ETV Bharat / bharat

ಕೋವಿಡ್​ನಿಂದ ಗಂಡನ ಸಾವು, ಆತ್ಮಹತ್ಯೆಗೆ ಶರಣಾದ ಹೆಂಡತಿ - ಗಂಡನಿಗೆ ಕೋವಿಡ್, ಪತ್ನಿ ಆತ್ಮಹತ್ಯೆ

ಕೋವಿಡ್​ ಸೋಂಕಿನಿಂದಾಗಿ ಗಂಡ ಸಾವನ್ನಪ್ಪಿದ್ದು, ಇದರಿಂದ ಖಿನ್ನತೆಗೊಳಗಾದ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Wife Death
Wife Death
author img

By

Published : May 9, 2021, 2:54 PM IST

ಇಂದೋರ್​​(ಮಧ್ಯಪ್ರದೇಶ): ಗಂಡ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದರಿಂದ ಖಿನ್ನತೆಗೊಳಗಾಗಿದ್ದ ಹೆಂಡ್ತಿ, ಆಸ್ಪತ್ರೆ ಬಿಲ್ಡಿಂಗ್​ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಧ್ಯಪ್ರದೇಶದ ಇಂದೋರ್​ನಲ್ಲಿ ಈ ಘಟನೆ ನಡೆದಿದೆ.

ಕೋವಿಡ್​ ಸೋಂಕಿಗೊಳಗಾಗಿದ್ದ ಕಾರಣ ಗಂಡನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದಲೇ ಆತ ಸಾವನ್ನಪ್ಪಿದ್ದಾನೆ. ಇದರಿಂದ ಖಿನ್ನತೆಗೊಳಗಾದ ಹೆಂಡತಿ ಖುಸ್ಬೂ ಆಸ್ಪತ್ರೆಯ 9ನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಸಬ್​ ಇನ್ಸ್​ಪೆಕ್ಟರ್​ ದೇವಿ ದಯಾಲ್​, ಗಂಡ ಕೋವಿಡ್​ನಿಂದ ಸಾವನ್ನಪ್ಪಿರುವ ಸುದ್ದಿ ಕೇಳಿ ಶಾಕ್​ಗೊಳಗಾಗಿರುವ ಮಹಿಳೆ ಈ ನಿರ್ಧಾರ ಕೈಗೊಂಡಿದ್ದಾಳೆ. ಆಸ್ಪತ್ರೆ ಆಡಳಿತ ಮಂಡಳಿ ಇದಕ್ಕೆ ಸಂಬಂಧಿಸಿದಂತೆ ಫೋನ್ ಮಾಡಿ ವಿಷಯ ತಿಳಿಸಿದೆ ಎಂದಿದ್ದಾರೆ.

ಖುಸ್ಬೂ ಗಂಡ ರಾಹುಲ್​ಗೆ ಕಳೆದ ಕೆಲ ದಿನಗಳ ಹಿಂದೆ ಕೋವಿಡ್ ದೃಢಗೊಂಡಿತ್ತು. ಹೀಗಾಗಿ ಅವರನ್ನ ಇಂದೋರ್​ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಸಾವನ್ನಪ್ಪಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.