ETV Bharat / bharat

MSRTC Bus: ಭಾಗಶಃ ಹಾನಿಯಾದ ಮೇಲ್ಛಾವಣಿಯಲ್ಲೇ ಮಹಾರಾಷ್ಟ್ರ ಸಾರಿಗೆ ಬಸ್​ ಸಂಚಾರ: ಪ್ರಕರಣ ದಾಖಲು - ಸಾಮಾಜಿಕ ಜಾಲತಾಣದಲ್ಲಿ ವೈರಲ್

MSRTC bus with partially broken rooftop: ಮೇಲ್ಛಾವಣಿ ಭಾಗಶಃ ಹಾನಿಯಾಗಿದ್ದರೂ ಸಂಚಾರ ನಡೆಸಿದ ಮಹಾರಾಷ್ಟ್ರ ಸಾರಿಗೆ ಬಸ್ ಸಿಬ್ಬಂದಿಯ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.​

Etv Bharat
Etv Bharat
author img

By

Published : Jul 27, 2023, 10:22 AM IST

Updated : Jul 27, 2023, 10:43 AM IST

ಭಾಗಶಃ ಹಾನಿಯಾದ ಮೇಲ್ಛಾವಣಿಯಲ್ಲೇ ಮಹಾರಾಷ್ಟ್ರ ಸಾರಿಗೆ ಬಸ್​ ಸಂಚಾರ

ಮುಂಬೈ (ಮಹಾರಾಷ್ಟ್ರ) : ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆಯ (ಎಂಎಸ್‌ಆರ್‌ಟಿಸಿ) ಬಸ್ಸೊಂದು ಭಾಗಶಃ ಹಾನಿಯಾಗಿರುವ ಮೇಲ್ಛಾವಣಿಯಲ್ಲೇ ಸಂಚಾರ ನಡೆಸುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳು ಸೂಚಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಬಸ್ಸಿನ ಮೇಲ್ಛಾವಣಿ ಭಾಗಶಃ ಹಾನಿಯಾಗಿದೆ. ಇದು ಬಸ್​ ಸಂಚರಿಸುವಾಗ ಗಾಳಿಗೆ ಅಲುಗಾಡುತ್ತಿದೆ. ಈ ದೃಶ್ಯವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ತನಿಖೆಗೆ ಆದೇಶಿಸಿದ್ದಾರೆ. ಇದು​ ಮಹಾರಾಷ್ಟ್ರದ ಗಡ್ಚಿರೋಲಿ-ಅಹೇರಿ ನಡುವೆ ಸಂಚರಿಸುವ ಬಸ್​ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಂಎಸ್‌ಆರ್‌ಟಿಸಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶೇಖರ್ ಚನ್ನೆ, "ಇದು​​ ಅಹೇರಿ ಡಿಪೋಗೆ ಸೇರಿದ ಬಸ್​. ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.

"ಮೆಕ್ಯಾನಿಕಲ್​ ಇಂಜಿನಿಯರ್​​ ವಿಭಾಗದ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಬಸ್​ ಗಡ್ಚಿರೋಲಿ ಮತ್ತು ಅಹೇರಿ ನಡುವೆ ಸಂಚರಿಸುತ್ತದೆ. ಮೇಲ್ಛಾವಣಿ ಪೂರ್ತಿಯಾಗಿ ಹೊರಬಂದಿಲ್ಲ. ಚಾಲಕನ ಕ್ಯಾಬಿನ್​ ಮೇಲಿರುವ ಫೈಬರ್​ ಛಾವಣಿ ಮಾತ್ರ ಕಿತ್ತುಕೊಂಡು ಬಂದಿದೆ. ಇದು ಗಾಳಿಯ ರಭಸಕ್ಕೆ ಹಾರಾಡುತ್ತಿತ್ತು" ಎಂದು ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಸ್ಸಿನ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಬಸ್ಸಿನ ಮೇಲ್ಛಾವಣಿ ಹಾನಿಯಾಗಿರುವುದು ಗೊತ್ತಾಗಿಲ್ಲ. ಯಾಕೆಂದರೆ ಮೇಲ್ಛಾವಣಿಯ ಹಲವು ಪದರಗಳಲ್ಲಿ ಫೈಬರ್​ ಮಾತ್ರ ಕಿತ್ತು ಬಂದಿತ್ತು. ಆದರೆ ಅಲ್ಯುಮಿನಿಯಂನ ಪದರ ಹಾಗಿಯೇ ಇತ್ತು ಎಂದು ಹೇಳಿದ್ದಾರೆ. ಬಸ್​ ಸಂಚರಿಸುತ್ತಿರುವುದನ್ನು ಇನ್ನೊಂದು ವಾಹನದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಈ ವೇಳೆ ಬಸ್​ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಎಂಆರ್​ಟಿಸಿ ಯೂನಿಯನ್​ ಮುಖಂಡರೊಬ್ಬರು ಮಾತನಾಡಿ, "ಕೋವಿಡ್​ ಬಳಿಕ ರಾಜ್ಯ ಸಾರಿಗೆ ಬಸ್​ಗಳ ಸ್ಥಿತಿ ಹದಗೆಟ್ಟಿದೆ. ಕಳಪೆ ನಿರ್ವಹಣೆಯಿಂದಾಗಿ ಬಸ್​ಗಳು ಹಾಳಾಗಿವೆ. ಇದರಿಂದಾಗಿ ಬಸ್​ನಲ್ಲಿ ಸೋರಿಕೆ ಉಂಟಾಗಿ ಪ್ರಯಾಣಿಕರು ಕಷ್ಟ ಅನುಭವಿಸುವಂತಾಗಿದೆ" ಎಂದರು.

ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯು ದೇಶದಲ್ಲೇ ಅತಿದೊಡ್ಡ ಸಾರಿಗೆ ಸಂಸ್ಥೆಗಳಲ್ಲಿ ಒಂದು. ಇದು ಒಟ್ಟು 15 ಸಾವಿರಕ್ಕೂ ಅಧಿಕ ಬಸ್​ಗಳನ್ನು ಹೊಂದಿದೆ. ಸುಮಾರು 60 ಲಕ್ಷಕ್ಕೂ ಅಧಿಕ ಮಂದಿಯನ್ನು ಪ್ರತಿದಿನ ಹೊತ್ತು ಸಾಗುತ್ತದೆ.

ಇದನ್ನೂ ಓದಿ : Vande Bharat train: ಆಗ್ರಾದಲ್ಲಿ ವಂದೇ ಭಾರತ್​ ರೈಲಿ​ಗೆ ಕಲ್ಲೆಸೆದ ಕಿಡಿಗೇಡಿಗಳು, ಕಿಟಕಿ ಗಾಜುಗಳಿಗೆ ಹಾನಿ

Last Updated : Jul 27, 2023, 10:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.