ಗುವಾಹಟಿ (ಅಸ್ಸೋಂ): ಮೊಘಲ್ ಆಡಳಿತಗಾರರು ಭಾರತಕ್ಕೆ ಒಂದು ಆಕಾರ ನೀಡಿದ್ದರು ಮತ್ತು ಹಿಂದೂಸ್ತಾನ ಎಂದು ಹೆಸರು ಕೊಟ್ಟಿದ್ದು ಅವರೇ. ಹೀಗಾಗಿಯೇ ನನಗೆ ಮೊಘಲರ ಬಗ್ಗೆ ಹೆಮ್ಮೆ ಇದೆ ಎಂದು ಅಸ್ಸೋಂನ ಬರ್ಪೇಟ್ ಕ್ಷೇತ್ರದ ಕಾಂಗ್ರೆಸ್ ಸಂಸದ ಅಬ್ದುಲ್ ಖಾಲಿಕ್ ಹೇಳಿದ್ದಾರೆ.
ಭಾರತವು ಸಣ್ಣ ಸಣ್ಣ ರಾಜ್ಯಗಳಿಂದ ವಿಂಗಡನೆಯಾಗಿತ್ತು. ಮೊಘಗರು ಹಿಂದೂಸ್ತಾನದ ಆಕಾರ ನೀಡಿದ್ದರು. ಮೊಘಲರ ಬಗ್ಗೆ ಹೆಮ್ಮೆ ಇದೆ. ಆದರೆ, ನಾನು ಮೊಘಲನಲ್ಲ. ನಾನು ಅವರ ಸಂತತಿಯೂ ಅಲ್ಲ. ಅವರು ಭಾರತಕ್ಕೆ ಒಂದು ಆಕಾರ ಮತ್ತು ಹಿಂದೂಸ್ತಾನ ಎಂದು ಹೆಸರು ಕೊಟ್ಟಿರುವುದಕ್ಕೆ ಗೌರವ ಇದೆ ಎಂದು ಅಬ್ದುಲ್ ಖಾಲಿಕ್ ತಿಳಿಸಿದ್ದಾರೆ.
ಇದೇ ವೇಳೆ 1671ರ ಸರೈಘಾಟ್ ಹೋರಾಟದಲ್ಲಿ ಮೊಘಲರನ್ನು ಅಸ್ಸೋಂನ ಅಹೋಮ್ಗಳು ಸೋಲಿಸಿರುವ ಕುರಿತಂತೆ ಕೇಳಲಾದ ಪ್ರಶ್ನೆಗೆ ಅವರು, ಅಸ್ಸೋಂ ಮೊಘಲರ ಪ್ರತ್ಯೇಕ ಸಾಮರ್ಥ್ಯದಿಂದ ದಾಳಿಗೆ ಒಳಗಾಗಿರಲಿಲ್ಲ. ಆಗ ಅವರು ಭಾರತವನ್ನು ಆಳುತ್ತಿದ್ದರು. ಅಸ್ಸೋಂ ಮೇಲೆ ದಾಳಿ ನಡೆಸಿದರು. ನಮ್ಮ ಅಹೋಮ್ ಸೇನೆಯು ಅವರನ್ನು ಪದೇ ಪದೇ ಸೋಲಿಸಿತು ಎಂದು ವಿವರಿಸಿದ್ದಾರೆ.
ಅಲ್ಲದೇ, ಒಂದು ನೆನಪಿಟ್ಟುಕೊಳ್ಳಿ. ಆಗಿನ ಕಾಲದಲ್ಲಿ ಅಸ್ಸೋಂ ಪ್ರತ್ಯೇಕವಾದ ರಾಜ್ಯವಾಗಿತ್ತು ಮತ್ತು ಭಾರತ ಬೇರೆ ರಾಷ್ಟ್ರವಾಗಿತ್ತು. ಭಾರತ ಮತ್ತು ಅಸ್ಸೋಂ ನಡುವೆ ಸಂಘರ್ಷ ಇತ್ತು. ಈಗ ಅಸ್ಸೋಂ ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗೂ ಆಗಿನ ಪರಿಸ್ಥಿತಿಗೆ ಭಿನ್ನವಾಗಿದೆ. ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 10 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇದರಲ್ಲಿ ಏಳು ಕ್ಷೇತ್ರಗಳು ಅಹೋಮ್ ಸಂಸ್ಥಾನಕ್ಕೆ ಒಳಪಟ್ಟಿದ್ದವು ಮತ್ತು ಉಳಿದ ಕ್ಷೇತ್ರಗಳು ಬೇರೆ ಸಂಸ್ಥಾನಗಳಿಗೆ ಒಳಪಟ್ಟಿದ್ದವು ಎಂದು ಸಂಸದ ಅಬ್ದುಲ್ ಖಾಲಿಕ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಸ್ಪರ್ಧೆ ಸಾಧ್ಯತೆ.. ಭಿನ್ನಮತೀಯ ನಾಯಕನಿಗೆ ಸಿಗುತ್ತಾ ಚಾನ್ಸ್