ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನೆ ಮುಂದೆ ಹನುಮಾನ್ ಚಾಲೀಸಾ ಪಠಿಸುವ ಸವಾಲು ಹಾಕಿದ್ದ ಶಾಸಕ ರವಿ ರಾಣಾ ಹಾಗೂ ಅವರ ಪತ್ನಿ ಅಮರಾವತಿ ಸಂಸದೆ ನವನೀತ್ ಕೌರ್ ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ನೀವೂ ಹನುಮಾನ್ ಚಾಲೀಸಾ ಪಠಿಸಬೇಕು. ಇಲ್ಲ ನಾವೇ ನಿಮ್ಮ ಮನೆ ಮುಂದೆ ಹನುಮಾನ್ ಚಾಲೀಸಾ ಪಠಣ ಮಾಡುತ್ತೇವೆಂದು ಕಳೆದ ಕೆಲ ದಿನಗಳ ಹಿಂದೆ ನವನೀತ್-ರಾಣಾ ದಂಪತಿ ಸಿಎಂಗೆ ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಮುಂಬೈಗೆ ಸಹ ಆಗಮಿಸಿದ್ದರು. ಆದರೆ, ಇಂದು ತಮ್ಮ ನಿರ್ಧಾರ ರದ್ಧು ಮಾಡುತ್ತಿರುವುದಾಗಿ ಅವರು ಕೆಲ ಗಂಟೆಗಳ ಹಿಂದೆ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಇದನ್ನೂ ಓದಿ: ನೇಮಕಾತಿ ಆದೇಶ ಕೈ ಸೇರುವ ಮುನ್ನವೇ ಪಿಎಸ್ಐ ಡ್ರೆಸ್ನಲ್ಲಿ ವೇದಿಕೆ ಮೇಲೆ ಪ್ರತ್ಯಕ್ಷ!
ಇವರ ವಿರುದ್ಧ ಐಪಿಸಿ ಸೆಕ್ಷನ್ 153A (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ) ಅಡಿ ಪ್ರಕರಣ ದಾಖಲು ಮಾಡಲಾಗಿದೆ. ನಾಳೆ ಮುಂಬೈಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಕಾರಣ ತಾವು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸದೆ ನವನೀತ್ ಕೌರ್ ಹಾಗೂ ಶಾಸಕ ರಾಣಾ ತಿಳಿಸಿದ್ದರು. ಹನುಮಾನ್ ಚಾಲೀಸಾ ಪಠಣೆ ಮಾಡುವುದಾಗಿ ಘೋಷಣೆ ಮಾಡಿದ್ದರಿಂದ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಶಿವಸೇನಾ ಕಾರ್ಯಕರ್ತರು ಸಿಎಂ ಮಾತೋಶ್ರೀ ನಿವಾಸದ ಎದುರು ಜಮಾವಣೆಗೊಂಡಿದ್ದರು.