಪ್ರಯಾಣಿಸಿ, ಇದರ ಬೆಲೆ ಹೀಗಿದೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.