ಮಧ್ಯಪ್ರದೇಶದ: ಸಿಧಿ ಮೂತ್ರ ವಿಸರ್ಜನೆ ಪ್ರಕರಣದ ಆರೋಪಿ ಪ್ರವೇಶ್ ಶುಕ್ಲಾ ಅವರ ನಿವಾಸವನ್ನು ರಾಜ್ಯ ಸರ್ಕಾರದ ಆದೇಶದ ಮೇರೆಗೆ ಧ್ವಂಸಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಮಂಗಳವಾರ ವ್ಯಕ್ತಿಯೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಆರೋಪಿಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
-
Sidhi Urination Case: Home of accused razed, kin claims old video circulated as elections close
— ANI Digital (@ani_digital) July 5, 2023 " class="align-text-top noRightClick twitterSection" data="
Read @ANI Story | https://t.co/I6nWpP2hfl#MadhyaPradesh #Sidhi #UrinationCase #NSA #bulldozer pic.twitter.com/2zxx7hhsSJ
">Sidhi Urination Case: Home of accused razed, kin claims old video circulated as elections close
— ANI Digital (@ani_digital) July 5, 2023
Read @ANI Story | https://t.co/I6nWpP2hfl#MadhyaPradesh #Sidhi #UrinationCase #NSA #bulldozer pic.twitter.com/2zxx7hhsSJSidhi Urination Case: Home of accused razed, kin claims old video circulated as elections close
— ANI Digital (@ani_digital) July 5, 2023
Read @ANI Story | https://t.co/I6nWpP2hfl#MadhyaPradesh #Sidhi #UrinationCase #NSA #bulldozer pic.twitter.com/2zxx7hhsSJ
ಮನೆ ಧ್ವಂಸದ ಬಗ್ಗೆ ಆರೋಪಿ ಮನೆಯವರು ಹೇಳಿದ್ದೇನು?: ಅಧಿಕಾರಿಗಳು ಬುಲ್ಡೋಜರ್‌ನೊಂದಿಗೆ ಆರೋಪಿಯ ಮನೆಗೆ ಆಗಮಿಸುತ್ತಿದ್ದಂತೆ, ಅವರ ಕುಟುಂಬ ಸದಸ್ಯರು ಅವರನ್ನು ಬಂಧಿಸಿದ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಚುನಾವಣೆ ಹತ್ತಿರವಾಗಿರುವುದರಿಂದ ಈ ವಿಚಾರವನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇದು ರಾಜಕೀಯ ಮತ್ತು ಚುನಾವಣಾ ಕಾರಣಗಳಿಗಾಗಿ ಪ್ರಸಾರ ಮಾಡಲಾದ ಹಳೆಯ ವಿಡಿಯೋ" ಎಂದು ಬಂಧಿತ ಆರೋಪಿಯ ಸಹೋದರಿ ರಾಷ್ಟ್ರೀಯ ಸುದ್ಧಿ ಮಾಧ್ಯಮಕ್ಕೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶುಕ್ಲಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಪ್ರಸ್ತುತ ರೇವಾ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ. ಇದಕ್ಕೂ ಮುನ್ನ ಆತನ ತಂದೆ, ‘ನನ್ನ ಮಗ ಈ ಕೃತ್ಯ ಎಸಗಲು ಸಾಧ್ಯವೇ ಇಲ್ಲ, ಆತನನ್ನು ಜೈಲಿನ ಕಂಬಿ ಹಿಂದೆ ಕಳುಹಿಸುವ ಸಂಚು ಇದಾಗಿದೆ, ವಿಡಿಯೋ ನೋಡಿ ನಮಗೂ ತುಂಬಾ ನೋವಾಗಿದೆ’ ಎಂದು ಹೇಳಿದ್ದರು.
-
#WATCH | Sidhi viral video | Accused Pravesh Shukla's illegal encroachment being bulldozed by the Administration. He was arrested last night.#MadhyaPradesh pic.twitter.com/kBMUuLtrjK
— ANI MP/CG/Rajasthan (@ANI_MP_CG_RJ) July 5, 2023 " class="align-text-top noRightClick twitterSection" data="
">#WATCH | Sidhi viral video | Accused Pravesh Shukla's illegal encroachment being bulldozed by the Administration. He was arrested last night.#MadhyaPradesh pic.twitter.com/kBMUuLtrjK
— ANI MP/CG/Rajasthan (@ANI_MP_CG_RJ) July 5, 2023#WATCH | Sidhi viral video | Accused Pravesh Shukla's illegal encroachment being bulldozed by the Administration. He was arrested last night.#MadhyaPradesh pic.twitter.com/kBMUuLtrjK
— ANI MP/CG/Rajasthan (@ANI_MP_CG_RJ) July 5, 2023
ಪ್ರಕರಣದ ವಿಚಾರಣೆ ತೀವ್ರಗೊಳಿಸಿದ ಪೊಲೀಸರು: 'ಆರೋಪಿ ಪ್ರವೇಶ್ ಶುಕ್ಲಾನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು' ಎಂದು ಸಿದ್ದಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಂಜುಲತಾ ಪಟ್ಲೆ ತಿಳಿಸಿದ್ದಾರೆ. ಈಗಾಗಲೇ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ 294, 504, ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗೆ ಶಿಕ್ಷೆ ನೀಡುವುದು ಎಲ್ಲರಿಗೂ ನೈತಿಕ ಪಾಠವಾಗಲಿದೆ: ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆಯ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ರಾಜ್ಯ ಸರ್ಕಾರ ಆರೋಪಿಯನ್ನು ಬಿಡುವುದಿಲ್ಲ ಮತ್ತು ಅವರಿಗೆ ಶಿಕ್ಷೆ ನೀಡುವುದು ಎಲ್ಲರಿಗೂ ನೈತಿಕ ಪಾಠವಾಗಲಿದೆ ಎಂದು ಸಿಎಂ ಚೌಹಾಣ್ ಹೇಳಿದ್ದಾರೆ. ಜಿಲ್ಲೆಯ ಕುಬ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು: ಆರೋಪಿಯು ಕುಡಿದು ಆದಿವಾಸಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ವರದಿಯಾಗಿತ್ತು. ಆರೋಪಿ ಪ್ರವೇಶ್ ಶುಕ್ಲಾ ಕುಬ್ರಿ ಗ್ರಾಮದ ನಿವಾಸಿ. ಈ ಘಟನೆ ನಾಚಿಕೆಗೇಡಿನ ಸಂಗತಿಯಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಸಂತ್ರಸ್ತ ಜಿಲ್ಲೆಯ ಕರೌಂಡಿ ಗ್ರಾಮದ ನಿವಾಸಿ: ಸಿದ್ದಿಯ ಕುಬರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದ್ಯದ ಅಮಲಿನಲ್ಲಿ ಆರೋಪಿ ಆದಿವಾಸಿ ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ದೃಶ್ಯ ವೈರಲ್ ಆಗಿತ್ತು. ಆರೋಪಿಯನ್ನು ಕುಬರಿ ಗ್ರಾಮದ ನಿವಾಸಿ ಪ್ರವೇಶ್ ಶುಕ್ಲಾ ಎಂದು ಗುರುತಿಸಲಾಗಿದ್ದು, ಸಂತ್ರಸ್ತ ಜಿಲ್ಲೆಯ ಕರೌಂಡಿ ಗ್ರಾಮದ ನಿವಾಸಿ ಎಂಬುದು ತಿಳಿದುಬಂದಿದೆ.
ಶುಕ್ಲಾ ವಿರುದ್ಧ ಬುಲ್ಡೋಜರ್ ಕ್ರಮ ಕೈಗೊಳ್ಳಬಹುದೇ?: ವಾಸ್ತವವಾಗಿ ಸಿಎಂ ಶಿವರಾಜ್ ಇಂತಹ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ವರ್ತನೆ ತೋರಿಸಿದ್ದಾರೆ. ಇಂತಹ ಕೆಲ ಪ್ರಕರಣಗಳಲ್ಲಿ ಸಡಿಲಿಕೆ ನೀಡಿದರೂ ಆರೋಪಿಗಳ ಮನೆಗೆ ಬುಲ್ಡೋಜರ್ ಕ್ರಮ ಕೈಗೊಳ್ಳುವುದು ಹೆಚ್ಚಾಗಿ ಕಂಡು ಬಂದಿತ್ತು. ಸದ್ಯ ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಹೊತ್ತಿರುವ ಪ್ರವೇಶ್ ಶುಕ್ಲಾ ವಿರುದ್ಧ ಬುಲ್ಡೋಜರ್ ಕ್ರಮ ಕೈಗೊಳ್ಳಬಹುದೇ ?’ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಎತ್ತಿತ್ತು.
ಇದನ್ನೂ ಓದಿ: ಬುಡಕಟ್ಟು ಜನಾಂಗದ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಟ್ವಿಸ್ಟ್!