ETV Bharat / bharat

'ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮ್ಯೂಕೋರ್ಮೈಕೋಸಿಸ್​ಗೆ ಚಿಕಿತ್ಸೆ ನೀಡಬೇಕು' - government guidelines for Mucormycosis treatment

ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರವು ವೈದ್ಯರನ್ನು ಒತ್ತಾಯಿಸಬಹುದು ಮತ್ತು ಫಾರ್ಮಸಿ ಕಂಪನಿಗಳಿಗೆ ಔಷಧಿಗಳ ಉತ್ಪಾದನೆಯನ್ನು ಹೆಚ್ಚಿಸಲು ಆದೇಶಿಸಬಹುದು ಎಂದು ವೈದ್ಯ ಡಾ.ಪ್ರವೀಣ್ ಗರ್ಗ್ ಹೇಳಿದರು.

black fungus treatment
ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮ್ಯೂಕೋರ್ಮೈಕೋಸಿಸ್​ಗೆ ಚಿಕಿತ್ಸೆ
author img

By

Published : May 23, 2021, 1:02 PM IST

ಅಹಮದಾಬಾದ್: ಮಾರಕ ಕೋವಿಡ್‌ನ ಎರಡನೇ ತರಂಗವು ದೇಶದಲ್ಲಿ ಹಾನಿ ಉಂಟುಮಾಡುತ್ತಲೇ, ಮ್ಯೂಕೋರ್ಮೈಕೋಸಿಸ್ ಹರಡುವಿಕೆಯು ಬಿಕ್ಕಟ್ಟನ್ನು ಉಲ್ಬಣಗೊಳಿಸಿದೆ. ಈ ರೋಗವು ಕೋವಿಡ್ ರೋಗಿಗಳಲ್ಲಿ ವರದಿಯಾಗಿರುವುದರಿಂದ ಹೆಚ್ಚು ಅಪಾಯಕಾರಿಯಾಗಿದೆ.

ಈ ಬಗ್ಗೆ ಈಟಿವಿ ಭಾರತದ ಜತೆ ಮಾತನಾಡಿದ ವೈದ್ಯ ಡಾ.ಪ್ರವೀಣ್ ಗರ್ಗ್ ಅವರು, ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಿ ರೋಗಿಗಳಿಗೆ ಚಿಕಿತ್ಸೆ ನೀಡುವುದು, ಚಿಕಿತ್ಸೆಗಾಗಿ ಔಷಧಿಗಳನ್ನು ಕಾಳಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಆದ್ಯತೆ ನೀಡಬೇಕು ಎಂದರು.

ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರವು ವೈದ್ಯರನ್ನು ಒತ್ತಾಯಿಸಬಹುದು ಮತ್ತು ಫಾರ್ಮಸಿ ಕಂಪನಿಗಳಿಗೆ ಔಷಧಿಗಳ ಉತ್ಪಾದನೆಯನ್ನು ಹೆಚ್ಚಿಸಲು ಆದೇಶಿಸಬಹುದು ಎಂದು ಅವರು ಹೇಳಿದರು.

ಪರೀಕ್ಷೆ, ಔಷಧಿಗಳು ಮತ್ತು ರೋಗದ ಚಿಕಿತ್ಸೆಗಾಗಿ ಜನರು ಅತಿಯಾದ ಬೆಲೆ ತೆರುವ ಸಾಧ್ಯತೆಯಿದೆ. ಇದರ ಹಿನ್ನೆಲೆಯಲ್ಲಿ ಸರ್ಕಾರ ಪರೀಕ್ಷೆಗಳು, ಔಷಧಿಗಳು ಮತ್ತು ಸಲಕರಣೆಗಳ ಬೆಲೆಯನ್ನು ನಿಗದಿಪಡಿಸಬೇಕು ಎಂದರು.

ಮ್ಯೂಕೋರ್ಮೈಕೋಸಿಸ್ ಪ್ರಕರಣಗಳ ಸಂಖ್ಯೆಯು ಕಳೆದ ಹದಿನೈದು ದಿನಗಳಲ್ಲಿ ಹೆಚ್ಚಾಗಿದೆ. ಕೆಮ್ಮು-ಶೀತ, ಮೂಗು ಸೋರುವುದು, ಕಣ್ಣುಗಳಲ್ಲಿ ಊತ, ತಲೆನೋವು ಮತ್ತು ಕೆನ್ನೆಯ ಮೇಲೆ ಊತ ಇರುವುದು ರೋಗದ ಲಕ್ಷಣಗಳಾಗಿವೆ. ಸಮಯೋಚಿತ ವೈದ್ಯಕೀಯ ಚಿಕಿತ್ಸೆ ಶಿಲೀಂಧ್ರವು ಮೂಗು, ದವಡೆ ಮತ್ತು ಮೆದುಳಿಗೆ ಹರಡುವುದನ್ನು ತಡೆಯುತ್ತದೆ ಎಂದು ಹೇಳಿದರು.

ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಹರಿಯಾಣ ಕೂಡ ಮ್ಯೂಕೋರ್ಮೈಕೋಸಿಸ್ ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿವೆ ಎಂಬುದನ್ನು ಸಹ ಗಮನಿಸಬೇಕು. 1897 ರ ಸಾಂಕ್ರಾಮಿಕ ಕಾಯ್ದೆಯಡಿ ಮ್ಯೂಕೋರ್ಮೈಕೋಸಿಸ್ ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.